ಅನುಬಂಧ ಅವಾರ್ಡ್ 2019: ಜನ ಮೆಚ್ಚಿದ ನಾಯಕ-ನಾಯಕಿ ಯಾರು?

Recommended Video

ಇಷ್ಟೊಂದು ದುಡ್ಡು ಕೊಟ್ಟು ಈ ಸಿನಿಮಾ ನೋಡ್ಬೇಕಾ..? | Sye Raa Narasimha Reddy

ಸಿನಿಮಾಗಳಿಗೆ ಮತ್ತು ಸಿನಿಮಾ ಕಲಾವಿದರಿಗೆ ಹಲವು ರೀತಿ ಪ್ರಶಸ್ತಿ ನೀಡಲಾಗುತ್ತೆ. ಸೈಮಾ ಪ್ರಶಸ್ತಿ, ಐಫಾ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಟಿವಿ ವಾಹಿನಿಗಳ ಪ್ರಶಸ್ತಿಯನ್ನ ನೀಡಿ ಗೌರವಿಸಲಾಗುತ್ತೆ. ಅದೇ ರೀತಿ ಕಿರುತೆರೆ ಕಲಾವಿದರ ವಿಷಯಕ್ಕೆ ಬಂದರೆ ಕಲರ್ಸ್ ಕನ್ನಡ, ಜೀ ಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿ ವಾಹಿನಿಗಳು ಪ್ರತ್ಯೇಕ ಪ್ರಶಸ್ತಿ ಸಮಾರಂಭಗಳನ್ನ ಆಯೋಜಿಸುತ್ತೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಅನುಬಂಧ ಅವಾರ್ಡ್' ವಿಶೇಷವಾಗಿ ಗಮನ ಸೆಳೆಯುತ್ತೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಪೈಕಿ ಅತ್ಯುತ್ತಮ ನಟಿ, ನಟ, ಖಳನಟಿ, ಖಳನಟ, ಸಹೋದರ, ಸಹೋದರಿ, ಅತ್ತೆ, ಮಾವ, ಧಾರಾವಾಹಿ ಹೀಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತೆ.

2019ನೇ ಸಾಲಿನಲ್ಲಿ ಅನುಬಂಧ ಅವಾರ್ಡ್ ಪ್ರಕಟವಾಗಿದ್ದು, ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬ ಪಟ್ಟಿ ಇಲ್ಲಿದೆ ನೋಡಿ...ಮುಂದೆ ಓದಿ...

ಅತಿ ಹೆಚ್ಚು ರೇಟೆಡ್ ಧಾರಾವಾಹಿ

ಅತಿ ಹೆಚ್ಚು ರೇಟೆಡ್ ಧಾರಾವಾಹಿ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಪೈಕಿ ಅತಿ ಹೆಚ್ಚು ಟಿ.ಆರ್.ಪಿ ಪಡೆಯುವ ಧಾರಾವಾಹಿಗೆ 'ಬೆಸ್ಟ್ ರೇಟೆಡ್ ಫಿಕ್ಷನ್' ಎಂಬ ಪ್ರಶಸ್ತಿ ನೀಡಲಾಗುತ್ತೆ. 2019ರಲ್ಲಿ ಈ ಪ್ರಶಸ್ತಿಯನ್ನ 'ಅಗ್ನಿಸಾಕ್ಷಿ' ಧಾರಾವಾಹಿ ಪಡೆದುಕೊಂಡಿದೆ.

ಜನ ಮೆಚ್ಚಿನ ಸ್ಟೈಲ್ ಐಕಾನ್

ಜನ ಮೆಚ್ಚಿನ ಸ್ಟೈಲ್ ಐಕಾನ್

ಕಿರುತೆರೆ ನಟಿ-ನಟಿಯರು ಸಖತ್ ಸ್ಟೈಲಿಶ್. ಅವರ ಸ್ಟೈಲ್ ಗೆ ಅನೇಕ ಅಭಿಮಾನಿಗಳು ಇರ್ತಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಶ್ರುತಿಗೆ ಜನ ಮೆಚ್ಚಿನ ಸ್ಟೈಲ್ ಐಕಾನ್ (ಫೀಮೇಲ್) ಪ್ರಶಸ್ತಿ ನೀಡಲಾಗಿದೆ. ಅದೇ ರೀತಿ ಸೀತಾ ವಲ್ಲಭ ಧಾರಾವಾಹಿಯ ಮೈಥಿಲಿಗೆ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಸಿಕ್ಕಿದೆ.

ಮನೆ ಮೆಚ್ಚಿದ ಮಗ

ಮನೆ ಮೆಚ್ಚಿದ ಮಗ

ಮಂಗಳಗೌರಿ ಧಾರಾವಾಹಿ ನಟ ರಾಜೀವ ಅವರಿಗೆ ಮನೆ ಮೆಚ್ಚಿದ ಮಗ ಪ್ರಶಸ್ತಿ, ನಮ್ಮನೆ ಯುವರಾಣಿ ಧಾರಾವಾಹಿಯ ಸಾಕೇತ್ ಮನೆ ಮೆಚ್ಚಿದ ಅಳಿಯ ಪ್ರಶಸ್ತಿ, ರಂಗನಾಯಕಿ ಧಾರಾವಾಹಿಯ ಛಾಯಾಗೆ ಮನೆ ಮೆಚ್ಚಿದ ಸಹೋದರಿ ಪ್ರಶಸ್ತಿ, ರಕ್ಷಾಬಂಧನ ಧಾರಾವಾಹಿಯ ಕಾರ್ತಿಕ್ ಗೆ ಜನಮೆಚ್ಚಿದ ಸಹೋದರ ಪ್ರಶಸ್ತಿ ಲಭಿಸಿದೆ.

ಮನೆ ಮೆಚ್ಚಿದ ಹಿರಿಯ

ಮನೆ ಮೆಚ್ಚಿದ ಹಿರಿಯ

ಇಷ್ಟದೇವತೆ ಧಾರಾವಾಹಿಯ ಸರಸ್ವತಮ್ಮಗೆ ಮನೆ ಮೆಚ್ಚಿದ ಹಿರಿಯ ಪ್ರಶಸ್ತಿ, ಸೀತಾ ವಲ್ಲಭ ಧಾರಾವಾಹಿಯ ದೇವರಾಜ್ ಗೆ ಜನಮೆಚ್ಚಿದ ಮಾವ ಪ್ರಶಸ್ತಿ, ಮಿಥುನ ರಾಶಿ ಧಾರಾವಾಹಿಯ ಗಿರಿಜಾಗೆ ಮನೆ ಮೆಚ್ಚಿದ ಅತ್ತೆ ಪ್ರಶಸ್ತಿ, ರಂಗನಾಯಕಿ ಧಾರಾವಾಹಿಯ ಭದ್ರಗೆ ಜನಮೆಚ್ಚಿದ ಶಕುನಿ ಪ್ರಶಸ್ತಿ, ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾಗೆ ಜನಮೆಚ್ಚಿದ ಮಂಥರೆ ಪ್ರಶಸ್ತಿ ಸಿಕ್ಕಿದೆ.

ಉತ್ತಮ ನಿರ್ದೇಶಕ ಯಾರು?

ಉತ್ತಮ ನಿರ್ದೇಶಕ ಯಾರು?

ಮಿಥುನ ರಾಶಿ ಧಾರಾವಾಹಿ ನಿರ್ದೇಶಕ ವಿನೋದ್ ಧೋಂಡಾಳೆಗೆ ಉತ್ತಮ ನಿರ್ದೇಶನ ಪ್ರಶಸ್ತಿ, ನಮ್ಮನೆ ಯುವರಾಣಿ ಧಾರಾವಾಹಿಯ ಮಂಜು ಮೊಗಲಹಳ್ಳಿಗೆ ಉತ್ತಮ ಸಂಕಲನ ಪ್ರಶಸ್ತಿ, ಮಂಗಳಗೌರಿ ಮದುವೆ ಧಾರಾವಾಹಿಯ ಕೆಎಸ್ ರಾಮ್ ಜಿ ಉತ್ತಮ ಕತೆ-ಚಿತ್ರಕಥೆ ಪ್ರಶಸ್ತಿ, ರಾಧಾರಮಣ ಧಾರಾವಾಹಿಯ ಪದ್ಮಿನಿ ಪೃಥ್ವಿರಾಜ್ ಜೈನ್ ಅವರಿಗೆ ಉತ್ತಮ ಸಂಭಾಷಣೆ ಪ್ರಶಸ್ತಿಗೆ ಸಿಕ್ಕಿದೆ.

More from Filmibeat

English summary
Anubandha Awards Winners 2019 will be aired soon on colors Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X