ನಟನೆಯಿಂದ ದೂರ ಉಳಿದಿರುವುದೇಕೆ ಬಿಗ್‌ಬಾಸ್ ಖ್ಯಾತಿಯ ಅನುಪಮಾ ಗೌಡ?

By ಪ್ರಿಯಾ ದೊರೆ

ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಮೊದಲು 'ಲಂಕೇಶ್ ಪತ್ರಿಕೆ' ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟರು.

'ಹಳ್ಳಿ ದುನಿಯಾ' ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಅನುಪಮಾ ಗೌಡ ಸ್ಫರ್ಧಿಸಿದ್ದರು. ನಂತರ 'ಅಕ್ಕ' ಧಾರಾವಾಹಿಯಲ್ಲಿ ಡಬಲ್ ಆಕ್ಟಿಂಗ್ ಮಾಡಿ ಮನೆ ಮಾತಾದರು.

'ಅಕ್ಕ' ಧಾರಾವಾಹಿ ಮುಗಿದ ಮೇಲೆ ಅನುಪಮಾ ಗೌಡ ಮತ್ತೆ ಸೀರಿಯಲ್‌ಗಳಲ್ಲಿ ನಟಿಸಲಿಲ್ಲ. ಬದಲಿಗೆ ಮತ್ತೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರು.

Anupama Gowda talks decision to step away from acting

ರಿಯಾಲಿಟಿ ಶೋನಲ್ಲಿ ಭಾಗವಹಿಸಿದರಿಂದ ನಿರೂಪಣೆವರೆಗೂ

ಬಿಗ್ ಬಾಸ್ ಸೀಸನ್- 5 ರಿಯಾಲಿಟಿ ಶೋನಲ್ಲಿ ಅನುಪಮಾ ಗೌಡ ಭಾಗವಹಿಸಿದರು. ಫಿನಾಲೆವರೆಗೂ ಆಟವಾಡಿ ಹೊರಬಂದ ಬಳಿಕ ಕೊಂಚ ಬ್ರೇಕ್ ಪಡೆದು ಮತ್ತೆ ನಿರೂಪಕಿಯಾಗಿ ಎಂಟ್ರಿ ಕೊಟ್ಟರು. ಕೆಲ ಕಾಮಿಡಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನು ಅನುಪಮಾ ಗೌಡ ನಿರೂಪಣೆ ಮಾಡಿದರು. ಪುನಃ ಬಿಗ್ ಬಾಸ್ ಸೀಸನ್ -9 ರಲ್ಲಿ ಪ್ರವೀಣರಾಗಿ ಭಾಗವಹಿಸಿದರು. ಮೊದಲ ಬಾರಿಗಿಂತಲೂ ಎರಡನೇಯ ಸಲ ಅದ್ಭುತವಾಗಿ ಆಟವಾಡಿದರು. ಈ ಮೂಲಕ ತಮ್ಮ ಅಭಿಮಾನಿಗಳ ಸಂಖ್ಯೆ ಹೆಚ್ಚಿಸಿಕೊಂಡರು. 'ಮಜಾಭಾರತ', 'ನನ್ನಮ್ಮ ಸೂಪರ್ ಸ್ಟಾರ್', 'ರಾಜಾ ರಾಣಿ' ಎಂಬ ಶೋಗಳನ್ನು ನಡೆಸಿಕೊಟ್ಟರು. ಅನುಪಮಾ ಆಂಕರಿಂಗ್ ಅನ್ನು ಸಾಕಷ್ಟು ಮಂದಿ ಇಷ್ಟ ಪಟ್ಟರು.

ಆಕ್ಟೀವ್ ಆಗಿರುವ ನಟಿ ಅನುಪಮಾ ಗೌಡ

ಈಗ ಕಲರ್ಸ್ ಕನ್ನಡ ವಾಹಿನಿಯಿಂದ ಸ್ಟಾರ್ ಸುವರ್ಣ ವಾಹಿನಿಗೆ ಶಿಫ್ಟ್ ಆಗಿದ್ದು, 'ಸುವರ್ಣ ಪ್ರೇಮೋತ್ಸವ' ಸೇರಿದಂತೆ ಕೆಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸದ್ಯ ಸ್ಟಾರ್ ಸುವರ್ಣವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಜಾಕ್ ಪಾಟ್' ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಅನುಪಮಾ ಗೌಡ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ದಿನಚರಿ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿರುತ್ತಾರೆ. ಅನುಪಮಾ ಗೌಡ ಅವರದ್ದೇ ಯೂಟ್ಯೂಬ್ ಚಾನೆಲ್ ಇದ್ದು, ಇದರಲ್ಲಿ ತಮ್ಮ ದಿನಚರಿ, ಅಡುಗೆ ರೆಸಿಪಿಗಳು, ಪ್ರವಾಸ, ಶೂಟಿಂಗ್ ಎಲ್ಲದರ ಬಗ್ಗೆ ಅಪ್ಲೋಡ್ ಮಾಡುತ್ತಿರುತ್ತಾರೆ. ಗೋವಾ, ಥೈಲ್ಯಾಂಡ್ ಅಂತೆಲ್ಲಾ ಪ್ರವಾಸ ಮಾಡಿ ಎಂಜಾಯ್ ಮಾಡಿದ್ದಾರೆ.

Anupama Gowda talks decision to step away from acting

ನಿರೂಪಣೆಯಲ್ಲಿ ಬ್ಯುಸಿಯಾದ ನಟಿ

ಅನುಪಮಾ ಗೌಡ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ಮಿಂಚಿದ್ದರು. ಸಿನಿಮಾ, ಕಿರುತೆರೆ, ನಟನೆ, ನಿರೂಪಣೆ ಎಲ್ಲದರಲ್ಲೂ ಕಾಣಿಸಿಕೊಂಡಿರುವ ಅನುಪಮಾ ಇತ್ತೀಚೆಗೆ ನಟನೆಯಿಂದ ದೂರ ಉಳಿದಿದ್ದಾರೆ. ಬೇರೆ ನಟಿಯರು ಒಂದಾದ ಮೇಲೆ ಒಂದು ಧಾರಾವಾಹಿ ಇಲ್ಲವೇ ಸಿನಿಮಾ ಎಂದು ಆಕ್ಟೀವ್ ಆಗಿದ್ದು ಅನುಪಮಾ ಮಾತ್ರ ನಿರೂಪಣೆಯಲ್ಲೇ ಉಳಿದು ಬಿಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಅನುಪಮಾ ಅವರು ನಟನೆಯನ್ನು ದೂರವಿಟ್ಟಲ್ಲ. ಬದಲಿಗೆ ಆಕೆ ಬಯಸುತ್ತಿರುವ ಪಾತ್ರಗಳು ಸಿಗುತ್ತಿಲ್ಲವಂತೆ.

ಒಂದೇ ರೀತಿಯ ಪಾತ್ರ ಬೇಡ

ಈ ಬಗ್ಗೆ ಸ್ವತಃ ಅನುಪಮಾ ಗೌಡ ಅವರೇ ಹೇಳಿಕೊಂಡಿದ್ದಾರೆ. 'ಅಕ್ಕ' ಪಾತ್ರಕ್ಕಿಂತಲೂ ಉತ್ತಮವಾದ ಪಾತ್ರ ಸಿಕ್ಕಲ್ಲಿ ಧಾರಾವಾಹಿಯಲ್ಲಿ ನಟಿಸಲು ಬಯಸುತ್ತಿದ್ದಾರೆ. ಸಿನಿಮಾಗಳ ಆಫರ್ ಇದ್ದರೂ ಕೂಡ ಎಲ್ಲವೂ 'ಆ ಕರಾಳ ರಾತ್ರಿ' ಸಿನಿಮಾದಲ್ಲಿ ಸಿಕ್ಕ ಪಾತ್ರವನ್ನೇ ಹೋಲುತ್ತಿವೆಯಂತೆ. ಒಂದೇ ರೀತಿ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲು ಇಷ್ಟವಿಲ್ಲ. ಚಾಲೆಂಜಿಂಗ್ ಆಗಿಯೂ ಉತ್ತಮವಾದಂತಹ ಪಾತ್ರಗಳು ಸಿಕ್ಕರೆ ಈಗಲೂ ಸಿನಿಮಾ ಮತ್ತು ಧಾರಾವಾಹಿಗಳಿಗೆ ಬಣ್ಣ ಹಚ್ಚುವೆ ಎಂದು ಹೇಳಿದ್ದಾರೆ.

More from Filmibeat

English summary
Anupama Gowdareveals why she stepped away from acting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X