ರಹಸ್ಯ ಟಾಸ್ಕ್ ನಿಭಾಯಿಸುವಲ್ಲಿ ವಿಫಲರಾದ ಅನುಶ್ರೀ
ಅನುಶ್ರೀ ಅವರ ಪಾಲಿಗೆ ಇದು ನಿಜಕ್ಕೂ ಸವಾಲಾಗಿತ್ತು. ಅವರು ಎಲ್ಲರೊಂದಿಗೂ ಮಾತನಾಡದೆ ಬೇಸರದಿಂದ ಇರುವಂತೆ ನಡೆದುಕೊಂಡರು. ಅವರ ಬದಲಾದ ನಡವಳಿಕೆ ಎಲ್ಲರ ಗಮನಕ್ಕೂ ಬಂದು ಅರುಣ್ ಸಾಗರ್, ವಿಜಯ್ ರಾಘವೇಂದ್ರ ಎಲ್ಲರೂ ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಸಫಲವಾಗಲಿಲ್ಲ.
ಆದರೆ ನಾಮಿನೇಷನ್ ಸುತ್ತಿನಲ್ಲಿ ಎಲ್ಲರೂ ಅನುಶ್ರೀ ಅವರ ಬದಲಾದ ನಡವಳಿಕೆಗೆ ಬೇಸರ ವ್ಯಕ್ತಪಡಿಸಿ ನಾಮಿನೇಟ್ ಮಾಡಿದರು. ಆದರೆ ಅರುಣ್ ಸಾಗರ್ ಮಾತ್ರ ಅನುಶ್ರೀ ಅವರನ್ನು ನಾಮಿನೇಟ್ ಮಾಡಲಿಲ್ಲ. ಈ ಕಾರಣಕ್ಕೆ ಅನುಶ್ರೀ ಅವರು ರಹಸ್ಯ ಟಾಸ್ಕ್ ನಿಭಾಯಿಸುವಲ್ಲಿ ಸೋತರು. ಹಾಗಾಗಿ ಈ ಬಾರಿ ಅವರು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ಅನುಶ್ರೀ ಅವರನ್ನು ಸಮಾಧಾನಪಡಿಸುವ ಹಂತದಲ್ಲಿ ಅರುಣ್ ಸಾಗರ್ ಅವರು ಕೊಂಚ ಓವರ್ ಆಗಿ ನಡೆದುಕೊಂಡರು ಅನ್ನಿಸುತ್ತದೆ. ಅವರು ಯಾವುದೋ ಒಂದು ಸಣ್ಣ ಮಾತಿಗೆ ಪ್ರತಿಕ್ರಿಯಿಸುತ್ತಾ ಅಯ್ಯೋ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು ಎಂದು ಹೇಳಿ ಹಾಗೆಯೇ ಹಣೆಗೆ ತಮ್ಮದೇ ಶೂನಿಂದ ಹೊಡೆದುಕೊಂಡರು. ಇದು ಯಾಕೋ ಅತಿಯಾಯಿತು ಎನ್ನಿಸಿತು.
ಇನ್ನೊಂದು ಕಡೆ ವಿಜಯ್ ರಾಘವೇಂದ್ರ ಅವರು ಅನುಶ್ರೀ ಅವರನ್ನು ಸಮಾಧಾನಪಡಿಸುತ್ತಾ ಅವರು ಕೇಳದೆ ಹೋದಾಗ ಅನುಶ್ರೀ ಕಾಲಿಗೆ ಬೀಳಲೆ ಎಂದರು. ಒಟ್ಟಾರೆಯಾಗಿ ಕೆಲವು ನಾಟಕೀಯ ಬೆಳವಣಿಗೆಗಳಿಂದ ಐವತ್ತನೇ ದಿನದ ಒಂದಷ್ಟು ಬೇಸರ, ಕುತೂಹಲಕ್ಕೆ ಕಾರಣವಾಯಿತು.


Click it and Unblock the Notifications











