ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್: ಕಿರುತೆರೆ ನಟಿ ಅನು ಜನಾರ್ಧನ್ ಬೇಸರ

By ಅನಿತಾ ಬನಾರಿ

ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅದೆಷ್ಟು ಪಾಪುಲಾರಿಟಿ ಪಡೆಯುತ್ತಿದೆ ಎಂಬುದಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಅದರಿಂದ ಜನರಿಗೆ ಎಷ್ಟೆಲ್ಲ ಮಾಹಿತಿಗಳು ಲಭ್ಯವಾಗುತ್ತಿದೆಯೋ ಅದರ ಜೊತೆಜೊತೆಗೆ ಮಾಹಿತಿಯನ್ನು ನೀಡುವವರು ಬಹಳಷ್ಟು ನೆಗೆಟಿವ್ ವಿಚಾರಗಳನ್ನು ಎದುರಿಸುವ ಸಂದರ್ಭದಲ್ಲಿ ಎದುರಾಗುತ್ತಿವೆ.

ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಅನು ಜನಾರ್ದನ್ ಕೂಡಾ ಇಂತಹ ಕಷ್ಟದ ಸಮಯವನ್ನು ತಮ್ಮ ಜೀವನದಲ್ಲಿ ಎದುರಿಸಿದ್ದಾರೆ. ಕನ್ನಡದ ಧಾರಾವಾಹಿಗಳಲ್ಲಿ ವಿಲನ್ ಪಾತ್ರವನ್ನು ಮಾಡುವುದರ ಮೂಲಕ ಜನಪ್ರಿಯತೆ ಪಡೆದಿರುವ ಅನು ಜನಾರ್ಧನ್ ನಟಿಯಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಕೂಡ ಹೌದು.

Anu Janardhan expressed her dismay at the negative comments coming from social media

ಅನು ಜನಾರ್ದನ್ ಬಹಳಷ್ಟು ಸೋಶಿಯಲ್ ಮೀಡಿಯಾ ಪೋಸ್ಟ್ ಗಳಿಗೆ ಅಶ್ಲೀಲ ಕಮೆಂಟ್‌ಗಳು ಆಗಾಗ ಬರುತ್ತಿರುತ್ತವಂತೆ. ಸಮಾಜದ ಕೆಲ ವಿಕೃತ ಮನಸ್ಸುಗಳು ಈ ರೀತಿ ಸಣ್ಣಪುಟ್ಟ ವಿಚಾರಗಳಿಗೂ ಅಶ್ಲೀಲತೆಯನ್ನು ತುಂಬುವುದನ್ನು ಇತ್ತೀಚೆಗೆ ಬಹಳಷ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಇದರಿಂದ ಸಾಮಾನ್ಯವಾಗಿ ಬದುಕುವುದೂ ಸುಲಭದ ಮಾತಲ್ಲ ಎಂಬಂತಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾ ಎಂದಾಗ ಎಂತವರು ನಮ್ಮ ಫೋಟೋಗಳನ್ನು, ಪೋಸ್ಟ್ ಗಳನ್ನು ನೋಡಬಹುದು ಅದಕ್ಕೆ ಕಾಮೆಂಟಿಸಬಹುದು ಎಂಬ ಒಂದೇ ಒಂದು ಸ್ವಾತಂತ್ರ್ಯ ಎಲ್ಲೆಲ್ಲಿಗೋ ಹೋಗುತ್ತಿರುವುದು ಸುಳ್ಳಲ್ಲ.

ಜೊತೆಗೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಬೇರೆ ಬೇರೆ ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುವ ಅನು ಜನಾರ್ಧನ್ ಲೈಫ್ ಸ್ಟೈಲ್‌ಗೆ ಸಂಬಂಧಪಟ್ಟ ಪೋಸ್ಟ್ ಗಳನ್ನು ಆಗಾಗ ಹಾಕುತ್ತಾ ಇರುತ್ತಾರೆ. ಈ ರೀತಿ ಬೇರೆ ಬೇರೆ ಬ್ರಾಂಡ್‌ಗಳ ಬಗ್ಗೆ ಮಾತನಾಡುವಾಗ ಎಲ್ಲರಿಗೂ ಅರ್ಥವಾಗಲಿ ಎಂಬ ಕಾರಣಕ್ಕೆ ಆಕೆ ಇಂಗ್ಲಿಷ್ ಭಾಷೆಯನ್ನು ಬಳಸುತ್ತಾರಂತೆ. ಅದಕ್ಕೂ ನೆಟ್ಟಿಗರು ಕೆಟ್ಟದಾಗಿ ಕೆಮೆಂಟ್ ಮಾಡುತ್ತಾರೆ ಅನ್ನೋ ಬೇಸರ ಅವರದ್ದು.

Anu Janardhan expressed her dismay at the negative comments coming from social media

ತಮ್ಮ ಸೋಶಿಯಲ್ ಮೀಡಿಯಾ ಫಾಲೋ ವರ್ಸ್ ಕನ್ನಡಿಗರಷ್ಟೇ ಅಲ್ಲದೆ ಬೇರೆ ಬೇರೆ ಭಾಷೆಯವರು ಇರುವುದರಿಂದ ಇಂಗ್ಲಿಷ್ ಜಾಗತಿಕ ಭಾಷೆಯಾಗಿ ಮುಂದೆ ಬಂದಿರುವುದರಿಂದ ಇಂಗ್ಲೀಷನ್ನು ಆಕೆ ಬಳಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅದಕ್ಕೂ ಎಷ್ಟೋ ಬಾರಿ ಬಹಳ ಮನೋಚಾದ ಕೆಟ್ಟ ಕಮೆಂಟ್‌ಗಳು ಬರುತ್ತಲೇ ಇರುತ್ತವಂತೆ.

ಕನ್ನಡದ ನಟಿ ಅದರಲ್ಲೂ ಕನ್ನಡಿಗಳಾಗಿರುವ ಅನು ಜನಾರ್ಧನ್ ಎಷ್ಟೋ ಬಾರಿ ಎಲ್ಲಾ ಭಾಷಿಗರಿಗೂ ಅರ್ಥವಾಗಬೇಕೆಂದು ಇಂಗ್ಲಿಷನ್ನು ಬಳಸುತ್ತಾರೆ. ಆದರೆ ಅದನ್ನೇ ಅವರ ಫಾಲೋವರ್ಸ್ ಬೇರೆಯದೇ ರೀತಿಯಲ್ಲಿ ತೆಗೆದುಕೊಂಡು ಭಾಷೆಯ ವಿಚಾರದಲ್ಲಿ ಬಹಳಷ್ಟು ನೆಗೆಟಿವ್ ಕಮೆಂಟ್‌ಗಳನ್ನು ಹಾಕುತ್ತಾರೆ.

ಇದರ ಹಿಂದಿನ ಉದ್ದೇಶವೇನು? ಅನು ಅವರು ಅದ್ಯಾಕೆ ಇಂಗ್ಲಿಷ್ ನಲ್ಲಿ ಹಾಕುತ್ತಿದ್ದಾರೆ ಎಂಬುದನ್ನು ಯಾಕೋ ಗಮನಿಸುವುದೇ ಇಲ್ಲ. ಹೇಳಿದರೂ ಅರ್ಥಮಾಡಿಕೊಳ್ಳದವರು ಇದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ನೆಗೆಟಿವ್ ಕಮೆಂಟ್‌ಗಳನ್ನು ಹಾಕುತ್ತಾರೆ ಎಂದೇನಿಲ್ಲ. ಎಷ್ಟೋ ಜನ ಪಾಸಿಟಿವ್ ಆಗಿ ಸಪೋರ್ಟಿವ್ ಕಮೆಂಟ್‌ಗಳನ್ನು ಹಾಕುತ್ತಾರೆ. ಅಂತವರ ಕಮೆಂಟ್ ಅವರನ್ನು ಇನ್ನಷ್ಟು ಪ್ರೋತ್ಸಾಹಿಸುತ್ತದೆ.

More from Filmibeat

English summary
Anu Janardhan expressed her dismay at the negative comments coming from social media, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X