ಬಿಗ್‌ಬಾಸ್ ಮನೆಗೆ ಕಳ್ಸಿ, ನನ್ನ ಟ್ಯಾಲೆಂಟ್ ತೋರಿಸ್ತೀನಿ; ವೀಡಿಯೋ ಮಾಡಿ ಪೊಲೀಸ್ ಎಸ್‌ಐ ಮನವಿ

ಕನ್ನಡದಲ್ಲಿ ಬಿಗ್‌ಬಾಸ್ ಸೀಸನ್ 13ಕ್ಕೆ ದಿನಗಣನೆ ಶುರುವಾಗಿದೆ. ಇನ್ನೆರಡು ವಾರಗಳಲ್ಲಿ ಅತ್ತ ಬಿಗ್‌ಬಾಸ್ ತೆಲುಗು ತೆಲುಗು ಸೀಸನ್ ಆರಂಭವಾಗಲಿದೆ. ಈ ಬಾರಿ ಬಿಗ್‌ಬಾಸ್ ಮನೆಗೆ ಕಾಮನ್ ಮ್ಯಾನ್ ಕೂಡ ಹೋಗುವ ಅವಕಾಶ ಸಿಗುತ್ತಿದೆ. ಈಗಾಗಲೇ ಪ್ರೊಮೊ ಬಂದಿದ್ದು ಸಾಕಷ್ಟು ಜನ ನಾವು ಹೋಗ್ತೀವಿ, ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ತೆಲುಗು ಬಿಗ್‌ಬಾಸ್ ಮನೆಗೆ ಹೋಗ್ತೀನಿ ಎಂದು ಆಂಧ್ರದ ಪೊಲೀಸ್ ಎಸ್‌ಐ ಮಾಡಿರುವ ವಿಡಿಯೋ ವೈರಲ್ ಆಗ್ತಿದೆ.

ಬಿಗ್‌ಬಾಸ್ ತೆಲುಗು ಸೀಸನ್ 9ರಲ್ಲಿ ಕಾಮನ್ ಮ್ಯಾನ್‌ ಎಂಟ್ರಿ ಬಹಳ ಕುತೂಹಲ ಮೂಡಿಸಿತ್ತು. ಮುಂದಿನ ಸೀಸನ್‌ನಲ್ಲಿ ಕೂಡ ಜನ ಸಾಮಾನ್ಯರನ್ನು ಮನೆ ಒಳಗೆ ಕಳುಹಿಸಲು ಪ್ರಯತ್ನ ಶುರುವಾಗಿದೆ. ಈಗಾಗಲೇ ಆಡಿಷನ್ ಮಾಡಿ ಕೆಲವರನ್ನು ಆಯ್ಕೆ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೂ ದೊಡ್ಮನೆ ಒಳಗೆ ಹೋಗಲು ಬಯಸುವವರು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡುತ್ತಲೇ ಇದ್ದಾರೆ.

AP Police SI s bigg boss telugu season 10 entry request video goes viral

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಗಡಿವೇಮುಲಾದ ಎಸ್‌ಐ ನಾಗಾರ್ಜುನ ರೆಡ್ಡಿ ಎಂಬುವವರು ಬಿಗ್‌ಬಾಸ್ ಮನೆಗೆ ಹೋಗಲು ಅವಕಾಶ ಕೊಡಿ ಎಂದು ವೀಡಿಯೋ ಮಾಡಿ ಮಾತನಾಡಿದ್ದಾರೆ. "ಬಿಗ್‌ಬಾಸ್ ಆಯೋಜಕರಿಗೆ, ತೆಲುಗು ವೀಕ್ಷಕರಿಗೆ ನನ್ನ ನಮಸ್ಕಾರ. ನನ್ನ ಹೆಸರು ನಾಗಾರ್ಜುನ ರೆಡ್ಡಿ. ಆಂಧ್ರದ ಕಡಪದವನು. ಈಗ ನಂದ್ಯಾಲ ಜಿಲ್ಲೆಯ ಗಡಿವೇಮುಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೀನಿ. ನಾನು ಬಹಳ ಆತ್ಮವಿಶ್ವಾಸ ಇರುವ ವ್ಯಕ್ತಿ. ನನ್ನ ನಿಜವಾದ ವ್ಯಕ್ತಿತ್ವವನ್ನು ಬಿಗ್‌ಬಾಸ್ ಮನೆಯಲ್ಲಿ ಎಲ್ಲರಿಗೂ ತೋರಿಸಬೇಕು ಎಂದು ಕಾಯುತ್ತಿದ್ದೀನಿ. ನನಗೆ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಸಿಕ್ಕರೆ ನನ್ನ ಧೈರ್ಯ, ಪ್ರತಿಭೆಯನ್ನು ಪ್ರದರ್ಶಿಸಿ ಎಲ್ಲರ ಮನಗೆಲ್ಲಬೇಕು ಎಂದು ಆಸೆ ಪಡ್ತಿದ್ದೀನಿ" ಎಂದಿದ್ದಾರೆ.

ಬಿಗ್‌ಬಾಸ್ ಮನೆಗೆ ಹೋಗುವುದು, ಅಲ್ಲಿ ಇರುವುದು ಕಷ್ಟ. ಎಲ್ಲಾ ಸೀಸನ್ ನೋಡಿದ್ದೀನಿ. ಅಲ್ಲಿ ಎಷ್ಟೋ ಸವಾಲು ಎದುರಿಸಬೇಕು. ನಾನು ಬಹಳ ಧೈರ್ಯವಾಗಿ ಅದನ್ನು ನಿಬಾಯಿಸಿ ವೀಕ್ಷಕರ ಹೃದಯ ಗೆಲ್ಲಬೇಕು, ಅದಕ್ಕೆ ಅವಕಾಶ ಕೊಟ್ಟರೆ ಚೆನ್ನಾಗಿರುತ್ತದೆ. ಥ್ಯಾಂಕ್ಯೂ ಬಿಗ್‌ಬಾಸ್.. ಆದಷ್ಟು ಬೇಗ ಬಿಗ್‌ಬಾಸ್ ಮನೆಯಲ್ಲಿ ಸಿಗೋಣ ಎಂದು ಪೊಲೀಸ್ ಎಸ್‌ಐ ನಾಗಾರ್ಜುನ ರೆಡ್ಡಿ ಮಾತನಾಡಿರುವ ವೀಡಿಯೋ ವೈರಲ್ ಆಗ್ತಿದೆ.

ಈ ವೀಡಿಯೋ ಹಿರಿಯ ಅಧಿಕಾರಿಗಳ ಕಣ್ಣಿಗೆ ಬಿದ್ರೆ ಹೇಗೆ? ಮುಂದೆ ಏನಾಗಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಸರ್ಕಾರಿ ಕೆಲಸದಲ್ಲಿ ಇರುವವರು ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಇರುವವರು ಹೀಗೆ ರಿಯಾಲಿಟಿ ಶೋಗಳಿಗೆ ಹೋಗಬಹುದಾ? ಪೊಲೀಸ್ ಸಮವಸ್ತ್ರ ಧರಿಸಿ ಹೀಗೆ ವೀಡಿಯೋ ಮಾಡಬಹುದಾ? ಎಂದು ಕೆಲವರು ಹುಬ್ಬೇರಿಸುತ್ತಿದ್ದಾರೆ. ಕಳೆದ ಬಾರಿ ಭಾರತೀಯ ಸೇನೆಗೆ ಸೇರಿದ್ದ ಕಲ್ಯಾಣ್ ಎಂಬುವವರು ಹೋಗಿದ್ದರು. ಹಾಗಿರುವಾಗ ನಾಗಾರ್ಜು ರೆಡ್ಡಿ ಯಾಕೆ ಹೋಗಬಾರದು ಎನ್ನುವವರು ಇದ್ದಾರೆ.

ಈ ಬಾರಿ ಕೂಡ ನಟ ನಾಗಾರ್ಜುನ್ ಬಿಗ್‌ಬಾಸ್ ತೆಲುಗು ಸೀಸನ್ 10 ಅನ್ನು ನಿರೂಪಣೆ ಮಾಡಲಿದ್ದಾರೆ. ಕಳೆದ ಬಾರಿ ಶೋ ಅಭೂತಪೂರ್ವ ಯಶಸ್ಸು ಕಂಡಿತ್ತು. ಅಗ್ನಿಪರೀಕ್ಷೆ ಹೆಸರಿನಲ್ಲಿ ಸಾಮಾನ್ಯ ಜನರನ್ನು ಆಡಿಷನ್ ಮಾಡಿ ಮನೆ ಒಳಗೆ ಕಳುಹಿಸಿದ್ದರು. ಕರ್ನಾಟಕ ಮೂಲಕ ಕಿರುತೆರೆ ತಾರೆಯರು ಇದ್ದರು. ಚಿತ್ರನಟಿ ಸಂಜನಾ ಗರ್ಲಾನಿ ಸಹ ದೊಡ್ಮನೆ ಒಳಗೆ ಹೋಗಿ ಗಮನ ಸೆಳೆದಿದ್ದರು.

ಕನ್ನಡದಲ್ಲಿ ಸೀಸನ್ 13ರ ಆಡಿಷನ್‌ಗೆ ಜನ ಮುಗಿಬಿದ್ದಿದ್ದಾರೆ. ಅದಕ್ಕಾಗಿ ಸಾವಿರಾರು ಜನ ವೀಡಿಯೋ ಮಾಡಿ ಕಳುಹಿಸಿದ್ದಾರೆ. ಬಿಗ್ ಬಾಸ್ ಆಯ್ಕೆ ಸಮಿತಿಯ ಗಮನ ಸೆಳೆಯಲು ನಾನಾ ತಂತ್ರಗಳನ್ನು ಮೊರೆ ಹೋಗಿದ್ದಾರೆ. ಯಾಕೆ ನಾವು ಬಿಗ್‌ಬಾಸ್ ಮನೆಗೆ ಹೋಗಬೇಕು ಎನ್ನುವುದನ್ನು ವೀಡಿಯೋ ಮಾಡಿ ಜಿಯೋ ಹಾಟ್‌ಸ್ಟರ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. ತಮ್ಮ ವಿಶಿಷ್ಟ ವ್ಯಕ್ತಿತ್ವ, ಕೌಶಲ್ಯ ಹಾಗೂ ಶೋಗೆ ಹೋಗಲು ಯಾಕೆ ಅರ್ಹರು ಎನ್ನುವುದನ್ನು ವೀಡಿಯೋದಲ್ಲಿ ಹೇಳುತ್ತಿದ್ದಾರೆ.

Read more about: bigg boss telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X