For Quick Alerts
  ALLOW NOTIFICATIONS  
  For Daily Alerts

  ನವೀನ್ ಸಜ್ಜು ಗೆಲ್ಲಬೇಕಿತ್ತು ಅಂತಾರೆ ಈ ಬಿಗ್ ಬಾಸ್ ಮಾಜಿ ಸ್ಪರ್ಧಿ

  |

  ಬಿಗ್ ಬಾಸ್ ಕನ್ನಡ ಸೀಸನ್ 6 ಮುಗಿದು, 'ಮಾರ್ಡನ್ ರೈತ' ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಶಶಿ ಕುಮಾರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಫಿನಾಲೆಯ ಕೊನೆ ಕ್ಷಣದವರೆಗೂ ಭಾರಿ ಕುತೂಹಲ ಮೂಡಿಸಿದ್ದ ಫಲಿತಾಂಶದಲ್ಲಿ ಗಾಯಕ ನವೀನ್ ಸಜ್ಜು ಗೆಲ್ಲಬಹುದು ಎಂಬ ಲೆಕ್ಕಚಾರವೇ ಹೆಚ್ಚಿತ್ತು.

  ಆದ್ರೆ, ಅಂತಿಮ ಕ್ಷಣದಲ್ಲಿ ವಿಜಯಮಾಲೆ ಶಶಿ ಕೊರಳಿಗೆ ಬಿತ್ತು. ಸಹಜವಾಗಿ ಫಲಿತಾಂಶದ ನಂತರ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಅನುಪಮಾ ಗೌಡ ಅವರು ಮಾತನಾಡಿದ್ದು, ನವೀನ್ ಸಜ್ಜು ಗೆಲ್ಲಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  'ಮಾರ್ಡನ್ ರೈತ' ಶಶಿ ಮುಡಿಗೆ 'ಬಿಗ್ ಬಾಸ್ ಕನ್ನಡ-6' ಗೆಲುವಿನ ಗರಿ.! 'ಮಾರ್ಡನ್ ರೈತ' ಶಶಿ ಮುಡಿಗೆ 'ಬಿಗ್ ಬಾಸ್ ಕನ್ನಡ-6' ಗೆಲುವಿನ ಗರಿ.!

  ''ಶಶಿ ತುಂಬಾ ಚೆನ್ನಾಗಿ ಆಡಿದ್ದಾರೆ. ಎಲ್ಲ ಟಾಸ್ಕ್ ಗಳಲ್ಲೂ ಯಶಸ್ವಿಯಾಗಿದ್ರು. ಅವರು ಟಾಸ್ಕ್ ಪ್ಲೇಯರ್ ಎನ್ನಬಹುದು. ಫಿನಾಲೆಗೆ ಆಯ್ಕೆಯಾಗಿದ್ದ ಅಂತಿ ಮೂರು ಸ್ಪರ್ಧಿಗಳು ಕೂಡ ವಿನ್ನರ್ ಆಗಲು ಅರ್ಹತೆ ಹೊಂದಿದ್ದರು. ಆದ್ರೆ, ನನಗೆ ವೈಯಕ್ತಿಕವಾಗಿ ನವೀನ್ ವಿನ್ ಆಗಬೇಕಿತ್ತು'' ಎಂದು ಅನುಪಮಾ ಹೇಳಿದ್ದಾರೆ.

  'ಬಿಗ್ ಬಾಸ್' ಗೆಲ್ಲಲಿಲ್ಲ ಅಂದ್ರೇನಂತೆ, ಸುದೀಪ್ ಮನ ಗೆದ್ದ ಗಾಯಕ ನವೀನ್ ಸಜ್ಜು.! 'ಬಿಗ್ ಬಾಸ್' ಗೆಲ್ಲಲಿಲ್ಲ ಅಂದ್ರೇನಂತೆ, ಸುದೀಪ್ ಮನ ಗೆದ್ದ ಗಾಯಕ ನವೀನ್ ಸಜ್ಜು.!

  ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿಯಾಗಿದ್ದ ಅನುಪಮಾ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಿನಿಮಾ, ಕಿರುತೆರೆ ಶೋಗಳು, ರಿಯಾಲಿಟಿ ಶೋಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. 'ಕನ್ನಡ ಕೋಗಿಲೆ' ಕಾರ್ಯಕ್ರಮದಲ್ಲಿ ಹೆಚ್ಚು ಯಶಸ್ಸು ಕಂಡ ಅನುಪಮಾ, ಈಗ 'ಮಜಾಭಾರತ' ಸೀಸನ್ 3ರ ನಿರೂಪಕಿಯಾಗಿದ್ದಾರೆ.

  English summary
  Bigg boss kannada 5 contestant anupama gowda expressed her opinion on bigg boss kannada 6 winner shashi kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X