ಕೋಟ್ಯಧಿಪತಿಯ ಈ ಆವೃತ್ತಿಯಲ್ಲಿ ಯಾರೂ ಮಾಡದ ದಾಖಲೆ ಮಾಡ್ತಾರಾ ಅನುರಾಧಾ?
ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ್ದ ಮೊದಲ ಸ್ಪರ್ಧಿ ದೀಪಾ ಅವರು 25 ಲಕ್ಷದ ಪ್ರಶ್ನೆ ಎದುರಿಸಿದರು. ಆದರೆ ಉತ್ತರ ಗೊತ್ತಾಗದೆ ಆಟವನ್ನ ಕ್ವಿಟ್ ಮಾಡಿ 12.5 ಲಕ್ಷ ಉಳಿಸಿಕೊಂಡರು.
ವೈಭವ್ ಕೂಡ 25 ಲಕ್ಷ ಹಂತಕ್ಕೆ ಬಂದಿದ್ದರು. ಪ್ರಶ್ನೆ ನೋಡಿದ ಬಳಿಕ ಉತ್ತರ ಗೊತ್ತಾಗದೆ ಆಟವನ್ನ ಕ್ವಿಟ್ ಮಾಡಿದರು. ಆಮೇಲೆ ದೇವಮ್ಮ ಕೂಡ 25 ಲಕ್ಷದ ಪ್ರಶ್ನೆಯ ಹಂತಕ್ಕೆ ಬಂದಿದ್ದರು. ಬಟ್, ಧೈರ್ಯ ಮಾಡಲಿಲ್ಲ. ಆಟವನ್ನ ಕ್ವಿಟ್ ಮಾಡಿದರು.
ಹೀಗೆ, ಇದುವರೆಗೂ ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಕುಳಿತುಕೊಂಡಿದ್ದವರಿಗೆ 25 ಲಕ್ಷ ಪ್ರಶ್ನೆ ಎದುರಿಸಿದವರು ಕೇವಲ ಮೂವರು ಮಾತ್ರ. ಇದೀಗ, ಮೊಟ್ಟ ಮೊದಲ ಸ್ಪರ್ಧಿ 25 ಲಕ್ಷದ ಪ್ರಶ್ನೆ ಉತ್ತರಿಸಿದ್ದಾರೆ ಎನ್ನಲಾಗಿದೆ. ಮುಂದೆ ಓದಿ......

25 ಲಕ್ಷದ ಪ್ರಶ್ನೆಗೆ ಎದುರಿಸಿದ ಅನುರಾಧಾ
ಈ ವಾರ ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಅನುರಾಧಾ ಅವರು ಕುಳಿತುಕೊಂಡಿದ್ದಾರೆ. ಭರ್ಜರಿಯಾಗಿ ಆಟ ಆಡಿರುವ ಅನುರಾಧ ಅವರು 12.5 ಲಕ್ಷ ಗೆದ್ದಿದ್ದಾರೆ. 25 ಲಕ್ಷದ ಪ್ರಶ್ನೆಯನ್ನ ಎದುರಿಸುತ್ತಿದ್ದಾರೆ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಬಿಡುಗಡೆ ಮಾಡಿದೆ.
ಮೊದಲ ಸಂಚಿಕೆಯಲ್ಲೇ ದೊಡ್ಡ ಮೊತ್ತ ಗೆದ್ದ ಕೋಟ್ಯಧಿಪತಿಯ ಮೊದಲ ಸ್ಪರ್ಧಿ

ಮೊದಲ ಸ್ಪರ್ಧಿಯಾಗಲಿದ್ದಾರೆ ಅನು
ಸದ್ಯ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋ ಪ್ರಕಾರ ಅನುರಾಧ ಅವರು 25 ಲಕ್ಷದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅದು ಸರಿ ಆಗಿದ್ಯಾ ಅಥವಾ ತಪ್ಪು ಆಗಿದ್ಯಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಉತ್ತರಿಸಲು ಪ್ರಯತ್ನಿಸಿರುವುದು ತಿಳಿದಿದೆ. ''ಇಪ್ಪತ್ತೈದು ಲಕ್ಷದ ಪ್ರಶ್ನೆ, ಯಾರೂ ತಲುಪದ ಘಟ್ಟದಲ್ಲಿ ಕಂಟೆಸ್ಟಂಟ್ ಅನುರಾಧಾ ಅವರ ದೊಡ್ಡ ರಿಸ್ಕ್!'' ಎಂದು ಕಲರ್ಸ್ ವಾಹಿನಿ ಪೋಸ್ಟ್ ಕೂಡ ಮಾಡಿದ್ದಾರೆ.

ಅನುರಾಧ ಗೆದ್ರೆ ದಾಖಲೆ
ಒಂದು ವೇಳೆ ಅನುರಾಧ ಅವರು ಕೊಟ್ಟ ಉತ್ತರ ಸರಿಯಾಗಿದ್ದರೆ ಈ ಆವೃತ್ತಿಯಲ್ಲಿ 25 ಲಕ್ಷ ಗೆದ್ದ ಮೊದಲ ಸ್ಪರ್ಧಿಯಾಗಲಿದ್ದಾರೆ. 25 ಲಕ್ಷಕ್ಕೆ ರಿಸ್ಕ್ ತೆಗೆದುಕೊಂಡ ಅನುರಾಧ ಅವರು 50 ಲಕ್ಷಕ್ಕೂ ಅದೇ ನಿರ್ಧಾರ ತೆಗೆದುಕೊಂಡರು ಅಚ್ಚರಿ ಇಲ್ಲ.

ಒಂದು ಕೋಟಿ ಗೆದ್ದಿರುವುದು ಒಬ್ಬರೇ
ಕನ್ನಡದ ಕೋಟ್ಯಧಿಪತಿಯ ನಾಲ್ಕು ಆವೃತ್ತಿಗಳ ಇತಿಹಾಸದಲ್ಲಿ ಇದುವರೆಗೂ ಒಂದು ಕೋಟಿ ಗೆದ್ದಿರುವುದು ಹುಸೇನ್ ಬಾಷಾ ಒಬ್ಬರೆ. ಕನ್ನಡದ ಕೋಟ್ಯಧಿಪತಿಯ ಎರಡನೇ ಆವೃತ್ತಿಯಲ್ಲಿ ಹುಸೇನ್ ಬಾಷಾ ಎಂಬುವರು ಮೊದಲ ಬಾರಿಗೆ 1 ಕೋಟಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 28 ಮತ್ತು 29 ಏಪ್ರಿಲ್ 2013 ರಂದು ಈ ಎಪಿಸೋಡ್ ಪ್ರಸಾರವಾಗಿತ್ತು.


Click it and Unblock the Notifications











