ಚಂದ್ರು ಕಡೆಯಿಂದ ಅನುಪಮಾ ಗೌಡಗೆ ಸಿಕ್ಕಿದೆ ಸೂಪರ್ ಅಧಿಕಾರ

By Harshitha

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ ಸಿಹಿ ಕಹಿ ಚಂದ್ರು ಹಾಗೂ ನಟಿ ಅನುಪಮಾ ಗೌಡ ನಡುವಿನ ಒಡನಾಟ ಚೆನ್ನಾಗಿದೆ. ಸಿಹಿ ಕಹಿ ಚಂದ್ರು ಜೊತೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ನಟಿ ಅನುಪಮಾ, ಚಂದ್ರು ರನ್ನ 'ಅಪ್ಪ' ಅಂತಲೇ ಕರೆಯುತ್ತಿದ್ದರು.

'ದೊಡ್ಮನೆ'ಯಿಂದ ಏಳನೇ ವಾರ ಸಿಹಿ ಕಹಿ ಚಂದ್ರು ಔಟ್ ಆದರು. 'ಬಿಗ್' ಮನೆಯಿಂದ ಆಚೆ ಕಾಲಿಡುವ ಮುನ್ನ, 'ಪ್ರೀತಿಯ ಅಪ್ಪ' ಮಗಳಿಗೆ 'ಸೂಪರ್ ಅಧಿಕಾರ'ವನ್ನ ಕೊಟ್ಟರು.

ಸಿಹಿ ಕಹಿ ಚಂದ್ರು ಹೊರಗೆ ಹೋದ ಬೇಜಾರಿನಲ್ಲಿ ಇರುವ ಅನುಪಮಾ ಕೈಯಲ್ಲಿ ಸದ್ಯ ಸೂಪರ್ ಅಧಿಕಾರ ಇದೆ. ಮುಂದೆ ಓದಿರಿ...

ಅನುಪಮಾಗೆ ಸಿಕ್ತು ಸೂಪರ್ ಅಧಿಕಾರ

ಅನುಪಮಾಗೆ ಸಿಕ್ತು ಸೂಪರ್ ಅಧಿಕಾರ

'ದೊಡ್ಮನೆ'ಯಿಂದ ಹೊರಬರುವ ಮುನ್ನ, ಎಲಿಮಿನೇಟ್ ಆದ ಸಿಹಿ ಕಹಿ ಚಂದ್ರುಗೆ 'ಬಿಗ್ ಬಾಸ್' ಎಂದಿನಂತೆ ಒಂದು 'ಸೂಪರ್ ಅಧಿಕಾರ'ವನ್ನು ಹಸ್ತಾಂತರಿಸಲು ಸೂಚಿಸಿದರು. ಇದರ ಅನುಸಾರ 'ಸೂಪರ್ ಅಧಿಕಾರ'ವನ್ನು ಚಂದ್ರು, ಅನುಪಮಾಗೆ ನೀಡಿದರು.

ನಾಮಿನೇಷನ್ ವೇಳೆ ಬಳಸಬಹುದು

ನಾಮಿನೇಷನ್ ವೇಳೆ ಬಳಸಬಹುದು

ತಮಗೆ ಲಭಿಸಿರುವ ಸೂಪರ್ ಅಧಿಕಾರವನ್ನ ಅನುಪಮಾ ಗೌಡ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು.

ಕಣ್ಣೀರಿಟ್ಟ ಅನುಪಮಾ ಗೌಡ

ಕಣ್ಣೀರಿಟ್ಟ ಅನುಪಮಾ ಗೌಡ

''ಸಿಹಿ ಕಹಿ ಚಂದ್ರು ಔಟ್'' ಎಂದು ಹೇಳಿದ ಕೂಡಲೆ ಶಾಕ್ ಆದ ಅನುಪಮಾ ಗೌಡ ಕಣ್ಣೀರಿಟ್ಟರು. ಅವರನ್ನ ಸಮಾಧಾನ ಪಡಿಸಿ ಚಂದ್ರು ಹೊರಬಂದರು.

ಯಾರ ಮೇಲೆ ಪರಿಣಾಮ ಬೀರುತ್ತೋ.?

ಯಾರ ಮೇಲೆ ಪರಿಣಾಮ ಬೀರುತ್ತೋ.?

ತಮಗೆ ಸಿಕ್ಕಿರುವ 'ಸೂಪರ್ ಅಧಿಕಾರ'ವನ್ನ ಅನುಪಮಾ ಗೌಡ ಹೇಗೆ ಉಪಯೋಗಿಸಿಕೊಳ್ಳುತ್ತಾರೋ, ನೋಡೋಣ.

More from Filmibeat

English summary
Bigg Boss Kannada 5 Contestant Anupama Gowda gets Super Power from Sihi Kahi Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X