Anupama Gowda:"ನನಗೆ ಇಷ್ಟೊಂದು ಪ್ರೀತಿ ಸಿಕ್ಕಿದ್ದು ಇದೇ ಮೊದಲು"; ಅನುಪಮಾ ಗೌಡ ಭಾವುಕ

By ಅನಿತಾ ಬನಾರಿ

ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ ನಟನೆಯ ಮೂಲಕ ಸ್ಯಾಂಡಲ್ ವುಡ್ ನಲ್ಲೂ ಕಮಾಲ್ ಮಾಡಿದ ಬೆಡಗಿ. ಸದ್ಯ ನಿರೂಪಕಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿರುವ ಈಕೆಯ ಹೆಸರು ಅನುಪಮಾ ಗೌಡ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋವಿನ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನುಪಮಾ ಗೌಡ.

ಇತ್ತೀಚೆಗಷ್ಟೇ ಅನುಪಮಾ ಗೌಡ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಇನ್ನು ನಟಿ, ನಿರೂಪಕಿ ಅನುಪಮಾ ಗೌಡ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ತೀರಾ ಸರಳವಾಗಿ ಆಚರಿಸುತ್ತಿಧದರು. ಆದರೆ ಈ ವರ್ಷ ಹಾಗಲ್ಲ. 'ಬಾಯ್ಸ್ Vs ಗರ್ಲ್ಸ್‌' ರಿಯಾಲಿಟಿ ಶೋವಿನಲ್ಲಿ ಅನುಪಮಾ ಗೌಡ ಅವರು ಬಹಳ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Anupama Gowda says this is the first time I have received so much love

ಅಂದ ಹಾಗೇ ಈ ಬಾರಿಯ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ರೆಟ್ರೋ ಲುಕ್‌ ರೌಂಡ್ ಇರುವ ಕಾರಣ ನಿರೂಪಕಿ ಅನುಪಮಾ ಗೌಡ ಕೂಡಾ ಅದರಂತೆ ರೆಡಿ ಆಗಿದ್ದಾರೆ. ಅಂದರೆ 80ರ ದಶಕದ ನಟಿಯಂತೆ ಅನುಪಮಾ ಅಲಂಕಾರ ಮಾಡಿಕೊಂಡಿದ್ದಾರೆ. ಇದೀಗ ಅದೇ ವೇದಿಕೆಯಲ್ಲಿ ಅನುಪಮಾ ಗೌಡ ಅವರ ಬರ್ತ್ ಡೇ ಸೆಲೆಬ್ರೇಶನ್ ನಡೆದಿದೆ. ಅಂದ ಹಾಗೇ ಅನುಪಮಾ ಅವರಿಗೆ ಬಿಗ್ ಸರ್ಪ್ರೈಸ್ ಕೊಟ್ಟಿದ್ದು ಬೇರಾರೂ ಅಲ್ಲ, ಆಕೆಯ ತಾಯಿ.

'ಬಾಯ್ಸ್ Vs ಗರ್ಲ್ಸ್‌' ರಿಯಾಲಿಟಿ ಶೋ ಸ್ಪರ್ಧಿಗಳು ಹುಟ್ಟುಹಬ್ಬದ ಸಲುವಾಗಿ ಅನುಪಮಾ ಗೌಡ ಅವರಿಗೆ ಬದುಕಿನಲ್ಲಿ ಮರೆಯಲಾರದಂತಹ ಸರ್ಪ್ರೈಸ್ ಕೊಟ್ಟಿದ್ದಾರೆ. ಮಾತ್ರವಲ್ಲ ರಿಯಾಲಿಟಿ ಶೋ ವೇದಿಕೆಯಲ್ಲಿ ಅನುಪಮಾ ಅವರ ಕೈಯಿಂದ ಕೇಕ್ ಕೂಡಾ ಕಟ್ ಮಾಡಿಸಿದ್ದಾರೆ.

"ಮನೆ ಕೆಲಸ ಮಾಡಿಕೊಂಡು ಬೆಳೆದ ಹುಡುಗಿ ಈಗ ಕರ್ನಾಟಕದ ಮನೆ ಮಗಳು ಆಗಿದ್ದೀರಾ" ಎಂದು ನಟ, ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಸ್ಪರ್ಧಿ ಮಂಜು ಪಾವಗಡ ಅವರು ಅನುಪಮಾ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಇನ್ನು ತಮ್ಮ ಅಮ್ಮ ಆಗಮಿಸಿರುವುದು ಕಂಡು ಅನುಪಮಾ ಗೌಡಗೆ ಆಶ್ಚರ್ಯವಾಗಿದೆ. ಜೊತೆಗೆ ಶಾಕ್ ಕೂಡಾ. ಇನ್ನು ಅನುಪಮಾ ಅವರ ಅಮ್ಮ ಅಂತೂ ತಮ್ಮ ಮುದ್ದು ಮಗಳ ಮುಖವನ್ನು ಅಚ್ಚೆಯಾಗಿ ತನ್ನ ಕೈಯಲ್ಲಿ ಹಾಕಿಸಿಕೊಂಡಿದ್ದಾರೆ. ಇದನ್ನು ಕಂಡ ಅನುಪಮಾ ಗೌಡ ಅಂತೂ "ಇದಕ್ಕಿಂತ ಹೆಮ್ಮೆ ಏನಮ್ಮಾ ಬೇಕು? ಏಳೇಳು ಜನ್ಮಕ್ಕೂ ಇದೆ ನಂಗೆ ಗಿಫ್ಟ್‌" ಎಂದು ಸಂತಸಪಟ್ಟುಕೊಂಡಿದ್ದಾರೆ.

ಅಂದ ಹಾಗೇ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋ ವೇದಿಕೆಯಲ್ಲಿ ಅನುಪಮಾ ಗೌಡ ಅವರು ತಮ್ಮ ಬರ್ತ್ ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ "ನನಗೆ ಇಷ್ಟೊಂದು ಪ್ರೀತಿ ಸಿಕ್ಕಿರುವುದು ಇದೇ ಮೊದಲ ಬಾರಿ" ಎಂದು ಅನುಪಮಾ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Anupama Gowda celebrates her birthday on the stage of the Boys vs Girls reality show
Read more about: actress anupama gowda serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X