ಕೂದಲೆಳೆಯ ಅಂತರದಲ್ಲಿ 25 ಲಕ್ಷ ಕಳೆದುಕೊಂಡ ಕೋಟ್ಯಧಿಪತಿ ಸ್ಪರ್ಧಿ ಅನುರಾಧ
ಈ ವಾರ ಕನ್ನಡದ ಕೋಟ್ಯಧಿಪತಿ ಭಾರಿ ಕುತೂಹಲ ಉಂಟು ಮಾಡಿತ್ತು. ಯಾಕಂದ್ರೆ ಹಾಟ್ ಸೀಟ್ ನಲ್ಲಿ ಕೂತಿದ್ದ ಅನುರಾಧ ಅವರು 25 ಲಕ್ಷದ ಹಂತಕ್ಕೆ ಬಂದಿದ್ದರು. ಆ ಪ್ರಶ್ನೆಗೆ ಉತ್ತರ ಕೂಡ ಕೊಟ್ಟಿದ್ದರು. ಅದು ಸರಿಯಾಗಿತ್ತಾ ಅಥವಾ ತಪ್ಪಾಗಿತ್ತಾ ಎಂಬ ಚರ್ಚೆಯೊಂದಿಗೆ ಎಪಿಸೋಡ್ ಆರಂಭವಾಯಿತು.
ಬಹಳ ಕಾನ್ಫಿಡೆಂಟ್ ಆಗಿ ಆಟ ಆಡಿದ ಅನುರಾಧ ಅವರು ತಮ್ಮ ಬಳಿ ಇದ್ದ ಮೂರು ಲೈಫ್ ಲೈನ್ ಬಳಸಿ 12.50 ಲಕ್ಷ ಗೆದ್ದರು. ನಂತರ 25 ಲಕ್ಷದ ಪ್ರಶ್ನೆಯನ್ನ ಕೂಡ ಎದುರಿಸಿದರು. ಆಗ ತಮ್ಮ ಬಳಿ ಇದ್ದಿದ್ದು ಹೆಚ್ಚುವರಿಯಾಗಿ ಸಿಕ್ಕಿದ್ದ ಡಬಲ್ ಡಿಪ್ (ಎರಡು ಉತ್ತರ ಕೊಡಬಹುದು, ಆದರೆ ಆಟವನ್ನ ಕ್ವಿಟ್ ಮಾಡುವಂತಿಲ್ಲ) ಲೈಫ್ ಲೈನ್ ಒಂದೆ.
ಉತ್ತರ ಸರಿ ಇದ್ದರೆ 25 ಲಕ್ಷ ಸಿಗುತ್ತೆ. ತಪ್ಪಿದ್ದರೆ 3.20 ಲಕ್ಷಕ್ಕೆ ಜಾರುವ ಆತಂಕ ಇತ್ತು. ಆದರೂ ಧೃತಿಗೆಡದೆ ಅನುರಾಧ ಉತ್ತರ ಕೊಟ್ಟೆ ಕೊಟ್ಟರು. ಆದರೆ ಅನುರಾಧ ಕೊಟ್ಟ ಎರಡೂ ಉತ್ತರವೂ ತಪ್ಪಾಗಿತ್ತು. ಅಷ್ಟಕ್ಕೂ ಆ ಪ್ರಶ್ನೆ ಯಾವುದು? ಮುಂದೆ ಓದಿ....

25 ಲಕ್ಷದ ಪ್ರಶ್ನೆ ಯಾವುದಾಗಿತ್ತು?
ಕರ್ನಾಟಕದ ಈ ಮುಖ್ಯಮಂತ್ರಿಗಳಲ್ಲಿ ಯಾರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿರಲಿಲ್ಲ?
A ಕಡಿದಾಳ್ ಮಂಜಪ್ಪ
B ಕೆ ಚಂಗಲರಾಯ ರೆಡ್ಡಿ
C ಕೆಂಗಲ್ ಹನುಮಂತಯ್ಯ
D ಎಸ್ ನಿಜಲಿಂಗಪ್ಪ

ಮೊದಲ ಉತ್ತರ ತಪ್ಪು, ಎರಡನೇಯದು ತಪ್ಪು
ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಅನುರಾಧ ಅವರಿಗೂ ಗೊತ್ತಿರಲಿಲ್ಲ. ಆದರೆ ಕೆ ಚಂಗಲ ರಾಯ ರೆಡ್ಡಿ ಇರಬಹುದು ಎಂಬ ಅನುಮಾನ ಕಾಡಿತ್ತು. ಹಾಗಾಗಿ, ಆಟವನ್ನ ಕ್ವಿಟ್ ಮಾಡಲು ಮನಸ್ಸು ಮಾಡದ ಅನುರಾಧ ಡಬಲ್ ಡಿಪ್ ಲೈಫ್ ಲೈನ್ ಬಳಕೆ ಮಾಡಿದರು. ಅದರ ಅನ್ವಯ ಮೊದಲ ಉತ್ತರ B ಕೆ ಚಂಗಲ ರಾಯ ರೆಡ್ಡಿ ಲಾಕ್ ಮಾಡಿದರು. ಆದರೆ ಅದು ತಪ್ಪಾಗಿತ್ತು. ನಂತರ D ಎಸ್ ನಿಜಲಿಂಗಪ್ಪ ಎಂದು ಇನ್ನೊಂದು ಉತ್ತರ ಕೊಟ್ಟರು. ದುರಾದೃಷ್ಟವಶಾತ್ ಅದು ತಪ್ಪಾಗಿತ್ತು.

12.50 ಲಕ್ಷ ಕಳೆದುಕೊಂಡ ಅನುರಾಧ
25 ಲಕ್ಷದ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟ ಕಾರಣ ಅನುರಾಧ ಅವರು ತಮ್ಮ ಕೈಯಲ್ಲಿದ್ದ 12.50 ಲಕ್ಷವನ್ನ ಕೂಡ ಕಳೆದುಕೊಂಡರು. ಹಾಗಾಗಿ, ಎರಡನೇ ಸೇಫ್ ಝೋನ್ ಬಂದಿದ್ದ ಅನುರಾಧ ಅವರಿಗೆ 3.20 ಲಕ್ಷ ಮಾತ್ರ ಉಳಿದುಕೊಂಡಿತು. ಒಂದು ವೇಳೆ 25 ಲಕ್ಷದ ಪ್ರಶ್ನೆಗೆ ಉತ್ತರ ಕೊಡುವ ಬದಲು ಕ್ವಿಟ್ ಮಾಡಿದ್ದರೆ 12.50 ಲಕ್ಷ ಅನುರಾಧ ಅವರ ಬಳಿ ಉಳಿದುಕೊಳ್ಳುತ್ತಿತ್ತು.

ಸರಿ ಉತ್ತರ ಯಾವುದಾಗಿತ್ತು?
ಕರ್ನಾಟಕದ ಈ ಮುಖ್ಯಮಂತ್ರಿಗಳಲ್ಲಿ ಯಾರು ಭಾರತದ ಸಂವಿಧಾನ ಸಭೆಯ ಸದಸ್ಯರಾಗಿರಲಿಲ್ಲ? ಈ ಪ್ರಶ್ನೆಗೆ ಸರಿ ಉತ್ತರ A ಕಡಿದಾಳ್ ಮಂಜಪ್ಪ. ತಪ್ಪು ಉತ್ತರ ಕೊಟ್ಟ ಅನುರಾಧ ಅವರ ಸಿಕ್ಕಿದ್ದ ಅವಕಾಶವನ್ನ ಕಳೆದುಕೊಂಡರು. ಸಹಜವಾಗಿ ತಪ್ಪು ಉತ್ತರ ನೀಡಿದರಿಂದ ಕಣ್ಣಲ್ಲಿ ನೀರು ಹಾಕಿದರು.


Click it and Unblock the Notifications











