ಅರ್ಧಾಂಗಿ: ದಿಗಂತ್‌ಗೆ ಸೋನು ಬಿಟ್ಟರೆ ಅದಿತಿ ನೆನಪೇ ಆಗುತ್ತಿಲ್ಲ..!
ದಿಗಂತ್‌ಗೆ ಅಪಘಾತವಾಗಿ ಹಳೆಯ ನೆನಪಿನ ಶಕ್ತಿ ಹೋಗಿತ್ತು. ಪುಟ್ಟ ಮಗುವಿನಂತೆಯೇ ಆಡುತ್ತಿದ್ದ. ಆದರೂ ಅದಿತಿಯನ್ನು ಮದುವೆ ಮಾಡಿಸಿದರು. ಯಾವುದೋ ಪರಿಸ್ಥಿತಿಗೆ ಸಿಲುಕಿ, ಇನ್ಯಾರದ್ದೋ ಕುತಂತ್ರಕ್ಕೆ ಬಲಿಯಾಗಿದ್ದ ಅದಿತಿ, ಕೊನೆ ಕೊನೆಗೆ ಮುಗ್ಧಯೆ ಇರುವ ದಿಗಂತ್‌ನನ್ನೇ ತನ್ನ ಗಂಡನೆಂದು ಸ್ವೀಕರಿಸಿದಳು.
ಅವನಿಗಾಗಿ ತನ್ನೆಲ್ಲಾ ಖುಷಿಯನ್ನು ತ್ಯಾಗ ಮಾಡಿದ್ದಳು. ಅವನನ್ನು ಮೊದಲಿನಂತೆ ಮಾಡಲೇಬೇಕೆಂದು ಹಠ ಹಿಡಿದಳು. ಆ ಪರಿಶ್ರಮ ಫಲ ನೀಡಿದೆ. ಆದರೆ ಅದಿತಿಗೆ ಮತ್ತೊಂದು ಸಮಸ್ಯೆ ಬಂದೊದಗಿದೆ.
ದಿಗಂತ್ ಮೊದಲಿನಂತೆ ಆಗಬೇಕು ಎಂಬ ಕಾರಣದಿಂದ ಅದಿತಿ ಒಂದೊಂದು ದೇವಸ್ಥಾನಗಳಿಗೆ ಸುತ್ತಲಿಲ್ಲ. ಮನೆಯವರೆಲ್ಲರ ವಿರೋಧ ಕಟ್ಟಿಕೊಂಡು ಆಸ್ಪತ್ರೆಯಿಂದ ದೇವಸ್ಥಾನಗಳಿಗೆ ಕರೆದುಕೊಂಡು ಹೋದಳು. ಬಳಿಕ ಭಕ್ತಿಯಿಂದ ವ್ರತ ಮಾಡಿದಳು. ಅದಿತಿಯ ಭಕ್ತಿ, ನಿಷ್ಠೆಯೇ ದಿಗಂತ್‌ಗೆ ತನ್ನೆಲ್ಲಾ ಹಳೆಯ ನೆನಪು ಬಂದಂತಾಗಿದೆ. ಆದರೆ ಅದಿತಿಯನ್ನೇ ಮರೆತು ಬಿಟ್ಟಿದ್ದಾನೆ.

ಕಾರಿನಲ್ಲಿಯೇ ಕಾಡಿದೆ ದಿಗಂತ್‌ಗೆ ಹಳೆ ನೆನಪು
ಎಲ್ಲಾ ವೃತಗಳನ್ನು ಭಕ್ತಿಯಿಂದ ಮಾಡಿದ್ದ ಅದಿತಿಗೆ ಕೊನೆಯಲ್ಲಿ ಏನೋ ತಪ್ಪು ಮಾಡಿದ್ದೀನಿ ಎಂಬ ಭಯ ಕಾಡುವುದಕ್ಕೆ ಶುರುವಾಯಿತು. ತಕ್ಷಣ ರೇಣುಕಾ ತಾಯಿ ಗುಡಿಗೆ ಓಡಿ ಬಂದ ಅದಿತಿ ತಾಯಿಯಲ್ಲಿ ಕ್ಷಮೆ ಕೇಳಿದಳು. ಬಳಿಕ ರೇಣುಕಾಳಿಂದ ಮಾತ್ರ ಈ ಸಮಸ್ಯೆಗೆಲ್ಲಾ ಪರಿಹಾರ ಸಿಗುವುದಕ್ಕೆ ಸಾಧ್ಯ ಎಂದು ತಿಳಿದು, ಹುಡುಕಾಟ ನಡೆಸುತ್ತಿದ್ದಾಗ, ಅಲ್ಲಿನ ಅರ್ಚಕರು ಬಿಡಿಸಿ ಹೇಳಿದ್ದಾರೆ. ಯಾವಾಗಲೂ ಜೊತೆಯಲ್ಲಿದ್ದದ್ದು ರೇಣುಕಾ ದೇವಿ ಎಂದು ಗೊತ್ತಾದಾಗ ಖುಷಿ ಪಟ್ಟಿದ್ದಳು. ನೀನು ಧೈರ್ಯದಿಂದ ಮನೆಗೆ ಹೋಗು ಅಷ್ಟರಲ್ಲಿ ಹುಷಾರಾಗುತ್ತಾನೆ ಎಂದು ತಾಯಿ ಹೇಳಿದ್ದಳು. ಅದರಂತೆ ಮನೆ ತಲುಪುವುದಕ್ಕೂ ಮುನ್ನವೇ ದಿಗಂತ್‌ಗೆ ಹಳೆಯ ನೆನಪು ಬಂದಿದೆ.

ಮನೆಯವರೆಲ್ಲರಿಗೂ ಶಾಕ್
ದೇವಸ್ಥಾನಗಳಲ್ಲಿ ದೇವರ ಸೇವೆ ಮುಗಿಸಿಕೊಂಡು ಬರುತ್ತಿರುವಾಗಲೇ ದಿಗಂತ್‌ಗೆ ಹಳೆಯ ನೆನಪುಗಳು ಬಂದಿದೆ. ಆದರೆ ವಿಚಿತ್ರವಾಗಿ ಆಡುವಾಗ ವಾಂತಿ ಆಗಿದೆ. ಬಳಿಕ ನಿದ್ದೆ ಬಂದು ಮಲಗಿ ಬಿಟ್ಟಿದ್ದ. ಎಚ್ಚರ ಆದಾಗ ಮನೆಯ ಮುಂದೆ ಕಾರಿನಲ್ಲಿ ಇಳಿದಿದ್ದ. ಆದರೆ ಮನೆಯವರನ್ನೆಲ್ಲಾ ನೋಡಿ ಯಾವುದೇ ಹೊಸ ಎಕ್ಸ್‌ಪ್ರೆಷನ್ ನೀಡಲಿಲ್ಲ. ಆದರೆ ಮನೆಯ ಸೊಸೆಯಂದಿರನ್ನು ಕಂಡು ಮಾತನಾಡಿಸದೆ ಒಳ ನಡೆದಿದ್ದಾನೆ. ಅವನ ಸ್ಟೈಲ್ ಮೊದಲಿನಂತೆ ಆಗಿದೆ. ಆದರೆ ಮನೆಯವರಿಗೆಲ್ಲಾ ಆತ ಮಾತನಾಡಿಸದೆ ಒಳ ನಡೆದಿದ್ದನ್ನು ಕಂಡು ಆಶ್ಚರ್ಯವಾಗಿದೆ.

ಅದಿತಿಗೆ ಕ್ಲಾಸ್ ತೆಗೆದುಕೊಂಡ ಸೌಭಾಗ್ಯ
ದಿಗಂತ್ ಏನು ಮಾತನಾಡುತ್ತಿಲ್ಲ. ಮನೆಯವರನ್ನು ನೋಡಿಯೂ ಮಾತನಾಡುತ್ತಿಲ್ಲ. ಇದು ಮನೆಯವರಿಗೆ ಗಾಬರಿ ತರಿಸಿದೆ. ಅದಿತಿ ಒಳಗೆ ಬರುತ್ತಿದ್ದಂತೆ ಹೇಗಿದ್ದೀಯಾ ಏನು ಯಾವುದನ್ನು ಕೇಳದೆ ಸೌಭಾಗ್ಯ ಹಾಗೂ ಮೈತ್ರಿ, ಅದಿತಿಯದ್ದೆ ತಪ್ಪು ಈಗ ದಿಗಂತ್ ನೋಡು ಯಾರ ಜೊತೆಗೂ ಮಾತನಾಡುತ್ತಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಬಳಿಕ ಈಗ ಅಪ್ಪಯ್ಯ ಹುಷಾರಾಗಿದ್ದಾನಾ ಎಂದು ಕೇಳಿದರೆ ಅದಿತಿ ಇಲ್ಲ ಎಂದೇ ಉತ್ತರಿಸಿದ್ದಾಳೆ.

ದಿಗಂತ್ ಮೊದಲಿನಂತೆಯೇ ಆಗಿದ್ದಾನೆ
ದಿಗಂತ್‌ನನ್ನು ಯಾವಾಗಲೂ ಕಾಡುವುದು ಸೋನು ಮಾತ್ರ. ತನ್ನ ಹಳೆಯ ನೆನಪಿನಲ್ಲಿ ಸೋನು ಅಚ್ಚಳಿಯದೆ ಉಳಿದು ಬಿಟ್ಟಿದ್ದಾಳೆ. ದಿಗಂತ್ ಸಂಪೂರ್ಣ ಮೊದಲಿನಂತೆ ಆಗಿದ್ದಾನೆ. ಊಟಕ್ಕೂ ಮೊದಲಿನ ಗತ್ತಿನಲ್ಲೇ ಬಂದು ಕುಳಿತಿದ್ದಾನೆ. ಅವರ ತಾಯಿ ಊಟ ಬಡಿಸಿದ್ದಾರೆ. ನೆತ್ತಿಗೆ ಹತ್ತಿದ ಬಳಿಕ ಅದಿತಿ ನೀರು ಕುಡಿಸಲು ಹೋದಾಗ ದೂರ ತಳ್ಳಿದ್ದಾನೆ. ನೀನು ಯಾರು ಎಂದು ಕೇಳಿದ್ದಾನೆ. ಯಾರು ಅಂತಾನೆ ಗೊತ್ತಿಲ್ಲ ಅಂತ ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ಎಲ್ಲರು ಶಾಕ್ ಆಗಿದ್ದಾರೆ. ದಿಗಂತ್‌ಗೆ ಅದಿತಿಯ ಬಗ್ಗೆ ಹೇಳುವುದಕ್ಕೆ ಟ್ರೈ ಮಾಡಿದ್ದಾರೆ.


Click it and Unblock the Notifications











