ಅನುಪಮಾ ಲುಕ್ ಗೆ ಫ್ಯಾನ್ಸ್ ಫಿದಾ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್..!
ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿದ ನಟಿ. ಅದೆಷ್ಟೇ ಸವಾಲುಗಳು ಬಂದರು ಅದೆಲ್ಲವನ್ನೂ ಮೆಟ್ಟಿನಿಂತ ಛಲಗಾತಿ ಈ ಅನುಪಮಾ ಗೌಡ. ಅನುಪಮಾ ಗೌಡ ಎಂದರೆ ಫ್ಯಾನ್ಸ್ ಗೆ ಬಹಳ ಇಷ್ಟ. ನಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನಟಿ ಇದೀಗ ನಿರೂಪಕಿಯಾಗಿಯು ಎಲ್ಲರ ಮನಸ್ಸನ್ನೂ ಹೇಳುತ್ತಿರುವ ಮುದ್ದು ಮುಖದ ಚೆಲುವೆ ಈಕೆ. ಹಲವು ವರುಷಗಳಿಂದ ಬಣ್ಣದ ಬದುಕಿಗೆ ಕಾಲಿಟ್ಟ ನಟಿ. ಇದೀಗ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿದ್ದಾರೆ.
ಮಹಾಲಕ್ಷ್ಮೀ ಗೆ ಪೂಜೆ ಮಾಡಿದ ಬಳಿಕ ಸೀರೆಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಅನುಪಮಾ ಗೌಡ ಅವರನ್ನು ಸೀರೆಯಲ್ಲಿ ನೋಡುವುದೇ ಚೆಂದ ಎಂದು ಅಭಿಮಾನಿಗಳು ಈಗಾಗಲೇ ಹೇಳುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಸಾಕಷ್ಟು ಹವಾ ಎಬ್ಬಿಸಿದೆ. ಸಾಕಷ್ಟು ಜನರು ಫೋಟೋ ಗೆ ಲೈಕ್ ಕಾಮೆಂಟ್ ಮಾಡುತ್ತಿದ್ದಾರೆ. ಅನುಪಮಾ ಗೌಡ ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವುನಲ್ಲಿ ನಾಯಕಿ ನಟಿಯಾಗಿ ನಟನೆ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದರು.

ಅನುಪಮಾ ಗೌಡ ಬಿಗ್ ಬಾಸ್ ನಲ್ಲಿ ಕೂಡ ಸ್ಪರ್ಧೆ ಮಾಡಿದ್ದರು . ಈ ನಟಿ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಹವಾ ಕ್ರಿಯೇಟ್ ಮಾಡಿದ್ದಾರೆ ಹಾಗೆಯೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುತ್ತಾರೆ. ಆಗಾಗ ಫೋಟೋವನ್ನು ಶೇರ್ ಮಾಡಿ ಅಭಿಮಾನಿಗಳ ಕಣ್ಣಿಗೆ ತಂಪು ಮಾಡುತ್ತಿದ್ದಾರೆ. ಇನ್ನೂ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಇವರು ಅಷ್ಟೇ ಸುಂದರವಾಗಿ ಅಲಂಕಾರ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅನುಪಮಾ ಗೌಡ ಸಾರಿ ಲುಕ್ ವೈರಲ್ ಆಗುತ್ತಿದ್ದು ನೆಟ್ಟಿಗರು ವಾರೆವಾ ಎಂದು ಹೇಳುತ್ತಿದ್ದಾರೆ.
ಬಾಲ ನಟಿಯಾಗಿ ಮಿಂಚಿದ ನಟಿ
ಅನುಪಮಾ ಗೌಡ 2003 ರಲ್ಲಿ ಅನುಪಮಾ ಗೌಡ ಬಾಲ ಕಲಾವಿದೆಯಾಗಿ ಲಂಕೇಶ್ ಪತ್ರಿಕೆಯೊಂದಿಗೆ ನಟನಾ ರಂಗಕ್ಕೆ ಕಾಲಿಡುತ್ತಾರೆ. ಆ ಬಳಿಕ 2011 ರಲ್ಲಿ ಒಂದು ರಿಯಾಲಿಟಿ ಶೋ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದರು. ಅದಾದ ನಂತರ ಅಕ್ಕ ಧಾರವಾಹಿ ಮೂಲಕ ಎಲ್ಲರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದ ನಟಿ ಈಕೆ. ದ್ವಿ ಪಾತ್ರದಲ್ಲಿ ಮಿಂಚಿದ ನಟಿಯ ನಟನೆ ನೀಡುವುದು ಬಲು ಚೆಂದ. ಹೀಗೆ ಸಾಕಷ್ಟು ಸಿನಿಮಾಗಳನ್ನು ಹಾಗೆಯೇ ಧಾರಾವಾಹಿಗಳಲ್ಲಿ ನಟನೆ ಮಾಡುತ್ತಾ ಬಂದಿದ್ದಾರೆ.
ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ
ಇನ್ನೂ ಹಲವಾರು ರಿಯಾಲಿಟಿ ಶೋ ವನ್ನು ಅನುಪಮಾ ಗೌಡ ನಡೆಸಿಕೊಟ್ಟಿದ್ದಾರೆ. ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್, ಹಾಗೆಯೇ ಸುವರ್ಣ ಸೂಪರ್ ಸ್ಟಾರ್ ಹೀಗೆ ಸಾಕಷ್ಟು ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದಾರೆ. ಇನ್ನೂ ಅನುಪಮಾ ಗೌಡ ಸೀರೆಯಲ್ಲಿ ಸಖತ್ ಆಗಿ ಕಾಣಿಸುತ್ತಿದ್ದು ರೆಟ್ರೋ ಲುಕ್‌ನಲ್ಲಿ ಅವರ ಸ್ಟೈಲ್ ಸಖತ್ ಆಗಿ ಕಾಣಿಸಿಕೊಂಡಿದೆ. ಫೋಟೋ ಪೋಸ್ಟ್ ಮಾಡುವ ವೇಳೆ ಫೋಟೋದ ಕೆಳಗೆ ಸುಖ, ಶಾಂತಿ, ಸಂಪತ್ತು ಹಾಗೂ ಐಶ್ವರ್ಯ ವೃದ್ಧಿಸಲಿ ಎಂದು ಆಶಿಸುತ್ತಾ , ಸಮಸ್ತ ಜನರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ .
ಹಬ್ಬದ ಶುಭಾಶಯ ಕೋರಿದ ನಟಿ
ಹಾಗೆಯೇ ವರಮಹಾಲಕ್ಷ್ಮೀ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಗಾಢ ನೀಲಿ ಬಣ್ಣದ ಸೀರೆ ಬಾರ್ಡರ್‌ನ ಕೆಂಪು ಬಣ್ಣಕ್ಕೆ ಒಪ್ಪುವಂಥ ರವಿಕೆ ಧರಿಸಿ ಆಕರ್ಷಕ ಆಭರಣಗಳನ್ನು ತೊಟ್ಟಿಕೊಂಡಿದ್ದಾರೆ. ಹಾಗೆಯೇ ಕೆಲವು ಅಭಿಮಾನಿಗಳು ಹೆಣ್ಣು ಅಂದ್ರೆ ಲಕ್ಷ್ಮೀ, ನೀವೇ ವರಮಹಾಲಕ್ಷ್ಮೀ ನಿಮಗೆ ನನ್ನ ದೊಡ್ಡ ನಮಸ್ಕಾರ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











