»   » ನೆಗೆಟಿವ್ ಕಾಮೆಂಟ್ಸ್ ನೋಡಿ 'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ವರಲಕ್ಷ್ಮಿ!

ನೆಗೆಟಿವ್ ಕಾಮೆಂಟ್ಸ್ ನೋಡಿ 'ಮಜಾ ಟಾಕೀಸ್' ಬಿಡಲು ಮುಂದಾಗಿದ್ದ ವರಲಕ್ಷ್ಮಿ!

Posted By:
Subscribe to Filmibeat Kannada
Aparna, Kannada Actress speaks about Maja Talkies | Filmibeat Kannada

ಸ್ಯಾಂಡಲ್ ವುಡ್ ನ ಎಲ್ಲ ನಟ-ನಟಿಯರಿಂದ ಹಿಡಿದು ಬಾಲಿವುಡ್ ಹಾಗೂ ಹಾಲಿವುಡ್ ನ ಎಲ್ಲ ಸೆಲೆಬ್ರಿಟಿಗಳು ತನ್ನ ಅಂಗೈಯಲ್ಲೇ ಇದ್ದಾರೆ ಅಂತ 'ಮಜಾ ಟಾಕೀಸ್'ನಲ್ಲಿ ಬಿಲ್ಡಪ್ ಪಡೆದುಕೊಳ್ಳುತ್ತಿದ್ದವರು 'ಒನ್ ಅಂಡ್ ಒನ್ಲಿ ವರಲಕ್ಷ್ಮಿ'. 'ಮಜಾ ಟಾಕೀಸ್'ನಲ್ಲಿ ಎಲ್ಲರಿಗೂ ವಯಸ್ಸಾಗಿದ್ದಾಗಲೂ, ಸ್ವೀಟ್ 16 ತರಹ ಓಡಾಡಿಕೊಂಡಿದ್ದವರು ಇದೇ ವರಲಕ್ಷ್ಮಿ ಅರ್ಥಾತ್ ಅಪರ್ಣ.

'ಮಜಾ ಟಾಕೀಸ್'ನಲ್ಲಿ ಎಲ್ಲರಿಗೂ 100 ವರ್ಷ: ವರಲಕ್ಷ್ಮಿ ಇನ್ನೂ ಹದಿಹರೆಯ.!

ನಟಿಯಾಗಿ 'ಮಸಣದ ಹೂ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿ, ಆಲ್ ಇಂಡಿಯಾ ರೇಡಿಯೋದಲ್ಲಿ ಆರ್.ಜೆ ಆಗಿ, ಚಂದನ ವಾಹಿನಿಯಲ್ಲಿ ಆಂಕರ್ ಆಗಿ ಸೇವೆ ಸಲ್ಲಿಸಿ, 'ಮುಕ್ತ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರೂ ನಟಿ ಅಪರ್ಣ ಅಪಾರ ಜನಪ್ರಿಯತೆ ಗಳಿಸಿದ್ದು 'ಮಜಾ ಟಾಕೀಸ್'ನ 'ಒನ್ ಅಂಡ್ ಒನ್ಲಿ ವರಲಕ್ಷ್ಮಿ' ಪಾತ್ರದಿಂದ.!

ಹೀಗಿದ್ದರೂ, 'ಮಜಾ ಟಾಕೀಸ್' ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಲು ಅಪರ್ಣ ಯೋಚಿಸಿದ್ದರಂತೆ. ತಮಗೆ ಬರುತ್ತಿದ್ದ ನೆಗೆಟಿವ್ ಕಾಮೆಂಟ್ ಗಳನ್ನು ನೋಡಿ 'ಮಜಾ ಟಾಕೀಸ್' ಕಾರ್ಯಕ್ರಮ ಬಿಡಲು ಅಪರ್ಣ ಮುಂದಾಗಿದ್ದರಂತೆ. ಮುಂದೆ ಓದಿರಿ...

ನೆಗೆಟಿವ್ ಕಾಮೆಂಟ್ಸ್ ನಿಂದ ಬೇಸರಗೊಂಡಿದ್ದ ಅಪರ್ಣ

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಬಿಲ್ಡಪ್ ತೆಗೆದುಕೊಳ್ಳುವುದು, ಶೋ ಆಫ್ ಮಾಡುವುದೇ 'ಒನ್ ಅಂಡ್ ಒನ್ಲಿ ವರಲಕ್ಷ್ಮಿ' ಕೆಲಸ. ವರಲಕ್ಷ್ಮಿ ಪಾತ್ರದಲ್ಲಿ ನಟಿ ಅಪರ್ಣ ರವರನ್ನ ನೋಡಿ ಕೆಲವರು ನೆಗೆಟಿವ್ ಕಾಮೆಂಟ್ಸ್ ಮಾಡಿದ್ದರು. ಅದನ್ನೆಲ್ಲ ಓದಿದ್ಮೇಲೆ, ಕಾರ್ಯಕ್ರಮದಿಂದ ಹೊರ ಬರಲು ಅಪರ್ಣ ಮನಸ್ಸು ಮಾಡಿದ್ದರಂತೆ.

ಬಿಟ್ಟು ಬಿಡುತ್ತೇನೆ ಎಂದಿದ್ದೆ.!

''ಒಂದೆರಡು ಸಂಚಿಕೆ ಆದ್ಮೇಲೆ, ಕೆಲವು ಕಾಮೆಂಟ್ ಗಳನ್ನು ನೋಡಿ, ಇದು ನನಗೆ ಬೇಡ, 'ಮಜಾ ಟಾಕೀಸ್' ಬಿಟ್ಟು ಬಿಡುತ್ತೇನೆ ಎಂದು ಸೃಜನ್ ಗೆ ಹೇಳಿದ್ದೆ'' ಎಂದು ವರಲಕ್ಷ್ಮಿ ಪಾತ್ರದ ಖ್ಯಾತಿಯ ಅಪರ್ಣ ಹೇಳಿದ್ದಾರೆ.

ತುಂಬಾ ಸಿಲ್ಲಿ

''ವರಲಕ್ಷ್ಮಿ ಪಾತ್ರಕ್ಕೆ ಅಪರ್ಣ ಸೂಟ್ ಆಗಲ್ಲ. ಪಾತ್ರ ತುಂಬಾ ಸಿಲ್ಲಿ ಆಗಿದೆ. ಅಪರ್ಣ ತುಂಬಾ ಗಂಭೀರವಾಗಿರುತ್ತಾರೆ' ಎಂಬೆಲ್ಲ ಕಾಮೆಂಟ್ಸ್ ನೋಡಿ ಮುಂದುವರೆಯುವುದು ಬೇಡ ಅಂದುಕೊಂಡಿದ್ದೆ'' ಅಂತಾರೆ ಅಪರ್ಣ.

ನನ್ನಿಂದ ಶೋ ಹಾಳಾಗಬಾರದು

''ಮಜಾ ಟಾಕೀಸ್' ಒಂದು ಒಳ್ಳೆಯ ಶೋ. ನನ್ನಿಂದ ಶೋ ಹಾಳಾಗುವುದು ಬೇಡ. ಕೆಟ್ಟ ಕಾಮೆಂಟ್ಸ್ ಬರುತ್ತಿದೆ. ಹೀಗಾಗಿ ಮಾಡುವುದಿಲ್ಲ'' ಎಂದು ಸೃಜನ್ ಬಳಿ ಅಪರ್ಣ ಹೇಳಿದ್ದರಂತೆ.

ವರಲಕ್ಷ್ಮಿಯಿಂದ ಮನೆಮಾತಾಗಿರುವ ಅಪರ್ಣ

''ಎಂಬತ್ತು ಜನ ಚೆನ್ನಾಗಿ, ಪಾಸಿಟಿವ್ ಆಗಿ ಕಾಮೆಂಟ್ ಮಾಡಿದ್ದಾರೆ. ಅದನ್ನ ತೋರಿಸಿ, ನಿಮಗೆ ಎಂಬತ್ತು ಜನರ ಈ ಕಾಮೆಂಟ್ಸ್ ಮುಖ್ಯವೋ..? ಅಥವಾ ಇಪ್ಪತ್ತು ಜನ ಮಾತನಾಡುತ್ತಿರುವುದು ಮುಖ್ಯವೋ..? ವರಲಕ್ಷ್ಮಿ ಕ್ಲಿಕ್ ಆಗುತ್ತಾಳೆ ಎಂಬ ನಂಬಿಕೆ ಇದ್ದರೆ ಇರಿ. ಇಲ್ಲ ಅಂದ್ರೆ ಬೇಡ'' ಎಂದು ಅಪರ್ಣ ರವರ ಮನವೊಲಿಸಿದ್ರಂತೆ ಸೃಜನ್. ಆಮೇಲೆ ಸೃಜನ್ ಮಾತಿಗೆ ಬೆಲೆ ಕೊಟ್ಟು ವರಲಕ್ಷ್ಮಿ ಪಾತ್ರದಲ್ಲಿ ಅಪರ್ಣ ಮುಂದುವರಿದರು. ಇವತ್ತು ಅದೇ ಹೆಸರು ಅಪರ್ಣ ರವರಿಗೆ ಖ್ಯಾತಿ ತಂದುಕೊಟ್ಟಿದೆ.

'ಮಜಾ' ದಿನಗಳ ಬಗ್ಗೆ ಅಪರ್ಣ ಮೆಲುಕು

ಅಷ್ಟಕ್ಕೂ, ಅಪರ್ಣ ಇದನ್ನೆಲ್ಲ ಹೇಳಿದ್ದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಮಂಡ್ಯ ರಮೇಶ್ ಜೊತೆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸಿದ ಅಪರ್ಣ, 'ಮಜಾ ಟಾಕೀಸ್' ದಿನಗಳ ಬಗ್ಗೆ ಮೆಲುಕು ಹಾಕಿದರು. ಅಂದ್ಹಾಗೆ, ಅಪರ್ಣ ಭಾಗಿಯಾಗಿದ್ದ 'ಮಜಾ ಟಾಕೀಸ್' ಶೋ ಸದ್ಯದಲ್ಲಿಯೇ ಮುಕ್ತಾಯವಾಗಲಿದೆ.

English summary
Kannada Actress Aparna speaks about 'Maja Talkies'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada