ಅನುಪಮಾ ಗೌಡಗೆ ಎರಡೆರಡು ಬಾರಿ ಸಿಕ್ತು ಸೂಪರ್ ಅಧಿಕಾರ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ನಟಿ ಲಾಸ್ಯ ಎಂಟ್ರಿಕೊಟ್ಟು ಎರಡು ವಾರಗಳು ಆಗಿವೆ ಅಷ್ಟೇ. ಈ ಎರಡು ವಾರಗಳಲ್ಲಿ ಅನುಪಮಾ ಜೊತೆ ಲಾಸ್ಯಗೆ ಅದೇನು ಅನುಬಂಧವೋ ಏನೋ... 'ಬಿಗ್ ಬಾಸ್' ಮನೆಯಿಂದ ಹೊರ ಬರುವಾಗ ಲಾಸ್ಯ, ಅನುಪಮಾ ಕೈಗೆ ಸೂಪರ್ ಅಧಿಕಾರವನ್ನ ಕೊಟ್ಟು ಬಂದಿದ್ದಾರೆ.
ಹಾಗ್ನೋಡಿದ್ರೆ, ಅನುಪಮಾ ಕೈಗೆ ಸೂಪರ್ ಅಧಿಕಾರ ಸಿಕ್ಕಿರುವುದು ಇದು ಎರಡನೇ ಬಾರಿ. ಸಿಹಿ ಕಹಿ ಚಂದ್ರುಗೆ ಔಟ್ ಆದಾಗ, ಅವರು ಅನುಪಮಾಗೆ ಸೂಪರ್ ಅಧಿಕಾರ ನೀಡಿ ಹೊರ ಬಂದಿದ್ದರು. ಈಗ ಲಾಸ್ಯ ಕೂಡ ಅದನ್ನೇ ಮಾಡಿದ್ದಾರೆ.

ಸೂಪರ್ ಅಧಿಕಾರವನ್ನ ಕ್ಯಾಪ್ಟನ್ ಆಯ್ಕೆ ಅಥವಾ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು. ತಮ್ಮ ಆತ್ಮೀಯರೆಲ್ಲ ಔಟ್ ಆದರೂ, ಅನುಪಮಾ ಮಾತ್ರ ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಸೇಫ್ ಆಗಿದ್ದಾರೆ.
ಗ್ರ್ಯಾಂಡ್ ಫಿನಾಲೆ ವಾರಕ್ಕೆ ಇನ್ನು ಕೆಲವೇ ವಾರ ಬಾಕಿ ಉಳಿದಿರುವಾಗ, ಇಂತಹ ಟೈಮ್ ನಲ್ಲಿ ಅನುಪಮಾ ಕೈಗೆ ಸೂಪರ್ ಅಧಿಕಾರ ಸಿಕ್ಕಿದೆ. ಇದನ್ನ ಅನುಪಮಾ ಹೇಗೆ ಬಳಸಿಕೊಳ್ಳುತ್ತಾರೋ, ಕಾದು ನೋಡೋಣ.
More from Filmibeat
English summary
Bigg Boss Kannada 5 Contestant Anupama Gowda gets Super Power from Lasya.
bigg boss kannada 5 bigg boss kannada news bigg boss tv colors channel anupama gowda ಬಿಗ್ ಬಾಸ್ ಕನ್ನಡ 5 ಬಿಗ್ ಬಾಸ್ ಟಿವಿ ಕಲರ್ಸ್ ವಾಹಿನಿ ಸಿಹಿ ಕಹಿ ಚಂದ್ರು ಅನುಪಮಾ ಗೌಡ


Click it and Unblock the Notifications











