ಮತ್ತೆ ಕನ್ನಡ ಕೋಗಿಲೆಗೆ ಬಂದ ನಿರೂಪಕಿ ಅನುಪಮಾ ಗೌಡ

Recommended Video

ಕನ್ನಡ ಕೋಗಿಲೆಗೆ ಬಂದ ನಿರೂಪಕಿ ಅನುಪಮಾ ಗೌಡ | FILMIBEAT KANNADA

ಬಿಗ್ ಬಾಸ್ ಮುಗಿಸಿ ಬಂದ ಅನುಪಮಾ ಗೌಡ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕನ್ನಡ ಕೋಗಿಲೆ ಎಂಬ ಹೊಸ ಶೋಗೆ ನಿರೂಪಕರಾಗಿ ಆಯ್ಕೆಯಾಗಿದ್ದರು. ಕನ್ನಡ ಕೋಗಿಲೆ ಮೊದಲ ಆವೃತ್ತಿಯನ್ನ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಬಳಿಕ ಎರಡನೇ ಆವೃತ್ತಿ ಆರಂಭವಾದಾಗ ಅನುಪಮಾ ಈ ಶೋನಲ್ಲಿ ಇರಲಿಲ್ಲ.

ಇದು ಸಹಜವಾಗಿ ಕೆಲವರಿಗೆ ಬೇಸರ ತರಿಸಿತು. ಅನುಪಮಾ ಜಾಗಕ್ಕೆ ಆರ್ ಜೆ ಸಿರಿ ಪ್ರವೇಶ ಆಗಿತ್ತು. ಈಗ ಎರಡನೇ ಸೀಸನ್ ಕನ್ನಡ ಕೋಗಿಲೆ ಕಾರ್ಯಕ್ರಮವನ್ನ ಸಿರಿ ಮುಂದುವರಿಸುತ್ತಿದ್ದಾರೆ.

ಮತ್ತೊಂದೆಡೆ ಕನ್ನಡ ಕೋಗಿಲೆಯಿಂದ ಹೊರಹೋಗಿದ್ದ ಅನುಪಮಾ ಗೌಡ ಆ ಕಡೆ ಮಜಾಭಾರತ ಎಂಬ ಇನ್ನೊಂದು ಶೋಗೆ ಆಂಕರ್ ಆಗಿ ಭರ್ತಿ ಪಡೆದುಕೊಂಡರು. ಇದೀಗ, ಸರ್ಪ್ರೈಸ್ ಸುದ್ದಿ ಏನಪ್ಪಾ ಅಂದ್ರೆ ಅನುಪಮಾ ಗೌಡ ಮತ್ತೆ ಕನ್ನಡ ಕೋಗಿಲೆ ಶೋಗೆ ವಾಪಸ್ ಆಗಿದ್ದಾರೆ. ಮುಂದೆ ಓದಿ.....

ಸಿರಿ ಜೊತೆ ಅನುಪಮಾ ಬಂದ್ರು.!

ಸಿರಿ ಜೊತೆ ಅನುಪಮಾ ಬಂದ್ರು.!

ಇಷ್ಟು ದಿನ ಕನ್ನಡ ಕೋಗಿಲೆ ಶೋ ನಡೆಸಿಕೊಡುತ್ತಿದ್ದ ಸಿರಿ ಜೊತೆ ಈ ವಾರ ಅನುಪಮಾ ಗೌಡ ಕೂಡ ಸೇರಿಕೊಂಡಿದ್ದಾರೆ. ಈ ಮೂಲಕ ಕಳೆದ ಆವೃತ್ತಿಯ ಸಕ್ಸಸ್ ಫುಲ್ ನಿರೂಪಕಿ ಅನುಪಮಾ ಗೌಡ ಮತ್ತೆ ಕೋಗಿಲೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹಳೇ ಸ್ಪರ್ಧಿಗಳು ರೀ-ಎಂಟ್ರಿ

ಹಳೇ ಸ್ಪರ್ಧಿಗಳು ರೀ-ಎಂಟ್ರಿ

ಕೇವಲ ಕಳೆದ ಆವೃತ್ತಿಯ ನಿರೂಪಕಿ ಮಾತ್ರವಲ್ಲ, ಕಳೆದ ಆವೃತ್ತಿಯ ಕೆಲವು ಸ್ಪರ್ಧಿಗಳು ಕೂಡ ಕನ್ನಡ ಕೋಗಿಲೆ ವೇದಿಕೆಯ ಕಂಬ್ಯಾಕ್ ಆಗಿದ್ದಾರೆ. ಹೌದು, ಈ ವಾರದ ವಿಶೇಷ ಸಂಚಿಕೆಯಲ್ಲಿ ಕಳೆದ ಆವೃತ್ತಿ ಸ್ಪರ್ಧಿಗಳು ಮತ್ತು ನಿರೂಪಕಿ ಅನುಪಮಾ ಅವರು ಹೊಸ ಸೀಸನ್ ಸ್ಪರ್ಧಿಗಳ ಜೊತೆ ಸೇರಿ ಶೋ ನಡೆಸಿಕೊಟ್ಟರು. ಇದು ಈ ವಾರದ ಸ್ಪೆಷಲ್ ಅಷ್ಟೆ.

ಜೂನಿಯರ್ ಮತ್ತು ಸೀನಿಯರ್

ಜೂನಿಯರ್ ಮತ್ತು ಸೀನಿಯರ್

ಅಂದ್ಹಾಗೆ, ಈ ವಾರದ ವಿಶೇಷ ಸಂಚಿಕೆಯಲ್ಲಿ ಸೀನಿಯರ್ ಕನ್ನಡ ಕೋಗಿಲೆ ಸ್ಪರ್ಧಿಗಳ ಜೊತೆಗೆ ಜೂನಿಯರ್ ಕನ್ನಡ ಕೋಗಿಲೆ ಸ್ಫರ್ಧಿಗಳು ಡ್ಯುಯೆಟ್ ಹಾಡುಗಳನ್ನ ಹಾಡಲಿದ್ದಾರೆ. ಹೊಸ ಸ್ಪರ್ಧಿಗಳ ಜೊತೆ ಸೇರಿ ಹಳೆ ಸ್ಪರ್ಧಿ ಒಟ್ಟಿಗೆ ಹಾಡು ಹೇಳುವುದುನ್ನ ನೋಡೋದು ಮಜಾ ಇದೆ.

ಅನುಪಮಾ ಏನ್ ಮಾಡ್ತಿದ್ದಾರೆ?

ಅನುಪಮಾ ಏನ್ ಮಾಡ್ತಿದ್ದಾರೆ?

ರಾಘವೇಂದ್ರ ರಾಜ್ ಕುಮಾರ್ ಅವರ ತ್ರಯಂಬಕ ಚಿತ್ರದಲ್ಲಿ ಕಡೆಯದಾಗಿ ನಟಿಸಿದ್ದ ಅನುಪಮಾ ಗೌಡ, ಈಗ ಮಜಾ ಭಾರತ ಶೋ ಮಾತ್ರ ಮಾಡ್ತಿದ್ದಾರೆ. ಸದ್ಯಕ್ಕೆ ಬೇರೆ ಯಾವ ಸಿನಿಮಾವನ್ನ ಕೈಗೆತ್ತಿಕೊಂಡಿಲ್ಲ ಎಂದು ಸ್ವತಃ ಅನುಪಮಾ ಅವರೇ ಕನ್ನಡ ಕೋಗಿಲೆ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ.

More from Filmibeat

English summary
Kannada anchor Anupama gowda come back to Kannada kogile for this weekend special. the episode will telecast in this weekend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X