Raani: "ಮುಗ್ಧತೆಯ ಹೊರತಾಗಿ ಅರ್ಜುನ್ ಮತ್ತು ಪ್ರವೀಣ್ ನಡುವೆ ಸಾಮ್ಯತೆಯೇನೂ ಇಲ್ಲ"

By ಅನಿತಾ ಬನಾರಿ

'ದ್ವಿಮುಖ' ಚಿತ್ರದ ಮೂಲಕ ನಾಯಕನಾಗಿ ನಟನೆಗೆ ಪಾದಾರ್ಪಣೆ ಮಾಡಿದ ನಟ ಪ್ರವೀಣ್ ಅಥರ್ವ ಪ್ರಸ್ತುತ ಹೊಸ ಧಾರಾವಾಹಿ 'ರಾಣಿ'ಯಲ್ಲಿ 'ಅರ್ಜುನ್' ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ವಿದೇಶದಲ್ಲಿ ಪದವಿಯನ್ನು ಮುಗಿಸಿ ತನ್ನೂರಿಗೆ ಹಿಂತಿರುಗುವ ಯುವ ಮತ್ತು ಉತ್ಸಾಹಿ ಉದ್ಯಮಿಯ ಪಾತ್ರವನ್ನು ಪ್ರವೀಣ್ ಅಥರ್ವ ನಿರ್ವಹಿಸಿದ್ದಾರೆ. ಅಲ್ಲದೆ ಪ್ರವೀಣ್ ತಮ್ಮ ಆನ್-ಸ್ಕ್ರೀನ್ ಪಾತ್ರವನ್ನು ಪೂರ್ತಿಯಾಗಿ ಆನಂದಿಸುತ್ತಿದ್ದಾರೆ.

ರಾಣಿ ತಂಡದೊಂದಿಗೆ ಕೆಲಸ

ರಾಣಿ ತಂಡದೊಂದಿಗೆ ಕೆಲಸ ಮಾಡುವುದು ಪ್ರವೀಣ್ ಅವರಿಗೆ ಉತ್ತಮ ಆರಂಭವನ್ನು ನೀಡಿದಂತಾಗಿದೆ. ಈ ಹಿಂದೆ ಇದೇ ನಿರ್ಮಾಣ ತಂಡದೊಂದಿಗೆ ಮತ್ತೊಂದು ಧಾರಾವಾಹಿಗಾಗಿ ಕೆಲಸ ಮಾಡಿದ್ದರು ಪ್ರವೀಣ್ ಅಥರ್ವ. ಹಾಗಾಗಿ, ಇದೊಂದು ರೀತಿಯಲ್ಲಿ ಹೋಮ್‌ಕಮಿಂಗ್‌ನಂತಾಗಿದೆ. ಬಹುತೇಕರು ಪರಿಚಿತರೇ ಆಗಿದ್ದಾರೆ ಮತ್ತು ಪ್ರೀತಿ ತೋರಿಸುತ್ತಾರೆ.

Apart from innocence Arjun and Praveen have nothing in common Raani Serial Actor

ಲವರ್ ಬಾಯ್ ಕ್ಯಾರೆಕ್ಟರ್

ಅಂದ ಹಾಗೇ, ಪ್ರವೀಣ್ ಅವರಿಗೆ ಅರ್ಜುನ್ ಪಾತ್ರವು ಇಷ್ಟವಾಗಲು ಎರಡು ಕಾರಣಗಳಿವೆ. ಒಂದು ಕಡೆಯಲ್ಲಿ ಬಿಸಿನೆಸ್ ಮ್ಯಾನ್ ಆಗಿ ತನ್ನ ಘನತೆಯನ್ನು ಮೆರೆಯುವ ಅರ್ಜುನ್ ಇನ್ನೊಂದು ಕಡೆಯಲ್ಲಿ ಹಳ್ಳಿಯ ಮಕ್ಕಳೊಂದಿಗೆ ಆಟ ಆಡಿಕೊಂಡಿರಲು ಬಯಸುವವನಾಗಿರುತ್ತಾನೆ. ಎಷ್ಟೇ ಸೀರಿಯಸ್ ಆದರೂ ಲವರ್ ಬಾಯ್ ಕ್ಯಾರೆಕ್ಟರನ್ನು ಹೊಂದಿರುವ ಈ ಪಾತ್ರ ಒಂದು ರೀತಿಯಲ್ಲಿ ಅವರಿಗೆ ಸವಾಲೇ ಸರಿ ಎಂಬುದು ಪ್ರವೀಣ್ ಅಥರ್ವ ಮಾತು.

ತಂಡದಿಂದ ಪ್ರೋತ್ಸಾಹ

ಅಲ್ಲದೇ ಪ್ರವೀಣ್ ತಮ್ಮ ಪಾತ್ರಕ್ಕಾಗಿ ಏನೂ ತಯಾರಿ ನಡೆಸಿರಲಿಲ್ಲ. ಧಾರಾವಾಹಿಯ ಹರಿವಿನೊಂದಿಗೆ ಪಾತ್ರವನ್ನು ನಿಭಾಯಿಸುತ್ತಿದ್ದ ನಟನಿಗೆ ಬರು ಬರುತ್ತಾ ದೃಶ್ಯಗಳು ಹೆಚ್ಚು ಪರ್ಫಾರ್ಮೆನ್ಸ್ ಕೇಳಿದಾಗ ತಂಡದವರು ಸಹಾಯ ಮಾಡುವುದನ್ನು ನೆನಪಿಸಿಕೊಳ್ಳುತ್ತಾರೆ.

ಸ್ನೇಹಿತರನ್ನು ಅನುಕರಿಸುತ್ತಾರೆ ಪ್ರವೀಣ್

ಅಲ್ಲದೆ ಪ್ರವೀಣ್ ಅವರು ತಮ್ಮ ಸ್ನೇಹಿತರನ್ನು ತೆರೆಯ ಮೇಲೆ ಅನುಕರಿಸುತ್ತಾರೆ. ಅರ್ಜುನ್‌ನ ಲವರ್‌ಬಾಯ್ ವ್ಯಕ್ತಿತ್ವದ ವಿಷಯಕ್ಕೆ ಬಂದರೆ, ಅವರು ಸ್ನೇಹಿತರ ದೇಹ ಭಾಷೆಯನ್ನು ಹೆಚ್ಚಾಗಿ ಅನುಕರಿಸುತ್ತೇನೆ. ಅವರ ಹಠಾತ್ ಸಂಕೋಚದ ಭಾವನೆ ಅಥವಾ ಗೆಳತಿಯಿಂದ ಕರೆ ಬಂದಾಗ ಅವರ ದೇಹ ಭಾಷೆಯಲ್ಲಾಗುವ ಬದಲಾವಣೆ, ಇವೆಲ್ಲವನ್ನೂ ಗಮನಿಸಿದಾಗ ಲವರ್ ಬಾಯ್ ಆಗಿ ನಟಿಸಲು ಅವರಿಗೆ ಸಹಾಯ ಮಾಡುತ್ತದೆ.

ತೆರೆಯ ಮೇಲೆ ತದ್ವಿರುದ್ಧ

ಮತ್ತೊಂದೆಡೆ, ಅರ್ಜುನ್ ಧಾರಾವಾಹಿಯಲ್ಲಿ ಪರಿಪೂರ್ಣ ಅಮ್ಮನ ಮಗ. ಸದ್ಯ ತನ್ನ ಪ್ರೀತಿಯ ತಾಯಿ ಹೇಳುವ ಎಲ್ಲವನ್ನೂ ಕೇಳುವ ಅರ್ಜುನ್ ಪಾತ್ರದ ಕುರಿತಂತೆ ನಟ ಹೆಚ್ಚಿನದನೇನನ್ನೂ ಬಹಿರಂಗಪಡಿಸಲಿಲ್ಲ.

ಇದರೊಂದಿಗೆ, ನಿಜ ಜೀವನಕ್ಕೆ ಹೋಲಿಸಿದರೆ ತೆರೆಯ ಮೇಲೆ ಸಂಪೂರ್ಣ ವಿರುದ್ಧವಾದ ಪಾತ್ರವನ್ನು ಪ್ರವೀಣ್ ನಿರ್ವಹಿಸುತ್ತಿದ್ದಾರೆ. ನಿಜ ಜೀವನದಲ್ಲಿ ತುಂಬಾ ಸರಳ ಜೀವನವನ್ನು ನಡೆಸಲು ಇಷ್ಟಪಡುವ ನಟ ಡ್ರೆಸ್ಸಿಂಗ್ ವಿಷಯದಲ್ಲಿ ಹೆಚ್ಚಾಗಿ ಸಾಂದರ್ಭಿಕ ಉಡುಪುಗಳನ್ನು ಧರಿಸುತ್ತಾರೆ. ಅಲ್ಲದೆ, ಅರ್ಜುನ್ ತುಂಬಾ ಓಪನ್ ಅಪ್ ಮತ್ತು ಲವ್ಲಿ ಆಗಿರುವ ಹುಡುಗ. ಮುಗ್ಧತೆಯ ಹೊರತಾಗಿ ಅರ್ಜುನ್ ಮತ್ತು ಪ್ರವೀಣ್ ನಡುವೆ ಸಾಮ್ಯತೆಯೇನೂ ಇಲ್ಲ.

Apart from innocence Arjun and Praveen have nothing in common Raani Serial Actor

ನಟನಾಗುವುದು ಮುಖ್ಯ

ಅರ್ಜುನ್ ಪಾತ್ರದ ಮೂಲಕ ವೀಕ್ಷಕರ ಹೃದಯವನ್ನು ಗೆದ್ದ ನಟ, ಬೆಳ್ಳಿತೆರೆ ಮತ್ತು ರಂಗಭೂಮಿಯಲ್ಲೂ ಸಕ್ರಿಯರಾಗಿದ್ದಾರೆ. ಯಾವುದೇ ಮಾಧ್ಯಮವನ್ನು ಲೆಕ್ಕಿಸದೆ, ನಾನು ಮೊದಲು ನಟನಾಗಿ ಗುರುತಿಸಿಕೊಳ್ಳಬೇಕು. ಅದೇ ನನಗೆ ಮುಖ್ಯ. ಅದು ಚಲನಚಿತ್ರವಾಗಲಿ, ಧಾರಾವಾಹಿಯಾಗಲಿ ಅಥವಾ ನಾಟಕವಾಗಲಿ, ನಾನು ನಟನಾಗಿ ಸಮಾನ ನ್ಯಾಯವನ್ನು ನೀಡಲು ಬಯಸುತ್ತಿದ್ದಾರೆ.

More from Filmibeat

English summary
Apart from innocence Arjun and Praveen have nothing in common Raani Serial Actor, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X