ಹುಟ್ಟುಹಬ್ಬದ ದಿನ ಪುನೀತ್‌ ನೆನೆದು ಭಾವನಾತ್ಮಕ ಸಾಲುಗಳನ್ನು ಬರೆದ ಅನುಶ್ರೀ

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಾದ ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಿರೂಪಣೆ ಮಾಡುವವರು ಅನುಶ್ರೀ. ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳ ನಿರೂಪಣೆಯಲ್ಲೇ ಬಿಜಿಯಾಗಿರುವ ಅನುಶ್ರೀ ಕನ್ನಡದ ಟಾಪ್ ಆಂಕರ್ ಕೂಡ ಹೌದು. ನಟಿ, ನಿರೂಪಕಿ ಅನುಶ್ರೀಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತನ್ನ ಹುಟ್ಟುಹಬ್ಬವನ್ನು ಪ್ರತೀ ವರ್ಷ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದ ಅನುಶ್ರೀ ಈ ವರ್ಷ ನನ್ನ ಹುಟ್ಟುಹಬ್ಬಕ್ಕೆ ಕಳೆ ಇಲ್ಲಾ ಎಂದಿದ್ದಾರೆ. ಹುಟ್ಟುಹಬ್ಬದ ದಿನ ಪ್ರತೀ ವರ್ಷ ಮಿಸ್ ಮಾಡದೇ ವಿಶ್ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ನೆನೆದು ಭಾವನಾತ್ಮಕ ಸಾಲುಗಳನ್ನು ಅನುಶ್ರೀ ಬರೆದುಕೊಂಡಿದ್ದಾರೆ. ಅದು ಬೇರೆ ಯಾರು ಅಲ್ಲ ಪುನೀತ್ ರಾಜ್‌ ಕುಮಾರ್.

ನಟಿ, ನಿರೂಪಕಿ ಅನುಶ್ರೀ ಹುಟ್ಟುಹಬ್ಬದ ದಿನ ನಮ್ಮನ್ನೆಲ್ಲ ಅಗಲಿರುವ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ಬೇಸರಗೊಂಡಿದ್ದಾರೆ. ತನ್ನ ಬೇಸರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಹುಟ್ಟುಹಬ್ಬದ ದಿನವಾದ ಇಂದು ಕೂಡ ಅನುಶ್ರೀ ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಜೊತೆಗಿನ ಫೋಟೊ ಒಂದನ್ನು ಶೇರ್ ಮಾಡಿಕೊಳ್ಳುವ ಜೊತೆಗೆ "ಪ್ರತೀ ವರ್ಷ ಹರ್ಷದಿಂದ ಆಚರಿಸುವ ದಿನ...ಯಾಕಂದ್ರೆ ನೀವು ಹಾರೈಸ್ತಿದ್ರಿ... ಆದ್ರೆ ಈ ವರ್ಷ ಹರ್ಷವಿಲ್ಲದ ಈ ದಿನ... ಆದರು ಅಪ್ಪು ಸರ್ ನೀವು ಖಂಡಿತಾ ಆಶೀರ್ವದಿಸುತ್ತಿರುವಿರಿ...ಈ ದಿನ ನಿಮಗೆ ಸಮರ್ಪಣೆ. ನಿಮ್ಮ ಹಾಗೆ ಬದುಕಲು ಅಸಾಧ್ಯ.. ನಿಮ್ಮ ಹಾದಿಯಲ್ಲಿ ನಡೆಯುವ ಪ್ರಯತ್ನ ಸದಾ. ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ

ಅನುಶ್ರೀ ಅವರಿಗೆ ಪುನೀತ್ ರಾಜ್‌ಕುಮಾರ್ ಅಂದ್ರೆ ತುಂಬಾ ಇಷ್ಟ. ಮೊದಲಿನಿಂದಲೂ ಅಪ್ಪು ಬಗ್ಗೆ ವಿಶೇಷ ಗೌರವ ಮತ್ತು ಪ್ರೀತಿ ಅನುಶ್ರೀಗೆ. ಪುನೀತ್ ಅವರನ್ನು ಕಳೆದುಕೊಂಡಾಗಲೂ ತಾನೂ ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮದ ಸ್ಟೇಜ್‌ನಲ್ಲೆ ಗಳಗಳನೆ ಅತ್ತಿರುವುದು ಎಲ್ಲರಿಗೂ ನೆನಪಿದೆ. ಈ ಸಂದರ್ಭದಲ್ಲಿ ನಟಿ ಅನುಶ್ರೀ "'ಕಳೆದ ವರ್ಷ ಹುಟ್ಟುಹಬ್ಬದ ದಿನ ಅಪ್ಪು ಅವರ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದೆ. ಆಗ ಅನುಶ್ರೀ ಬಂದಿದ್ದಾರೆ ಎಂದು ಅವರು ಕೊಡುವ ಅಪ್ಪುಗೆ ಇದ್ಯಲ್ಲ ಮರೆಯಲು ಸಾಧ್ಯವಾಗಲ್ಲ. ಮನೆಗೆ ಎಲ್ಲರೂ ಸ್ವಾಗತಿಸಿತ್ತಾರೆ. ಆದರೆ ಮನೆಯಿಂದ ಹೊರಡುವಾಗ ಬೀಳ್ಕೊಡುವವರು ಕೆಲವರು ಮಾತ್ರ ಆಗಿದ್ದಾರೆ. ಆ ಕೆಲವರಲ್ಲಿ ಅಪ್ಪು ಪ್ರಮುಖರಾಗಿದ್ದಾರೆ. ಅವರ ಮನೆಗೆ ಹೇಗೆ ಸ್ವಾಗತ ಇರುತ್ತೋ ಹಾಗೆಯೇ ಕಳುಹಿಸಿಕೊಡುತ್ತಾರೆ. ಆದರೆ ನಾನು ಅವರ ಮನೆಗೆ ಹೋದರೆ ಸ್ವಾಗತವೂ ಇಲ್ಲ, ಅಪ್ಪು ಸರ್ ಮಲಗಿದ್ದರು ಎಂದು ಹೇಳುತ್ತಾ ಕಣ್ಣೀರಾಗಿದ್ದರು. ಹೀಗೆ ಇಂದು ಹುಟ್ಟು ಹಬ್ಬಕ್ಕು ಅಪ್ಪು ಅವರನ್ನು ನೆನೆದು ಬಾವುಕರಾಗಿದ್ದಾರೆ.

Anushree Wrote Emotional Lines About Puneeth Rajkumar

ಅನುಶ್ರೀ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸೇರಿದಂತೆ ಕುಟುಂಬ ಸದಸ್ಯರು ಮತ್ತು ಚಿತ್ರರಂಗದವರು ಶುಭ ಹಾರೈಸುತ್ತಿದ್ದಾರೆ. ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೇ ಅನುಶ್ರೀ ಒಮ್ಮೆ ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಈಗ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ. ಬೆಂಕಿ ಪಟ್ಣ, ರಿಂಗ್ ಮಾಸ್ಟರ್ ಸಿನಿಮಾದಲ್ಲಿ ನಟಿಸಿದ್ದ ಅನುಶ್ರೀ ಈಗ ಮತ್ತೊಂದು ಪ್ರಾಜೆಕ್ಟ್ ಓಕೆ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಂಡಿದ್ದ ಮಮ್ಮಿ ಮತ್ತು ದೇವಕಿ ಚಿತ್ರಗಳ ನಿರ್ದೇಶಕ ಲೋಹಿತ್ ಗರಡಿಯಲ್ಲಿ ಪಳಗಿರುವ ಪ್ರಭಾಕರನ್ ನಿರ್ದೇಶನದ ಸಿನಿಮಾದಲ್ಲಿ ಅನುಶ್ರೀ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಹಾರರ್, ಡ್ರಾಮಾ ಮತ್ತು ಥ್ರಿಲ್ಲಿಂಗ್ ಅಂಶಗಳನ್ನು ಹೊಂದಿರಲಿದೆ. ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಯತ್ನ ಸಿನಿಮಾದಲ್ಲಿ ಆಗಲಿದೆಯೆಂದು ಚಿತ್ರತಂಡ ಹೇಳಿಕೊಂಡಿತ್ತು, ಈ ಸಿನಿಮಾಗಾಗಿ ನಟಿ ಅನುಶ್ರೀ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ.

More from Filmibeat

English summary
Anchor Anushree's birthday today.And She wrote about Puneeth Rajkumar on Instagram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X