For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ಆಫೀಸ್‌ನಲ್ಲಿ ಅದಿತಿ.. ಮನೆಯಲ್ಲಿ ಪ್ರಣತಿ.. ಎರಡು ಕಡೆ ನಡೆಯಲ್ಲ ಸೌಭಾಗ್ಯ ಪ್ಲ್ಯಾನ್..!

  By ಎಸ್ ಸುಮಂತ್
  |

  ಸೌಭಾಗ್ಯಳ ಖತರ್ನಾಕ್ ಬುದ್ಧಿಯನ್ನು ಅದಿತಿ ಎಲ್ಲರ ಮುಂದೆ ಹೇಳಿದಾಗಲೂ ಯಾವುದೋ ಒಂದು ನಾಟಕವಾಡಿ ತಮ್ಮನ ಮನೆಯಲ್ಲಿಯೇ ಉಳಿದುಬಿಟ್ಟರು. ಆದರೆ, ಅದಾದ ಮೇಲೂ ಕಂಪ್ಲೀಟ್ ಆಸ್ತಿಯನ್ನು ತನ್ನ ಪಾಲು ಮಾಡಿಕೊಳ್ಳುವುದಕ್ಕೆ ಹಲವು ರೀತಿಯಲ್ಲಿ ದಾರಿಯನ್ನು ಹುಡುಕಿದ್ದರು. ಆದರೆ, ಈಗ ಅದಿತಿ ಅದೆಲ್ಲದಕ್ಕೂ ಲಾಕ್ ಮಾಡುತ್ತಿದ್ದಾಳೆ.

  ದಿಗಂತ್ ಗುಣಮುಖರಾಗಬೇಕು, ಮೊದಲಿನಂತೆ ಆಗಬೇಕು ಎಂದು ಅದಿತಿ ತನ್ನ ನಂಬಿಕಸ್ಥ ಡಾಕ್ಟರ್ ಅನ್ನು ಮನೆಗೆ ಕರೆಸಿದ್ದಾಳೆ. ಅತ್ತ ಆಫೀಸಿನಲ್ಲಿ ಕೆಲವು ಮುಖ್ಯವಾದ ದಾಖಲೆಗಳು ಅದಿತಿಯ ಕೈಸೇರಿದೆ. ಇದರ ಹಿಂದೆ ಸೌಭಾಗ್ಯ ಕೈವಾಡ ಹೆಚ್ಚಾಗಿದ್ದು, ಇನ್ನು ಮುಂದೆ ಸೌಭಾಗ್ಯಳಿಗೆ ಗ್ರಹಚಾರ ಬಿಡಿಸುವುದಕ್ಕೆ ಅದಿತಿ ರೆಡಿಯಾಗಿದ್ದಾಳೆ.

  ಓಟಿಟಿ ಆಯ್ತು.. ಕಿರುತೆರೆಯಲ್ಲಿ ಅಪ್ಪು ಸಿನಿಮಾ: ಮತ್ತೆ ದೇವರ ದರ್ಶನ!ಓಟಿಟಿ ಆಯ್ತು.. ಕಿರುತೆರೆಯಲ್ಲಿ ಅಪ್ಪು ಸಿನಿಮಾ: ಮತ್ತೆ ದೇವರ ದರ್ಶನ!

  ಸೌಭಾಗ್ಯಳ ಹೆಸರಲ್ಲಿದೆ 90 ಕೋಟಿ ಆಸ್ತಿ

  ಸೌಭಾಗ್ಯಳ ಹೆಸರಲ್ಲಿದೆ 90 ಕೋಟಿ ಆಸ್ತಿ

  ದಿಗಂತ್‌ಗೆ ಮೆಮೋರಿ ಲಾಸ್ ಆದ ಮೇಲೆ ಆಫೀಸ್‌ ಅನ್ನು ಸಂಪೂರ್ಣವಾಗಿ ದುಷ್ಯಂತ್, ಸುಮಂತ್ ನೋಡಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೂ ಅಷ್ಟಾಗಿ ಗೊತ್ತಾಗುವುದಿಲ್ಲ. ಇನ್ನು ಮೈತ್ರಿ ತನ್ನ ಲಾಭವನ್ನಷ್ಟೇ ನೋಡುತ್ತಾಳೆ. ತುಂಬಾ ಮುಖ್ಯವಾದ ಡಾಕ್ಯೂಮೆಂಟ್ಸ್ ಇದೀಗ ಅದಿತಿಯ ಕೈಸೇರಿದೆ. ದಿಗಂತ್ ಕ್ಯಾಬಿನ್‌ನಲ್ಲೆಲ್ಲಾ ಹುಡುಕಾಡಿ, ತಡಕಾಡಿ ಆ ಫೈಲ್ ತೆಗೆದಿದ್ದಾಳೆ. ಅದರಲ್ಲಿ ಸೌಭಾಗ್ಯ ಹೆಸರಲ್ಲಿ ಇದ್ದಂತ 90 ಕೋಟಿ ಆಸ್ತಿಯ ದಾಖಲೆಗಳು ಸಿಕ್ಕಿವೆ.

  ಮನೆಗೆ ಬಂದ ಆರಾಧನಾ: ಇನ್ನಾದರೂ ಕಥೆ ಬದಲಾಗುತ್ತಾ?ಮನೆಗೆ ಬಂದ ಆರಾಧನಾ: ಇನ್ನಾದರೂ ಕಥೆ ಬದಲಾಗುತ್ತಾ?

  ಸೌಭಾಗ್ಯ ಬಂಡವಾಳ ದಿಗಂತ್‌ಗೆ ಗೊತ್ತಿತ್ತಾ..?

  ಸೌಭಾಗ್ಯ ಬಂಡವಾಳ ದಿಗಂತ್‌ಗೆ ಗೊತ್ತಿತ್ತಾ..?

  ಸೌಭಾಗ್ಯಳ ಆಸ್ತಿಗೆ ಸಂಬಂಧಿಸಿದ ದಾಖಲೆಗಳೆಲ್ಲಾ ದಿಗಂತ್ ಕ್ಯಾಬಿನ್ ನಲ್ಲಿಯೇ ಇತ್ತು. ಇಲ್ಲಿವರೆಗೂ ಆ ದಾಖಲೆಗಳು ಯಾರ ಕೈಗೂ ಸಿಕ್ಕಿರಲಿಲ್ಲ. ದಾಖಲೆ ಮಾತ್ರ ಅಲ್ಲ, ಕೀ ಕೂಡ ಯಾರ ಕೈಗೂ ಸಿಕ್ಕಿರಲಿಲ್ಲ. ಈ ಎಲ್ಲಾ ವಿಚಾರಗಳು ತಿಳಿದೇ ದಿಗಂತ್ ಆ ದಾಖಲೆಗಳನ್ನು ಬಚ್ಚಿಟ್ಟಿರಬೇಕು. ದಾಖಲೆಗಳು ದಿಗಂತ್ ಕೈಸೇರಿದ ಮೇಲೇಯೇ ಸೌಭಾಗ್ಯ, ಆತನನ್ನು ಕೊಲೆ ಮಾಡುವ ಪ್ರಯತ್ನ ಮಾಡಿರಬೇಕು.

  ಅದಿತಿಯ ಬೆಂಬಲಕ್ಕೆ ನಿಂತ ಪ್ರಣತಿ

  ಅದಿತಿಯ ಬೆಂಬಲಕ್ಕೆ ನಿಂತ ಪ್ರಣತಿ

  ಅದಿತಿ ಮನೆಯಲ್ಲಿ ಇಲ್ಲ ಅಂತ ದಿಗಂತ್ ಮಂಕಾಗಿದ್ದಾನೆ. ಹುಚ್ಚನಂತೆ ಆಡುತ್ತಿದ್ದಾನೆ. ಅದಿತಿ ಬೇಕು ಎಂದು ಹಠ ಮಾಡುತ್ತಿದ್ದಾನೆ. ಈ ವೇಳೆ ಡಾಕ್ಟರ್ ಕೃಷ್ಣ ಟ್ರೀಟ್‌ಮೆಂಟ್ ಶುರು ಮಾಡಿದ್ದಾರೆ. ಹಳೆಯದ್ದನ್ನೆಲ್ಲಾ ನೆನಪಿಸಿಕೊಳ್ಳಲು ಪ್ರಯತ್ನ ಮಾಡಿದಾಗ ದಿಗಂತ್ ಪ್ರಜ್ಞೆ ತಪ್ಪಿದ್ದಾನೆ. ಇದನ್ನು ಕಂಡು ಸಹಜವಾಗಿಯೇ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಸೌಭಾಗ್ಯ ಒಂದು ಹೆಜ್ಜೆ ಮುಂದೆ ಹೋಗಿ ಎಮೋಷನಲ್ ಎಂಬುದಾಗಿ ವರ್ತಿಸಿದ್ದಾಳೆ. ಆಗ ಡಾಕ್ಟರ್ ಕೂಡ ಎಲ್ಲರಿಗೂ ಸಮಾಧಾನ ಮಾಡಿ, ಔಷಧಿ ಬರೆದುಕೊಟ್ಟಿದ್ದಾರೆ. ಸೌಭಾಗ್ಯ ಸಿಕ್ಕಿದ್ದೆ ಚಾನ್ಸ್ ಅಂತ ಚೀಟಿ ತೆಗೆದುಕೊಂಡು ಹೋಗಿ, ಔಷಧಿ ತರಲು ಹೋಗಿದ್ದಾಳೆ. ಆಗ ಪ್ರಣತಿ ತಡೆದು ಹಳೆ ಘಟನೆ ನೆನಪಿಸಿದ್ದಾಳೆ. ಆಗ ಸೌಭಾಗ್ಯ ಮತ್ತಷ್ಟು ಕೋಪ ಮಾಡಿಕೊಂಡಿದ್ದಾಳೆ.

  ಅದಿತಿಗೆ ಗೊತ್ತಾಗಿದೆ ಸೌಭಾಗ್ಯ ಅಕೌಂಟ್ ಡಿಟೇಲ್

  ಅದಿತಿಗೆ ಗೊತ್ತಾಗಿದೆ ಸೌಭಾಗ್ಯ ಅಕೌಂಟ್ ಡಿಟೇಲ್

  ಅದಿತಿ ಅದಾಗಲೇ ಸೌಭಾಗ್ಯ ಬಂಡವಾಳ ಬಯಲು ಮಾಡಲು ಹೊರಟಿದ್ದಾಳೆ. ಸೌಭಾಗ್ಯ ಹೆಸರಲ್ಲಿ ಎಷ್ಟು ಕೋಟಿ ಆಸ್ತಿ ಇದೆ ಎಂಬುದನ್ನು ಮಾವನ ಬಳಿ ಚರ್ಚಿಸಲು ಹೊರಟಿದ್ದಾಳೆ. ಈಗ ಹಣದ ವಿಚಾರಕ್ಕೂ ಸಿಕ್ಕಿ ಬೀಳುವ ಸಾಧ್ಯತೆ ಇದೆ. ಫೋನ್ ಬಂದಾಕ್ಷಣಾ ಸೌಭಾಗ್ಯ ಮುಖದಲ್ಲಿ ಬದಲಾವಣೆ ಕಂಡಿತ್ತು. ಇದನ್ನು ಗಮನಿಸಿದ ಪ್ರಣತಿ ಅದಿತಿಗೆ ಮಾಹಿತಿ ನೀಡಿದ್ದಾಳೆ. ಅದಿತಿ ಆಫೀಸಿಗೆ ಹೋಗಿರುವ ಕಾರಣ ಅಕೌಂಟ್‌ಗೆ ಹಣ ವರ್ಗಾವಣೆ ಮಾಡುವುದು ಬೇಡ. ಅದು ಅದಿತಿ ಗಮನಕ್ಕೆ ಬಂದು ಬಿಡುತ್ತದೆ ಎಂದುಕೊಂಡು ತಾನೇ ಹಣವನ್ನು ಕಲೆಕ್ಷನ್ ಮಾಡಿಕೊಂಡು ಬರುವುದಕ್ಕೆ ಹೋಗಿದ್ದಾಳೆ ಸೌಭಾಗ್ಯ.

  English summary
  Ardhangi Serial November 10th Episode Written Update. Here is the details about Swobhagya property details.
  Thursday, November 10, 2022, 23:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X