Bigg Boss Telugu: ಬಿಗ್‌ಬಾಸ್ ಶೋ ನಿಲ್ಲಿಸುವಂತೆ ಪಿಟಿಷನ್: ಆಯೋಜಕರಿಗೆ ಕೋರ್ಟ್ ನೋಟಿಸ್
ಹಿಂದಿಯಲ್ಲಿ ಸಕ್ಸಸ್ ಕಂಡ ಬಿಗ್‌ಬಾಸ್ ಶೋ ಈಗ ದಕ್ಷಿಣದ ವಿವಿಧ ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಹಿಂದಿ ನಂತರ ಕನ್ನಡದಲ್ಲಿ ಈ ಶೋ ಹಿಟ್ ಆಗಿತ್ತು. ಸುದೀಪ್ ನಿರೂಪಣೆಯಲ್ಲಿ 9 ಸೀಸನ್ ಕಂಪ್ಲೀಟ್ ಆಗಿದೆ. ತೆಲುಗಿನಲ್ಲಿ 7ನೇ ಸೀಸನ್‌ಗೆ ದಿನಗಣನೆ ಶುರುವಾಗಿತ್ತು. ಅಷ್ಟರಲ್ಲೇ ಶೋ ನಿಲ್ಲಿಸುವಂತೆ ಆಯೋಜಕರಿಗೆ ಹಾಗೂ ನಾಗಾರ್ಜುನಗೆ ಕೋರ್ಟ್ ನೋಟಿಸ್ ನೀಡಿದೆ.
ಬಿಗ್ ಬಾಸ್ ಶೋ ನಿಲ್ಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗೆ ಆಂಧ್ರ ಹೈಕೋರ್ಟ್ ಪ್ರತಿಕ್ರಿಯಿಸಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಸ್ಟಾರ್ ಮಾ ವಾಹಿನಿಗೆ ಅಷ್ಟೇ ಅಲ್ಲ ನಾಗಾರ್ಜುನಗೆ ನೋಟಿಸ್ ನೀಡಿದೆ. ಪ್ರಕರಣದ ಹೆಚ್ಚಿನ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಕೋರ್ಟ್ ಮುಂದೂಡಿದೆ. ಅಷ್ಟರಲ್ಲಿ ಸರ್ಕಾರ ಮತ್ತು ವಾಹಿನಿ ಕೌಂಟರ್ ಅರ್ಜಿ ಸಲ್ಲಿಸುವಂತೆ ಆದೇಶ ನೀಡಿದೆ. ಈ ವಿಚಾರ ಈಗ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಈ ಹಿಂದೆ ಹಿಂದೆ ಬಿಗ್ ಬಾಸ್ ಶೋ ವಿರುದ್ಧ ಕೂಡ ಇದೇ ರೀತಿ ಅರ್ಜಿಗಳು ಸಾಖಲಾಗಿದ್ದವು. ಆದರೆ ಜನಪ್ರಿಯ ರಿಯಾಲಿಟಿ ಶೋಗೆ ಬ್ರೇಕ್ ಹಾಕಲು ಸಾಧ್ಯವಾಗಿರಲಿಲ್ಲ. 100 ದಿನಗಳ ಕಾಲ ವಿವಿಧ ಕ್ಷೇತ್ರಗಳ, ವಿಭಿನ್ನ ವ್ಯಕ್ತಿತ್ವ ಹಾಗೂ ಅಭಿರುಚಿಯ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಕೂಡಿ ಹಾಕಲಾಗುತ್ತದೆ. ಮನೆಯ ಒಳಗೆ ಎಲ್ಲಾ ಕಡೆ ಕ್ಯಾಮರಾ ಇಟ್ಟು ಪ್ರತಿ ಕ್ಷಣ ಏನಾಗುತ್ತದೆ ಎಂದು ಸೆರೆಹಿಡಿಯಲಾಗುತ್ತದೆ. 100 ದಿನಗಳ ಕಾಲ ಹೊರಗಿನ ಪ್ರಪಂಚ ಸಂಪರ್ಕ ಇಲ್ಲದೇ ಅಲ್ಲಿದ್ದು ಟಾಸ್ಕ್‌ಗಳಲ್ಲಿ ಆಡಿ, ಇತರೆ ಸ್ಪರ್ಧಿಗಳ ರಾಜಕೀಯ, ತಂತ್ರ ಕುತಂತ್ರ ಎಲ್ಲವನ್ನು ಮೆಟ್ಟಿ ನಿಂತವರು ಗೆಲ್ಲುತ್ತಾರೆ.

ತೆಲುಗಿನಲ್ಲಿ ಈಗಾಗಲೇ 6 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. 7 ಸೀಸನ್ ಪ್ರೋಮೊ ಕೂಡ ರಿಲೀಸ್ ಆಗಿದೆ. ನಾಗಾರ್ಜುನ ಮತ್ತೆ ನಿರೂಪಣೆ ಮಾಡೋಕೆ ಮುಂದಾಗಿದ್ದಾರೆ. ಈ ಬಾರಿಯ ಸ್ಪರ್ಧಿಗಳು ಯಾರು? ಎನ್ನುವ ಲೆಕ್ಕಾಚಾರ ನಡೀತಿತ್ತು. ಅಷ್ಟರಲ್ಲೇ ಕೋರ್ಟ್ ನೋಟಿಸ್ ನೀಡಿ ಶಾಕ್ ನೀಡಿದೆ. ಕನ್ನಡದಲ್ಲಿ 9ನೇ ಸೀಸನ್‌ನಲ್ಲಿ ಹೊಸ ಸ್ಪರ್ಧಿಗಳ ಜೊತೆಗೆ ಹೇಳ ಸ್ಪರ್ಧಿಗಳು ಕೂಡ ದೊಡ್ಮನೆ ಸೇರಿದ್ದರು. ಈ ಬಾರಿ ತೆಲುಗು ಬಿಗ್‌ಬಾಸ್ ಶೋನಲ್ಲೂ ಇದೇ ಪ್ರಯತ್ನ ಮಾಡಲಾಗುತ್ತಿದೆ.


Click it and Unblock the Notifications











