Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಮನೆಯಿಂದ ಜಾಗ ಖಾಲಿ ಮಾಡಿದ ಅನುಪಮ
'ಬಿಗ್ ಬಾಸ್ ಕನ್ನಡ ಸೀಸನ್ 5'ರ ಪ್ರಮುಖ ಸ್ಪರ್ಧಿ ಆಗಿದ್ದ ನಟಿ ಅನುಪಮ ಕಾರ್ಯಕ್ರಮದಿಂದ ಔಟ್ ಆಗಿದ್ದಾರೆ. ಫೈನಲ್ ಹಂತ ತಲುಪುವ ಸನಿಹದಲ್ಲಿ ಅನುಪಮ ಎಡವಿದ್ದು, 'ಬಿಗ್ ಬಾಸ್' ಮನೆಯಿಂದ ಜಾಗ ಖಾಲಿ ಮಾಡಿದ್ದಾರೆ.
ಈ ವಾರ ಬಿಗ್ ಮನೆಯಲ್ಲಿ ಇದ್ದ ಎಲ್ಲ ಸದಸ್ಯರು ನಾಮಿನೇಟ್ ಆಗಿದ್ದರು. ಈ ಪೈಕಿ ಜಿಕೆ, ಶೃತಿ, ದಿವಾಕರ್, ನಿವೇದಿತಾ, ಸಮಿರಾಚಾರ್ಯ ಮತ್ತು ಚಂದನ್ ಶೆಟ್ಟಿ ಸೇಫ್ ಆಗಿದ್ದು, ಅನುಪಮ ಎಲಿಮಿನೇಟ್ ಆಗಿದ್ದಾರೆ. ಈ ಬಾರಿಯ ಕಾರ್ಯಕ್ರಮದ ಪ್ರಮುಖ ಸ್ಪರ್ಧಿ ಆಗಿದ್ದ ಅನುಪಮ ಫೈನಲ್ ಗೆ ಬರುತ್ತಾರೆ ಎನ್ನುವುದು ಎಲ್ಲರ ಊಹೆ ಆಗಿತ್ತು. ಆದರೆ, 'ಬಿಗ್ ಬಾಸ್' ಅನುಪಮ ಅಭಿಮಾನಿಗಳಿಗೆ ಸಡನ್ ಶಾಕ್ ನೀಡಿದೆ.
ಅನುಪಮ ಪ್ರಾರಂಭದಿಂದ ಒಂದಲ್ಲ ಒಂದು ವಿಷಯಕ್ಕೆ 'ಬಿಗ್ ಬಾಸ್' ನಲ್ಲಿ ಸುದ್ದಿ ಮಾಡುತ್ತ ಬಂದಿದ್ದರು. 'ಬಿಗ್ ಬಾಸ್' ಮನೆಯಿಂದ ಹೊರ ಬರುವ ವೇಳೆ ಮಾತನಾಡಿದ ಅನುಪಮ ''ನಾನು ತುಂಬ ಸ್ಟ್ರಾಂಗ್ ಆಗಿ ಈ ಮನೆಯಿಂದ ಹೊರಬರುತ್ತಿದ್ದೇನೆ. ಇದನ್ನು ನನ್ನ ಸ್ನೇಹಿತರು ಉಹಿಸಿರುತ್ತಾರಾ.. ಇಲ್ವಾ.. ಗೊತ್ತಿಲ್ಲ. 'ಬಿಗ್ ಬಾಸ್' ಎನ್ನುವ ಈ ಸುಂದರ ಅನುಭವವನ್ನು ಮಾಡುವ ಅವಕಾಶ ಮಾಡಿಕೊಟ್ಟ ಮತ್ತು ನನಗೆ ಪ್ರತಿವಾರ ಔಟ್ ಮಾಡಿದ ಎಲ್ಲರಿಗೂ ಧನ್ಯವಾದ'' ಎಂದ ಹೇಳಿ ಕಾರ್ಯಕ್ರಮದಿಂದ ಹೊರ ನಡೆದರು.