'ಅಂತರಪಟ' ಧಾರಾವಾಹಿಯ ನಾಯಕ ನಟ ಯಾರು? ಆತನ ಹಿನ್ನಲೆ ಏನು?
ಕಲರ್ಸ್ ಕನ್ನಡ 'ಅಂತರಪಟ' ಧಾರಾವಾಹಿಯ ಮೊದಲ ಪ್ರೋಮೋವನ್ನು ಈಗಾಗಲೇ ಎಲ್ಲರೂ ನೋಡಿದ್ದೀರಾ. ಮಲ ತಂದೆಯ ನೆರಳಲ್ಲಿ ಬೆಳೆಯುವ ಹುಡುಗಿಯ ಕಥೆಯೇ ಅಂತರಪಟ. ಹೆತ್ತ ತಂದೆಯ ಕನಸು ಹಾಗೂ ಮಲ ತಂದೆಯ ಸಾಲವನ್ನು ಹೊತ್ತು ಜೀವನದಲ್ಲಿ ಸಾಧನೆಯನ್ನು ಮಾಡಲು ಮುಂದಾಗುವ ಆರಾಧನಾಳ ಕಥೆಯನ್ನು ಧಾರಾವಾಹಿಯಲ್ಲಿ ನೋಡಬಹುದಾಗಿದೆ.
ಆರಾಧನಾ ಬದುಕಲ್ಲಿ ತಂದೆಯಷ್ಟೇ ಅಲ್ಲದೇ, ಪ್ರೀತಿಯ ಹುಡುಗನೂ ಕಾಣಿಸಿಕೊಳ್ಳಲಿದ್ದಾನೆ. ಹಾಗಾದರೆ ಈ ಧಾರಾವಾಹಿಯ ನಾಯಕ ನಟ ಯಾರು ಎಂದು ಕೇಳುತ್ತಿದ್ದಾರೆ. 'ಅಂತರ ಪಟ' ಧಾರಾವಾಹಿಯಲ್ಲಿ ನಾಯಕಿಯೂ ಹೊಸಬರಾಗಿದ್ದು, ನಾಯಕ ಪಾತ್ರವನ್ನು ಕೂಡ ಹೊಸಬರೇ ನಿರ್ವಹಿಸಲಿದ್ದಾರೆ. ನೇಹಾ ಪತಿ ಚಂದನ್ ಗೌಡ ಅವರು ಅಂತರಪಟ ಧಾರಾವಾಹಿಯ ನಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಧಾರಾವಾಹಿಯ ಎರಡನೇ ಪ್ರೋಮೋ ರಿಲೀಸ್ ಆಗಿಲ್ಲ. ಇದರಲ್ಲಿ ನಾಯಕನನ್ನು ತೋರಿಸಲಿದೆ ವಾಹಿನಿ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ 'ಅಂತರಪಟ' ಎರಡನೇ ಪ್ರೋಮೋ ರಿಲೀಸ್ ಆಗಲಿದೆ. ಚಂದನ್ ಅವರು ಈಗಾಗಲೇ ನೇಹಾ ಅವರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಿದ್ದ 'ರಾಜಾ-ರಾಣಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಇದೀಗ ಚಂದನ್ ಗೌಡ ಅವರು ನಟನೆಯತ್ತ ಮುಖ ಮಾಡಿದ್ದಾರೆ.
ಫೆಬ್ರವರಿ 18, 2018ರಂದು ನೇಹಾ ಗೌಡ ಮದುವೆಯಾದರು. ಬೆಂಗಳೂರಿನಲ್ಲಿ ಚಂದನ್ ಜೊತೆ ಸಪ್ತಪದಿ ತುಳಿದ ನೇಹಾ ಗೌಡ ಅವರ ಮದುವೆಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಚಂದನ್ ಹಾಗೂ ನೇಹಾ ಬಾಲ್ಯದ ಸ್ನೇಹಿತರು. ಇಬ್ಬರು ಪ್ರೀತಿಸಿ, ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ. ಪ್ರಿಕೆಜಿಯಲ್ಲಿದ್ದಾಗ ಚಂದನ್ ನನ್ನ ಶತ್ರು ಆಗಿದ್ದ ಎಂದು ಅವರೇ ಹೇಳಿಕೊಂಡಿದ್ದರು, ಆಮೇಲೆ ಗೆಳೆಯನಾಗಿ ಕ್ರಶ್ ಆಗಿ, ಲವ್ವರ್ ಆಗಿ ಈಗ ಗಂಡನಾಗಿದ್ದಾನೆ ಎಂದು ಹೇಳಿದ್ದಾರೆ.
ಇನ್ನು ಚಂದನ್ ಸದ್ಯ 'ಡ್ಯಾನ್ಸಿಂಗ್ ಚಾಂಪಿಯನ್' ಶೋನಲ್ಲಿ ಸ್ಫರ್ಧಿಯಾಗಿದ್ದು, ಮೇಕಪ್ ಹಾಗೂ ಡ್ರೆಸ್ಸಿಂಗ್ ವಿಚಾರದಲ್ಲಿ ತುಂಬಾನೇ ಪರ್ಫೆಕ್ಟ್ ಎಂದು ನೇಹಾ ಅವರೇ ಹೇಳಿದ್ದಾರೆ. ಇನ್ನು 'ಅಂತರಪಟ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಮಂಡ್ಯ ಮೂಲದ ಹೊಸ ಕಲಾವಿದೆ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಆರಾಧನಾ ಎಂಬ ಪಾತ್ರಧಾರಿಯ ನಿಜವಾದ ತನ್ವಿಯ ಬಾಲರಾಜ್. ಈ ಧಾರಾವಾಹಿಯಲ್ಲಿ ನಟಿ ಜ್ಯೋತಿ ಕಿರಣ್, ನಟ ಮಂಜು ಪಾವಗಡ ನಟಿಸಿದ್ದಾರೆ.

'ನಮ್ಮನೆ ಯುವರಾಣಿ' ಹಾಗೂ 'ಸಿಲ್ಲಿ ಲಲ್ಲಿ' ಖ್ಯಾತಿಯ ನಟಿ ಜ್ಯೋತಿ ಕಿರಣ್ 'ಅಂತರಪಟ' ಧಾರಾವಾಹಿಯ ನಾಯಕಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಮಜಾ ಭಾರತ' ಕಾಮಿಡಿ ಶೋ ಕಾರ್ಯಕ್ರಮದಿಂದ ಪ್ರಸಿದ್ಧಿಯಾದವರೇ ಮಂಜು ಪಾವಗಡ. ಬಳಿಕ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಭಾಗವಹಿಸಿ, ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿದಿದ್ದರು.
ಧಾರಾವಾಹಿಯ ನಾಯಕಿ ತನ್ನ ಅಪ್ಪನ ಕನಸನ್ನು ನನಸು ಮಾಡಲು ಮುಂದಾಗಿದ್ದಾಳೆ. ಕಾರಣಾಂತರಗಳಿಂದ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ನಾಯಕಿ ಮಲ-ತಂದೆಯ ನೆರಳಲ್ಲಿ ಬೆಳೆಯುತ್ತಾಳೆ. ನಾಯಕಿಯ ತಾಯಿ ಬೇರೆ ಮದುವೆಯನ್ನು ಆಗಿರುತ್ತಾಳೆ. ಆತ ನಾಯಕಿಯನ್ನು ಮಗಳಿನಂತೆ ಎಂದೂ ನೋಡಿಕೊಳ್ಳುವುದಿಲ್ಲ. ನಿತ್ಯ ಕುಡಿದು ಸಾಲ ಮಾಡಿ ನಾಯಕಿಯ ತಲೆ ಮೇಲೆ ಎಲ್ಲಾ ಹೊರೆಯನ್ನು ಹೊರಿಸಿರುತ್ತಾನೆ.
ಹೆತ್ತ ತಂದೆಯ ಕನಸಿನ ಜೊತೆಗೆ ಸಾಕು ತಂದೆಯ ಸಾಲವನ್ನು ಹೊತ್ತ ನಾಯಕಿ ಸ್ವಂತ ಉದ್ಯಮವನ್ನು ಶುರು ಮಾಡಿ ನೂರಾರು ಜನರ ಬಾಳಲ್ಲಿ ಬೆಳಕಾಗುವುದೇ ಅವಳ ಗುರಿಯಾಗಿರುತ್ತದೆ.


Click it and Unblock the Notifications











