ಯಶ್-ರಾಧಿಕಾ ನಟಿಸಿದ್ದ ಸೂಪರ್ ಹಿಟ್ ಧಾರಾವಾಹಿ ಟೈಟಲ್‌ನಲ್ಲಿ ಹೊಸ ಕಥೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಶುರುವಾಗಲು ಸಜ್ಜು. ಹೊಸ ಧಾರಾವಾಹಿಯ ಮೊದಲ ಪ್ರೊಮೋ ರಿಲೀಸ್ ಆಗಿದೆ. ಹೊಸ ಧಾರಾವಾಹಿಗೆ ವಾಹಿನಿಯೂ ಹಳೆಯ ಹೆಸರಿನ್ನಿಟ್ಟಿದೆ. 'ನಂದಗೋಕುಲ' ಹೆಸರಿನಲ್ಲಿ ದಶಕಗಳ ಹಿಂದೆ ಧಾರಾವಾಹಿ ಪ್ರಸಾರವಾಗಿತ್ತು. ಇದರಲ್ಲಿ ನಟಿ ರಾಧಿಕಾ ಪಂಡಿತ್, ನಟ ಯಶ್ ಕೂಡ ನಟಿಸಿದ್ದರು. ಮುಂದೆ ಇಬ್ಬರೂ ಚಿತ್ರರಂಗಕ್ಕೆ ಬಂದರು. ಪ್ರೀತಿಸಿ ಮದುವೆ ಆಗಿದ್ದರು.
ಇದೀಗ ಇದೇ ಹೆಸರಿನಲ್ಲಿ ಮತ್ತೊಂದು ಹೊಸ ಧಾರಾವಾಹಿ ಶುರುವಾಗುತ್ತಿದೆ. 'ನಂದ ಗೋಕುಲ' ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ.

ನಂದನ್ ಫ್ಯಾಮಿಲಿ ಕಥೆ
'ನಂದಗೋಕುಲ' ಧಾರಾವಾಹಿಯೂ ಕಂಪ್ಲೀಟ್ ಫ್ಯಾಮಿಲಿ ಓರಿಯಂಟೆಡ್ ಆಗಿದೆ. ಇಂದು ಕಲರ್ಸ್ ಕನ್ನಡ ವಾಹಿನಿ ಇದರ ಪ್ರೊಮೋವನ್ನು ರಿಲೀಸ್ ಮಾಡಿದೆ. ನಂದನ್ ಮತ್ತು ಗಿರಿಜಾ ದಂಪತಿಗೆ ಮೂವರು ಗಂಡು ಮಕ್ಕಳು, ರೇಷನ್ ಅಂಗಡಿಯನ್ನು ಹೊಂದಿರುವ ನಂದನ್, ತನ್ನ ಮಕ್ಕಳನ್ನು ಶಿಸ್ತಿನಿಂದ ಬೆಳೆಸಿರುತ್ತಾನೆ. ಮಕ್ಕಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುತ್ತಾರೆ. ಮಕ್ಕಳು ದೊಡ್ಡವರಾದ ಬಳಿಕವೂ ಅವರು ಐಆವ ಬಟ್ಟೆಯನ್ನು ಹಾಕಬೇಕು ಎಂಬುದನ್ನು ನಂದನ್ ಡಿಸೈಡ್ ಮಾಡುತ್ತಾನೆ. ಆದರೆ, ಎಲ್ಲರೂ ಎಷ್ಟು ದಿನ ಇದೆಲ್ಲಾ ನಡೆಯುತ್ತೆ. ಮಕ್ಕಳು ಈಗ ಬೆಳೆದು ದೊಡ್ಡವರಾಗಿದ್ದು, ಪ್ರೀತಿಸಿ ಮದುವೆಯಾದರೆ ಮನೆ ಮೂರು ಪಾಲಾಗುತ್ತೆ ಎಂದು ಮಾತನಾಡಿಕೊಂಡಿದ್ದು, ನಂದನ್ ಅದು ಸಾಧ್ಯವೇ ಇಲ್ಲ. ನನ್ನ ಮನೆ ಹೀಗೆ ಇರುತ್ತೆ. ನನ್ನ ಮಕ್ಕಳು ನಾನು ತೋರಿಸಿದ ಹುಡುಗಿಯರನ್ನೇ ಮದುವೆಯಾಗುತ್ತಾರೆ. ನನ್ನ ಮನೆ ನಂದಗೋಕುಲವಾಗೇ ಇರುತ್ತೆ ಎಂದಿದ್ದಾನೆ.
ನಟಿ ಅಮೃತ ಕಮ್ ಬ್ಯಾಕ್
ಈ ಧಾರಾವಾಹಿಯಲ್ಲಿ ನಟಿಸಿರುವ ಎಲ್ಲರೂ ಈಗಾಗಲೇ ಕಿರುತೆರೆಯಲ್ಲಿ ಸಕ್ರಿಯವಾಗಿರುವವರೇ. ನಂದನ್ ಪಾತ್ರದಲ್ಲಿ ಹಿರಿಯ ನಟ ಅರವಿಂದ್ ಕಾಣಿಸಿಕೊಂಡಿದ್ದಾರೆ. ಗಿರಿಜಾ ಪಾತ್ರಕ್ಕೆ ನಟಿ ಅಮೃತಾ ರೂಪೇಶ್ ಬಣ್ಣ ಹಚ್ಚಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರ ಮಾಡಿದ್ದ ಅಮೃತಾ ಅವರು ಅರ್ಧಕ್ಕೆ ಹೊರ ಬಂದಿದ್ದರು. ಮೂರು ವರ್ಷಗಳ ಬ್ರೇಕ್ ಪಡೆದು ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಪುಣ್ಯಕೋಟಿ, ಕುಸುಮಾಂಜಲಿ, ಮನೆಯೊಂದು ಮೂರು ಬಾಗಿಲು, ಅಮೃತ ವರ್ಷಿಣಿ, ನಾಗಿಣಿ, ಗೀತಾ, ಸತ್ಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.
'ನಂದಗೋಕುಲ' ಪಾತ್ರಧಾರಿಗಳು
ನಂದನ್ ಮಕ್ಕಳಾಗಿ ಪ್ರಮುಖ ಪಾತ್ರಗಳಲ್ಲಿ ನಟ ಅಭಿಷೇಕ್ ರಾಮ್ ದಾಸ್, ವಿಜಯ್ ಚಂದ್ರ, ಯಶವಂತ್ ಕಾಣಿಸಿಕೊಂಡಿದ್ದಾರೆ. ನಟ ಅಭಿಷೇಕ್ ಅವರು 'ಸರಯೂ', 'ಗಟ್ಟಿಮೇಳ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ವಿಜಯ್ ಚಂದ್ರ ಅವರು 'ಲಕ್ಷ್ಮೀಬಾರಮ್ಮ' ಧಾರಾವಾಹಿಯ ಚಿನ್ನು ಹಾಗೂ ಗೊಂಬೆಯ ಪತಿಯ ಪಾತ್ರದಲ್ಲಿ ನಟಿಸಿದ್ದರು. ನಟ ಯಶವಂತ್ ಅವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈವರನ್ನು ಹೊರತು ಪಡಿಸಿ, ನಟಿ ರಕ್ಷಿತಾ ರವೀಂದರ್, ನಟಿ ಕೃಷ್ಣಪ್ರಿಯಾ ಭಟ್ ಕೂಡ ಕಾಣಿಸಿಕೊಂಡಿದ್ದಾರೆ.
ತಮಿಳು, ತೆಲುಗು ಧಾರಾವಾಹಿಗಳ ರಿಮೇಕ್
ಇನ್ನು 'ನಂದಗೋಕುಲ' ಧಾರಾವಾಹಿಯನ್ನು ಜಾಹ್ನವಿ ಫಿಲ್ಮ್ ಎಂಪೈರ್ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ. ನಿರ್ದೇಶಕ ಶ್ರವಂತ್ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಯೂ ಅದಾಗಲೇ ಪರಭಾಷೆಗಳಲ್ಲಿ ಪ್ರಸಾರವಾಗಿದ್ದು, ತೆಲುಗಿನಲ್ಲಿ 'ಇಲ್ಲು ಇಲ್ಲಾಲು ಪಿಲ್ಲಲು' ಎಂದು ಇತ್ತೀಚೆಗಷ್ಟೇ ಪ್ರಸಾರ ಶುರು ಮಾಡಿದೆ. ಅಲ್ಲದೇ ತಮಿಳಿನ ಸ್ಟಾರ್ ವಿಜಯ್ ವಾಹಿನಿಯಲ್ಲಿ 'ಪಾಂಡಿಯನ್ ಸ್ಟೋರ್ಸ್-2' ಎಂದು ಪ್ರಸಾರವಾಗಿದ್ದು, ಇದು ಹಿಟ್ ಧಾರಾವಾಹಿ ಎನ್ನಲಾಗಿದೆ. ಇದೇ ಧಾರಾವಾಹಿಯ ರೀಮೆಕ್ 'ನಂದಗೋಕುಲ' ಹೇಳಲಾಗುತ್ತಿದೆ.


Click it and Unblock the Notifications











