ನಟನೆ ಅಷ್ಟೇ ಅಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರೋ ನಟಿ ಯಮುನಾ ಶ್ರೀನಿಧಿ
ಕಳೆದ ಏಳು ವರ್ಷಗಳಲ್ಲಿ ನಟಿಯ ಮುನ್ನ ಶ್ರೀನಿಧಿ ಅವರು ಹತ್ತು ಸಾವಿರಕ್ಕೂ ಅಧಿಕ ಗಳಿಗೆ ಏನ್ ಸಿ ಸಿ ಕೆಡೆಟ್ಸ್ ಗಳಿಗೆ ಹಾಗೂ 6,000ಕ್ಕೂ ಹೆಚ್ಚು ಹಳ್ಳಿ ಮಕ್ಕಳಿಗೆ ತರಬೇತಿ ನೀಡಿದ್ದಾರೆ. ಯಮುನಾ ಶ್ರಿನಿಧಿಯವರು ಹಲವಾರು ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಬಹಳ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ನಮಗೆಲ್ಲ ಗೊತ್ತೇ ಇದೆ. ಕಿರುತೆರೆ ಅಷ್ಟೇ ಅಲ್ಲದೆ ಹಿರಿತೆರೆಯಲ್ಲಿಯೂ ಈಕೆ ಬಹಳ ಪ್ರಮುಖವಾದ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡಿದ್ದಾರೆ.
ಅದರ ಜೊತೆ ಜೊತೆಗೆ ಸಮಾಜ ಕಲ್ಯಾಣ ಕಾರ್ಯಕ್ರಮಗಳಲ್ಲೂ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುವ ಯಮುನಾ ಶ್ರೀನಿಧಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಕೃಷ್ಣೇಗೌಡ ಸ್ಟೂಡೆಂಟ್ಸ್ ಸ್ಕಾಲರ್‌ಶಿಪ್ ಆರಂಭಿಸಿರುವ ನಟಿಯ ಮುನ ಶ್ರೀನಿಧಿ ಅವರು ಇದರ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಹಣಕಾಸಿನ ಸಹಾಯ ಮಾಡಿದ್ದಾರೆ.

ಈಕೆಯ ತಂದೆ 2021ರಲ್ಲಿ ಅಲ್ಝಿಮರ್ಸ್ (ಮರುವಿನ ಕಾಯಿಲೆ)ಯಿಂದ ತೀರಿಕೊಂಡರು ತಮ್ಮ ತಂದೆಯ ನೆನಪಿಗಾಗಿ ಈ ಸ್ಕಾಲರ್‌ಶಿಪ್ ತೆರೆದಿದ್ದು, ಬಹಳಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ನಟನೆ, ಸಮಾಜ ಸುಧಾರಣೆ ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭರತನಾಟ್ಯ ಕಲಾವಿದೆ ಎಂದು ಗುರುತಿಸಿಕೊಂಡಿರುವ ನಟಿಯ ಮುನ ಶ್ರೀನಿಧಿ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಮೂಲ ಪರಿಹಾರ ಎಂದು ದೃಢವಾಗಿ ನಂಬಿದ್ದಾರಂತೆ. ಈ ಕಾರಣಕ್ಕಾಗಿ ಈಕೆ ವಿವಿಧ ರೀತಿಯಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ.
ತಮ್ಮ ತಂದೆಯ ಪ್ರೊಫೆಸರ್ ಕೃಷ್ಣೇಗೌಡರಿಂದ ಪ್ರೇರಿತರಾಗಿರುವ ನಟಿ ಯಮುನಾ ಶ್ರೀನಿಧಿ ಅವರು ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆಯನ್ನು ನೀಡಿದ್ದಾರಂತೆ. ಇದರ ಬಗ್ಗೆ ಸ್ವತಃ ಯಮುನಾ ಶ್ರೀನಿಧಿಯವರೇ ಮಾತನಾಡಿದ್ದು, " ನನ್ನ ತಂದೆಯ ಪ್ರೊಫೆಸರ್ ಕೃಷ್ಣೇಗೌಡರೇ ನನ್ನೆಲ್ಲ ಸಮಾಜ ಸುಧಾರಕ ಕೆಲಸಗಳಿಗೆ ಪ್ರೇರಣೆ. ಚಿಕ್ಕಂದಿನಿಂದಲೂ ನಾನು ನನ್ನ ತಂದೆ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಡುವುದನ್ನು ನೋಡುತ್ತಾ ಬಂದಿದ್ದೇನೆ. ಪ್ರೊಫೆಸರ್ ಆಗಿ ಕೆಲಸಕ್ಕೆ ಸೇರಿದ ಆಗಿನಿಂದಲೂ ನನ್ನ ತಂದೆ ಹಲವಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕುವಂತೆ ಸಹಾಯ ಮಾಡಿದ್ದಾರೆ. ಎಷ್ಟೋ ಬಡ ಮಕ್ಕಳನ್ನು ನಮ್ಮ ಮನೆಯಲ್ಲಿ ಇಟ್ಟು ಸಾಕಿದ್ದಾರೆ. ಆ ಮಕ್ಕಳು ಶಿಕ್ಷಣ ಪಡೆದು ತಮ್ಮ ಕಾಲ್ ಮೇಲೆ ತಾವು ನಿಲುವವರೆಗೂ ನಮ್ಮ ತಂದೆ ಅವರ ಎಲ್ಲಾ ಆಗುಹೋಗು ಹಾಗೂ ಖರ್ಚುಗಳನ್ನು ನೋಡಿದ್ದಾರೆ. ನಾನು ನನ್ನ ಶಿಕ್ಷಣ ಮುಗಿಸಿ, ಆರ್ಥಿಕವಾಗಿ ಸ್ವತಂತ್ರವಾದ ನಂತರ ನಮ್ಮ ತಂದೆಗೆ ಈ ಕಾರ್ಯದಲ್ಲಿ ಹಣಕಾಸಿನ ಸಹಾಯ ಮಾಡಿಕೊಂಡು ಬಂದಿದ್ದೇನೆ" ಎಂದು ಬಾಲ್ಯದಿಂದಲೂ ತಾವು ನೋಡಿರುವ ಸಮಾಜ ಸುಧಾರಕ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ ನಟಿ ಯಮುನ ಶ್ರೀನಿಧಿ.

"ಇಂತಹ ಸಮಾಜ ಸುಧಾರಕ ಕಾರ್ಯಗಳಿಗೆ ನನ್ನನ್ನು ಬಹಳ ಪ್ರಖರವಾಗಿ ಪ್ರೇರೇಪಿಸಿರುವುದು ನನ್ನ ತಂದೆ. ಇಂದು ಅವರು ಇಲ್ಲದಿದ್ದರೂ ಅವರ ಧ್ಯೇಯಗಳನ್ನು ನಾನು ಮುಂದುವರಿಸುತ್ತಾ ಬಂದಿದ್ದೇನೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಬಡ ಕುಟುಂಬಗಳಿಗೆ ಈ ರೀತಿಯ ಸಣ್ಣಪುಟ್ಟ ಹಣಕಾಸಿನ ಸಹಾಯ ಮಾಡುತ್ತಾ ಅವರಿಗೆ ಶಿಕ್ಷಣ ಕೊಡಿಸುವುದು ನನಗೆ ಬಹಳ ತೃಪ್ತಿ ಕೊಡುತ್ತದೆ. ಒಂದು ಪರಿಪೂರ್ಣ ಭಾವನೆಯನ್ನು ರೀತಿಯ ಸುಧಾರಣೆ ನನಗೆ ಕೊಡುತ್ತದೆ. " ಎಂದು ತಮ್ಮ ಸಮಾಜ ಸುಧಾರಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ನಟಿ ಯಮುನಾ ಶ್ರೀನಿಧಿ.
ಇತ್ತೀಚಿನ ಪಾಪ್ಯುಲರ್ ಸಿನಿಮಾಗಳಾದ 'ಸಪ್ತ ಸಾಗರದ ಆಚೆ ಎಲ್ಲೋ', 'ಕೌಸಲ್ಯ ಸುಪ್ರಜಾ ರಾಮ'ದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ಯಮುನಾ ಶ್ರೀನಿಧಿ ಅವರು ಸದ್ಯಕ್ಕೆ 'ನನ್ನ ದೇವ್ರು' ಧಾರಾವಾಹಿಯಲ್ಲಿ ಪಾತ್ರವೊಂದನ್ನು ಮಾಡುತ್ತಿದ್ದಾರೆ.


Click it and Unblock the Notifications











