ಕಿರುತೆರೆ ನಟನ ವಿರುದ್ಧ ಬ್ಲ್ಯಾಕ್‌ಮೇಲ್‌ ಆರೋಪ ಮಾಡಿದ ಗೆಳತಿ, ಶೂಟಿಂಗ್ ಸೆಟ್‌ಗೆ ಬಂದ ಪೊಲೀಸರು..!

ಈಗೀಗ ಸೆಲೆಬ್ರೆಟಿಗಳ ಮೇಲೆ ವಂಚನೆ, ದ್ರೋಹ, ಚೆಕ್ ಬೌನ್ಸ್ ಆರೋಪಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಥರ ಥರದ ವೇಷ ತೊಟ್ಟ, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಪೊಲೀಸರು ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದಾರೆ. ಕಿರುತೆರೆಯ ನಾಯಕನ ಪ್ರೇಯಸಿಯ ದೂರಿನ ಮೇರೆಗೆ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಹೌದು, ಹಿಂದಿಯಲ್ಲಿ ಖ್ಯಾತ ಧಾರಾವಾಹಿಯೊಂದು ಪ್ರಸಾರವಾಗುತ್ತೆ. ಆ ಧಾರಾವಾಹಿಯ ಹೆಸರು ಅನುಪಮಾ. ರೂಪಾಲಿ ಗಂಗೂಲಿ ಅವರ ಪಾತ್ರದ ಸುತ್ತ ಸುತ್ತುವ ಈ ಧಾರಾವಾಹಿಯಲ್ಲಿ ಜರಿನ್ ಸೂರಿ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಇದೇ ಜತಿನ್ ಸೂರಿ ಅವರ ವಿರುದ್ಧ ಅವರ ಗೆಳತಿ ತಿರುಗಿ ಬಿದ್ದಿದ್ದಾರೆ. ಬ್ಲ್ಯಾಕ್ ಮೇಲ್ ಆರೋಪವನ್ನು ಮಾಡಿದ್ದಾರೆ. ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ರಂಪ ಮಾಡಿದ್ಧಾರೆ.

anupama-rocked-by-scandal-jatin-suri-faces-blackmail-charges-police-arrive-on-set-amid-chaos

ಇಂಡಿಯಾ ಫೋರಮ್ಸ್ ವರದಿಯ ಪ್ರಕಾರ ಮುಂಬೈನ ಫಿಲ್ಮ್ ಸಿಟಿಯಲ್ಲಿ ಅನುಪಮಾ ಧಾರಾವಾಹಿಯ ಚಿತ್ರೀಕರಣ ನಡೆಯುತ್ತಿತ್ತು. ಈ ಸಮಯದಲ್ಲಿ ಅಲ್ಲಿಗೆ ಬಂದ ಜತಿನ್ ತಿವಾರಿ ಅವರ ಗೆಳತಿ ಜತಿನ್ ತಮ್ಮನ್ನ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಈ ಸಮಯದಲ್ಲಿ ಜತಿನ್ ಮತ್ತು ಗೆಳತಿಯ ನಡುವೆ ವಾಗ್ಯುದ್ದ ನಡೆದಿದ್ದು ಪರಿಸ್ಥಿತಿ ಕೈ ಮೀರಿದಾಗ ಜತಿನ್ ಅವರ ಗೆಳತಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆ ನಂತರ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಪೊಲೀಸರ ಆಗಮನದಿಂದ ಸಹಜವಾಗಿಯೇ ಅನುಪಮಾ ಸೆಟ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು, ಠಾಣೆಗೆ ಹೊರಡುವ ಮುನ್ನ ಈ ವಿಚಾರಕ್ಕೆ ಸಂಬಂಧಿಸಿದಂತೆ ಜತಿನ್ ಮಾತನಾಡಲು ನಿರಾಕರಿಸಿದ್ದಾರೆ.

ಅಂದ್ಹಾಗೇ ಅನುಪಮಾ ಧಾರಾವಾಹಿ ಮೊದಲು ಜತಿನ್ ಸೂರಿ 2015ರಲ್ಲಿ ಪ್ರಸಾರವಾದ ಏಕ್ ಥಾ ರಾಜಾ ಏಕ್ ಥಿ ರಾಣಿ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಗೆದ್ದಿದ್ದರು. ಆ ನಂತರ ಸೌಭಾಗ್ಯವತಿ ಭವ: ಧಾರಾವಾಹಿ ಮಾಡಿದ್ದ ಜತಿನ್ 2023ರಲ್ಲಿ ನಿಯಮ್ ಔರ್ ಶರ್ತೇ ಲಾಗು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದರು.

ಇನ್ನು, ಈ ವರ್ಷದ ಆರಂಭದಿಂದ ಅಂದರೆ ಫೆಬ್ರವರಿಯಿಂದ ಅನುಪಮಾ ಧಾರಾವಾಹಿಯ ಭಾಗವಾದ ಜತಿನ್ ಈ ಧಾರಾವಾಹಿಯಲ್ಲಿ ಅನಿಲ್ ಮತ್ತು ಮಿತಾ ಅವರ ಹಿರಿಯ ಮಗ ರಾಜಾ ಕೊಠಾರಿ ಪಾತ್ರಕ್ಕೆ ಬಣ್ಣ ಹಚ್ಚಲು ಶುರು ಮಾಡಿದ್ದರು.

ಇನ್ನು ಅನುಪಮಾ ಧಾರಾವಾಹಿಯಲ್ಲಿ ನಟಿಸುತ್ತಿರುವುದರ ಕುರಿತು Eಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಸಂಭ್ರಮವನ್ನು ಜತಿನ್ ಸೂರಿ ಹಂಚಿಕೊಂಡಿದ್ದರು. ಅನುಪಮಾ ಕಿರುತೆರೆಯ ನಂಬರ್ ಓನ್ ಧಾರಾವಾಹಿ. ನಮ್ಮ ಮನೆಯಲ್ಲಿ ನೋಡಲ್ಪಡುವ ಏಕೈಕ ಧಾರಾವಾಹಿ ಇದು ಎಂದು ಹೇಳಿದ್ದ ಜತಿನ್ ನನ್ನ ತಾಯಿ ನಾನು ಈ ಕಾರ್ಯಕ್ರಮದ ಭಾಗವಾಗಬೇಕೆಂದು ಸದಾ ಆಶಿಸಿದ್ದರು, ಅವರ ಆಶಯದಂತೆ ನನಗೆ ಅನುಪಮಾ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದೆ ನಾನೇ ಭಾಗ್ಯವಂತ ಎಂದು ಹೇಳಿದ್ದರು.

ಸದ್ಯ ಜತಿನ್ ಸೂರಿ ಮತ್ತು ಅವರ ಗೆಳತಿಯನ್ನು ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ದು, ಇಡೀ ಪ್ರಕರಣದ ಕುರಿತು ಜತಿನ್ ಸೂರಿ ಸ್ಪಷ್ಟೀಕರಣವನ್ನು ನೀಡಬೇಕಿದೆ. ಬ್ಲ್ಯಾಕ್ ಮೇಲ್ ಆರೋಪವನ್ನು ಮಾಡಿರುವ ಜತಿನ್ ಸೂರಿ ಅವರ ಗೆಳತಿ ಕೂಡ ಮಾಧ್ಯಮದವರ ಮುಂದೆ ಬಂದು ಮಾತನಾಡಬೇಕಿದೆ.

More from Filmibeat

English summary
Shocking twist off-screen! Anupamaa actor Jatin Suri accused of blackmail—police arrive at Mumbai shoot location.
Read more about: fraud ಟಿವಿ actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X