ಹೊಸ ರಿಯಾಲಿಟಿ ಶೋಗೆ ಆಂಕರ್ ಆದ 'ಬಿಗ್ ಬಾಸ್' ಅನುಪಮಾ
Recommended Video

'ಕನ್ನಡದ ಕೋಗಿಲೆ' ಕಲರ್ಸ್ ಸೂಪರ್ ನಲ್ಲಿ ಶುರುವಾಗುತ್ತಿರುವ ಹೊಸ ರಿಯಾಲಿಟಿ ಶೋ. ಸಾಧು ಕೋಕಿಲ, ಚಂದನ್ ಶೆಟ್ಟಿ ಹಾಗೂ ಅರ್ಚನಾ ಉಡುಪ ಈ ರಿಯಾಲಿಟಿ ಶೋ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಜೂನ್ 30 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7 ಗಂಟೆಗೆ ಪ್ರಸಾರ ಆಗಲಿದೆ.
'ಕನ್ನಡದ ಕೋಗಿಲೆ' ರಿಯಾಲಿಟಿ ಶೋ ಮೂಲಕ ನಟಿ ಅನುಪಮಾ ಗೌಡ ನಿರೂಪಕಿಯಾಗಿ ಕಿರುತೆರೆಗೆ ಪರಿಚಿತವಾಗುತ್ತಿದ್ದಾರೆ. ಈಗಾಗಲೇ 'ಅಕ್ಕ' ದಾರಾವಾಹಿ ಮೂಲಕ ಮನೆ ಮಾತಾಗಿರುವ ಅನುಪಮಾ ಇನ್ನು ಮುಂದೆ ಆಂಕರ್ ಆಗಲಿದ್ದಾರೆ. ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಮಾಡುವ ಮೂಲಕ 40 ಸ್ಪರ್ಧಿಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ.

ಈ ರಿಯಾಲಿಟಿ ಶೋ ವಿಶೇಷ ಅಂದರೆ 6 ರಿಂದ 60 ವರ್ಷದ ವರೆಗಿನ ಸ್ಪರ್ಧಿಗಳು 'ಕನ್ನಡ ಕೋಗಿಲೆ'ಯಲ್ಲಿ ಭಾಗಿಯಾಗಲಿದ್ದಾರೆ. ಮೊದಲ ಹಂತದ ನಂತರ 40 ಸ್ಪರ್ಧಿಗಳನ್ನು ಬೇರೆ ಬೇರೆ ತಂಡಗಳಾಗಿ ವಿಂಗಡಿಸಿ ನಂತರ ಅವರಿಗೆ ನುರಿತ ಗಾಯಕರಿಂದ ತರಬೇತಿ ಕೊಡಿಸಲಾಗುತ್ತದೆ.
ಈಗಾಗಲೇ 'ಕನ್ನಡ ಕೋಗಿಲೆ'ಯ ಮೊದಲ ಎಪಿಸೋಡ್ ಚಿತ್ರೀಕರಣವಾಗಿದ್ದು ಗಾಯಕಿ ಉಷಾ ಉತ್ತುಪ್ ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ವಿಶೇಷಗಳಿಂದ ಕೂಡಿರುವ 'ಕನ್ನಡ ಕೋಗಿಲೆ' ರಿಯಾಲಿಟಿ ಶೋ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ ಆಗಲಿದೆ.


Click it and Unblock the Notifications











