For Quick Alerts
  ALLOW NOTIFICATIONS  
  For Daily Alerts

  ಜೊತೆ ಜೊತೆಯಲಿ: ಅನಿರುದ್ಧ್ ಜಾಗಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಎಂಟ್ರಿ?

  |

  'ಜೊತೆ ಜೊತೆಯಲಿ' ಧಾರಾವಾಹಿ ತಂಡ ಮತ್ತು ನಟ ಅನಿರುದ್ಧ್ ನಡುವೆ ವೈಮನಸ್ಸು ಉಂಟಾಗಿದೆ. ತಂಡದಲ್ಲಿ ಆದ ಕಿರಿಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅನಿರುದ್ಧ್ ವಿರುದ್ಧ ತಂಡ ರೊಚ್ಚಿಗೆದ್ದಿದೆ. ಅನಿರುದ್ಧ್ ಮತ್ತು ಸೀರಿಯಲ್ ತಂಡ ಮಾಧ್ಯಮದ ಮುಂದೆ ತಮ್ಮದೇ ಆದ ಹೇಳಿಕೆಯನ್ನು ಕೊಟ್ಟಿವೆ.

  ಈ ವಿಚಾರ ಎಲ್ಲೆಡೆ ಸದ್ದು ಮಾಡುತ್ತಲೇ, ನಟ ಅನಿರುದ್ಧ್ ನಡೆದಿರುವುದರ ಬಗ್ಗೆ ಮಾಧ್ಯಗಳ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಮೇಲೆ ಸೀರಿಯಲ್ ನಿರ್ದೇಶಕ, ನಿರ್ಮಾಪಕ ಜಗದೀಶ್ ಅವರು ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ಕೊಟ್ಟರು.

  Exclusive: 2 ದಿನಗಳಿಂದ ನ್ಯೂಸ್ ನೋಡಿಲ್ಲ: 'ಜೊತೆಜೊತೆಯಲಿ' ಮೇಘಾ ಶೆಟ್ಟಿ ಪ್ರತಿಕ್ರಿಯೆExclusive: 2 ದಿನಗಳಿಂದ ನ್ಯೂಸ್ ನೋಡಿಲ್ಲ: 'ಜೊತೆಜೊತೆಯಲಿ' ಮೇಘಾ ಶೆಟ್ಟಿ ಪ್ರತಿಕ್ರಿಯೆ

  ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಅನಿರುದ್ಧ್ ಅವರನ್ನು ಕೈ ಬಿಡುವುದಾಗಿ, ಸೀರಿಯಲ್ ತಂಡ ಸುದ್ದಿಗೋಷ್ಠಿ ಮೂಲಕ ಸ್ಪಷ್ಟ ಪಡಿಸಿತ್ತು. ಇದರ ಬೆನ್ನಲ್ಲೇ, ಆರ್ಯವರ್ಧನ್ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಕುತೂಹಲ ಹುಟ್ಟಿ ಕೊಂಡಿತು.

  ಮುಂದಿನ ಆರ್ಯವರ್ಧನ್ ಯಾರು?

  ಮುಂದಿನ ಆರ್ಯವರ್ಧನ್ ಯಾರು?

  'ಜೊತೆ ಜೊತೆಯಲಿ' ಧಾರವಾಯಲ್ಲಿ ಇನ್ನು ಮುಂದೆ ನಟ ಅನಿರುದ್ಧ್ ಇರುವುದಿಲ್ಲ. ಅನಿರುದ್ಧ್ ಜಾಗಕ್ಕೆ ಬೇರೆ ಕಲಾವಿದನನ್ನು ತರಲು ಧಾರಾವಾಹಿ ತಂಡ ನಿರ್ಧಾರ ಮಾಡಿದೆ. ಹಾಗಾಗಿ ಆರ್ಯವರ್ಧನ್ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳಲಿದ್ದಾರೆ. ಯಾರು ಈ ಪಾತ್ರವನ್ನು ತೂಗಿಸಿಕೊಂಡು ಹೋಗಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೀಗ ಉತ್ತರ ಸಿಕ್ಕಿದೆ. ಸದ್ಯಕ್ಕೆ ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರು ನಿರ್ದೇಶಕ ಅನೂಪ್ ಭಂಡಾರಿ.

  ಅನಿರುದ್ಧ್ ಜಾಗಕ್ಕೆ ಅನೂಪ್ ಭಂಡಾರಿ!

  ಅನಿರುದ್ಧ್ ಜಾಗಕ್ಕೆ ಅನೂಪ್ ಭಂಡಾರಿ!

  ಹೌದು, ನಿರ್ದೇಶಕ ಅನೂಪ್ ಭಂಡಾರಿಯ 'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಹೊಸ ಆರ್ಯವರ್ಧನ್ ಆಗಿ ಅನೂಪ್ ಭಂಡಾರಿ ನಟಿಸಲಿದ್ದಾರೆ ಎನ್ನಲಾಗಿದೆ. ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಹೇಳಿ ಮಾಡಿಸಿದ ಹಾಗೆ ಇದ್ದರು. ಆದರೆ ನಡೆದ ಅವಾಂತರದಿಂದ ಅವರು ಅನಿವಾರ್ಯವಾಗಿ ಈ ಧಾರಾವಾಹಿಯಿಂದ ಹೊರ ನಡೆಯಬೆಕಾಗಿದೆ. ಈಗ ಈ ಪಾತ್ರವನ್ನು ಅನುಪೂ ಭಂಡಾರಿ ಮಾಡಲಿದ್ದಾರಂತೆ.

  ಕಿರುತೆರೆಗೆ ಬರ್ತಾರ ನಿರ್ದೇಶಕ ಅನೂಪ್ ಭಂಡಾರಿ!

  ಕಿರುತೆರೆಗೆ ಬರ್ತಾರ ನಿರ್ದೇಶಕ ಅನೂಪ್ ಭಂಡಾರಿ!

  ನಿರ್ದೇಶಕ ಅನೂಪ್ ಭಂಡಾರಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೂಪ್ ಇತ್ತೀಚೆಗಷ್ಟೆ ಸುದೀಪ್‌ಗೆ 'ವಿಕ್ರಾಂತ್ ರೋಣ' ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಜೊತೆಗೆ ಮುಂದಿನ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಹಾಗಾಗಿ ಅವರು ಕಿರುತೆರೆಗೆ ಬರುವುದು ಅನುಮಾನವೇ. ಆದರೂ ಅವರ ಹೆಸರು ಮಾತ್ರ ಕೇಳಿ ಬಂದಿದೆ. ಆದರೆ ಇದನ್ನು ಅಧಿಕೃತವಾಗಿ ಧಾರಾವಾಹಿ ತಂಡ ಆಗಲಿ, ವಾಹಿನಿ ಆಗಲಿ, ಅನೂಪ್ ಭಂಡಾರಿ ಆಗಲಿ ಹೇಳಿಕೊಂಡಿಲ್ಲ. ಹಾಗಾಗಿ ಅಧಿಕೃತ ಆಗುವ ತನಕ ಇದನ್ನು ನಂಬುಂತಿಲ್ಲ.

  ಆರ್ಯ ವರ್ಧನ್ ಪಾತ್ರಕ್ಕೆ ಯಾರು ಸೂಕ್ತ?

  ಆರ್ಯ ವರ್ಧನ್ ಪಾತ್ರಕ್ಕೆ ಯಾರು ಸೂಕ್ತ?

  ಇನ್ನು ಈ ಸುದ್ದಿ ಎಲ್ಲೆಡೆ ಹಚ್ ಚಲ್ ಹೆಬ್ಬಿಸುತ್ತಲೆ, ಆರ್ಯವರ್ಧನ್ ಪಾತ್ರಕ್ಕೆ ಯಾರು ಸಹಿ ಹೊಂದುತ್ತಾರೆ ಎನ್ನುವ ಬಗ್ಗೆ ಹತ್ತಾರು ಊಹೇಗಳು ವ್ಯಕ್ತವಾಗಿವೆ. ಆದರೆ ಸಾರ್ವಜನಿಕ ವಲಯದಲ್ಲಿ ಮಾತ್ರ, ಈ ಪಾತ್ರಕ್ಕೆ ಅನಿರುದ್ಧ್ ಅವರೇ ಬೆಸ್ಟ್ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಅವ್ರು ಈಗ ಸೀರಿಯಲ್‌ನಿಂದ ಹಪರ ಬಂದಿದ್ದಾರೆ. ಇನ್ನೇನಿದ್ದರೂ ಮುಂದೆ ಯಾರು ಈ ಪಾತ್ರಕ್ಕೆ ಎಂಟ್ರಿ ಕೊಡ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  English summary
  Anup Bhandari to replace Aniruddha Jatkar in Jothe Jotheyali Serial?, KNow More,
  Monday, August 22, 2022, 17:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X