ಶ್ವೇತಾ ಚೆಂಗಪ್ಪ ಆಂಕರಿಂಗ್ ಮಾಡುವುದನ್ನು ನಿಲ್ಲಿಸಬೇಕಂತೆ.!
ಕಿರುತೆರೆ ಪ್ರಪಂಚದಲ್ಲಿ ಶ್ವೇತಾ ಚೆಂಗಪ್ಪ ತನ್ನದೆ ರೀತಿಯಲ್ಲಿ ಗುರುತಿಸಿಕೊಂಡಿರುವ ನಿರೂಪಕಿ. ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಶ್ವೇತಾ ಗಳಿಸಿದ್ದಾರೆ. ಹೀಗಿರುವಾಗ, ಶ್ವೇತಾ ಚೆಂಗಪ್ಪ ಆಂಕರಿಂಗ್ ಮಾಡುವುದನ್ನು ನಿಲ್ಲಿಸಬೇಕಂತೆ. ಹಾಗಂತ ಒಬ್ಬರು ಸೂಚಿಸಿದ್ದಾರೆ.
ಇತ್ತೀಚಿಗಷ್ಟೆ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ನಿರೂಪಕಿ ಅನುಪಮ ಆಗಮಿಸಿದ್ದರು. ಕಾರ್ಯಕ್ರಮದ Rapid Fire ಸುತ್ತಿನಲ್ಲಿ ಅಕುಲ್ 'ನಿಮ್ಮ ಪ್ರಕಾರ ಯಾರು ಆಂಕರಿಂಗ್ ನಿಲ್ಲಿಸಬೇಕು..?' ಅಂತ ಹೇಳಿದ್ದರು. ಆಗ ಅನುಪಮ ''ಶ್ವೇತಾ ಚೆಂಗಪ್ಪ'' ಅಂತ ಉತ್ತರ ನೀಡಿದರು. 'ಶ್ವೇತಾ ಅವರಿಗೆ ಬೇರೆ ಏನೋ ಮಾಡುವ ಪ್ಲಾನ್ ಇದೆ. ಅದಕ್ಕೆ ಆಂಕರಿಂಗ್ ನಿಲ್ಲಿಸಬೇಕು' ಅಂತ ಅನುಪಮ ಹೇಳಿದ್ದಾರೆ.

ಸದ್ಯ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ಮತ್ತು 'ಮಜಾ ಟಾಕೀಸ್' ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ವೇತಾ ಚೆಂಗಪ್ಪ 'ಬಿಗ್ ಬಾಸ್ ಸೀಸನ್ 2' ಕಾರ್ಯಕ್ರಮದ ಸ್ಪರ್ಧಿಯೂ ಆಗಿದ್ದರು.
More from Filmibeat
English summary
Kannada Anchor Anupama Bhat spoke about Shwetha Chengappa in Colors Super Channel's popular show 'Super talk time'.


Click it and Unblock the Notifications











