For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ಸೌಭಾಗ್ಯ ಬಯಸಿದಂತೆ ಆಸ್ತಿ ಸಿಗುತ್ತಾ? ದೇವರ ಆಶೀರ್ವಾದ ದಿಗಂತ್ ಮೇಲೆ ಬೀಳುತ್ತಾ?

  By ಎಸ್ ಸುಮಂತ್
  |

  ಅರ್ಚಕರು ಹೇಳಿದಂತೆ ದೇವಸ್ಥಾನಕ್ಕೆ ಹೋದರೂ ಸರಿಯಾಗಲಿಲ್ಲ. ವಿಶೇಷ ಪೂಜೆ ಮಾಡಿಸಿದರೂ ಸರಿಯಾಗಲಿಲ್ಲ. ಸ್ವತಃ ರೇಣುಕಾ ದೇವಿ ಪಕ್ಕದಲ್ಲಿ ನಿಂತರೂ ದಿಗಂತ್ ಮೊದಲಿನಂತೆ ಆಗಲೇ ಇಲ್ಲ. ನೆನಪು ಆಗಾಗ ಬರುತ್ತೆ. ಆಗಾಗ ಹೋಗುತ್ತೆ. ಬಂದಾಗೊಮ್ಮೆ ಎದ್ದು ಪಕ್ಕದಲ್ಲಿಯೇ ಇರುವ ಅದಿತಿಯನ್ನು ನೀನು ಯಾರು ಅಂತ ಕೇಳುತ್ತಾನೆ. ಮತ್ತೆ ನೀನೇ ನನ್ನ ಏಂಜಲ್ ಅನ್ನುತ್ತಾನೆ. ಹೀಗೆ ಸಾಗುತ್ತಿದೆ ಅದಿತಿ ಮತ್ತು ದಿಗಂತ್ ಜೀವನ.

  ಸದ್ಯ ದೇವರ ದರ್ಶನ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ದಿಗಂತ್ ಮಾಮೂಲಿಯಂತೆ ಬರೀ ಗೊಂಬೆಗಳ ಜೊತೆ ಆಟವಾಡಲು ಶುರು ಮಾಡಿದ್ದಾನೆ. ಆದರೆ ಗೊಂಬೆಗಳು ಬೋರ್ ಆದಾಗ ಅದಿತಿ ಬೋಟ್ ಮಾಡುವುದನ್ನು ಹೇಳಿಕೊಟ್ಟಿದ್ದಾಳೆ. ದಿಗಂತ್ ಅವನ ಪಾಡಿಗೆ ಅವನು ಆಡುವಾಗ ಇದನ್ನೇ ಮೈತ್ರಿ ಬಂಡವಾಳ ಮಾಡಿಕೊಂಡಿದ್ದಾಳೆ.

  ಬೆಟ್ಟದ ಹೂ: ಮಾಲಿನಿ ಮಾಡಿದ ಅವಾಂತರ! ಕ್ಷಣ-ಕ್ಷಣಕ್ಕೂ ಭಯದಲ್ಲಿರುವ ಹೂವಿ-ರಾಹುಲ್ಬೆಟ್ಟದ ಹೂ: ಮಾಲಿನಿ ಮಾಡಿದ ಅವಾಂತರ! ಕ್ಷಣ-ಕ್ಷಣಕ್ಕೂ ಭಯದಲ್ಲಿರುವ ಹೂವಿ-ರಾಹುಲ್

  ದಿಗಂತ್‌ನಿಂದ ಬಚಾವ್ ಆದ್ಲು ಮೈತ್ರಿ

  ದಿಗಂತ್‌ನಿಂದ ಬಚಾವ್ ಆದ್ಲು ಮೈತ್ರಿ

  ಮುಂಬೈನಲ್ಲಿ ಮೀಟಿಂಗ್ ಇದೆ. ಹೊಸ ಪ್ರಾಜೆಕ್ಟ್ ಬಗ್ಗೆ ಮಾತನಾಡಿಕೊಂಡು ಬರುತ್ತೀನಿ ಅಂತ ಹೇಳಿ ಅದಿತಿ ಹಾಗೂ ದಿಗಂತ್‌ನನ್ನು ಕೊಲ್ಲುವುದಕ್ಕೆ ಹೊರಟಿದ್ದಳು. ಈಗ ಮನೆಯಲ್ಲಿ ಮಾವ ಆ ಪ್ರಾಜೆಕ್ಟ್ ಬಗ್ಗೆ ಕೇಳುತ್ತಿದ್ದಾರೆ. ಕೇಳಿದ ಕೂಡಲೇ ಏನು ಮಾಡಬೇಕು ಎಂದು ತೋಚಿಲ್ಲ. ಬೋಟ್ ಆಡಿಕೊಂಡು ಕೂತಿದ್ದ ದಿಗಂತ್ ಬಂಡವಾಳವಾಗಿದ್ದಾನೆ. ನಿಮಗೆ ಬೋಟ್ ಮಾಡುವುದಕ್ಕೆ ಈ ಪೇಪರ್ ತೆಗೆದುಕೊಳ್ಳಿ ಅಂತ ಎಲ್ಲಾ ಪೇಪರ್ ಕೊಟ್ಟು, ಮಾವ, ಅತ್ತೆ, ದೊಡ್ಡಮ್ಮ ಎಲ್ಲರನ್ನು ಕರೆದು ದಿಗಂತ್ ಪ್ರಾಜೆಕ್ಟ್ ಪೇಪರ್ ಹರಿದು ಹಾಕಿದ್ದಾನೆ ಎಂದು ನಾಟಕವಾಡಿದ್ದಾಳೆ.

  ದಿಗಂತ್ ಸಹಿಗಾಗಿ ಬಂತು ಫೈಲ್

  ದಿಗಂತ್ ಸಹಿಗಾಗಿ ಬಂತು ಫೈಲ್

  ಒಂದು ಮುಖ್ಯವಾದ ಪ್ರಾಜೆಕ್ಟ್ ಮುಕ್ತಾಯ ಮಾಡಬೇಕಾದ ಸಮಯ ಬಂದಿದೆ. ಅದಕ್ಕೆ ದಿಗಂತ್ ಸಹಿ ಹಾಗೂ ಅವರ ಅಪ್ಪನ ಸಹಿ ಬೇಕಾಗಿದೆ. ಅದಕ್ಕೆ ಆಫೀಸಿನಿಂದ ಸಿಬ್ಬಂದಿ ಮನೆಗೆ ಬಂದಿದ್ದಾರೆ. ದಿಗಂತ್ ಅಪ್ಪ ನನ್ನ ಸಹಿ ಏನೋ ಹಾಕಬಹುದು. ಆದರೆ ದಿಗಂತ್ ಸಹಿ ಹಾಕುವುದು ಹೇಗೆ ಎಂಬುದರ ಬೇಸರದಲ್ಲಿದ್ದಾರೆ. ಈ ಸಮಯದಲ್ಲಿ ಊಟ ಮಾಡುತ್ತಿದ್ದ ಸೌಭಾಗ್ಯ ತಟ್ಟೆಯಲ್ಲಿ ನೀರು ಹಾಕಿದ್ದಾಳೆ. ಈ ನೋವನ್ನು ಹೇಗೆ ತಡೆದುಕೊಳ್ಳಲಿ ಅಂತ ಮತ್ತೆ ನಾಟಕ ಶುರು ಮಾಡಿದ್ದಾಳೆ.

  ಆಸ್ತಿ ಎಲ್ಲಾ ಸೌಭಾಗ್ಯಗೆ ಸಿಗುತ್ತಾ..?

  ಆಸ್ತಿ ಎಲ್ಲಾ ಸೌಭಾಗ್ಯಗೆ ಸಿಗುತ್ತಾ..?

  ಸೌಭಾಗ್ಯ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಅನ್ನೊ ಸ್ಥಿತಿ ಬಂದೊದಗಿದೆ. ಫೈಲ್ ಮನೆಗೆ ಬಂದ ಮೇಲೆ ಡೈನಿಂಗ್ ಟೇಬಲ್ ಮೇಲೆಯೇ ಒಂದು ವಿಚಾರ ಪ್ರಸ್ತಾಪ ಮಾಡಿದ್ದಾಳೆ. ಈ ಎಲ್ಲಾ ಆಸ್ತಿಯನ್ನು ನೋಡಿಕೊಂಡು, ಎಲ್ಲಾ ಜವಾಬ್ದಾರಿಗೂ ಸಹಿ ಹಾಕುವ ಪವರ್ ಆಫ್ ಅಟಾರ್ನಿಯನ್ನು ಯಾರಿಗಾದರೂ ಕೊಡಬಹುದು ಎಂದು ಪ್ರಸ್ತಾಪಿಸಿದ್ದಾಳೆ. ಇದಕ್ಕೆ ಅದಿತಿಯ ಗಮನ ಸೆಳೆಯುವಂತೆ ಮಾಡಿದ್ದಾಳೆ. ಅದಿತಿ ದೊಡ್ಡಮ್ಮನ ಮೋಸದಾಟ ಗೊತ್ತಿಲ್ಲದೆ ಅವರ ಪರ ಮಾತನಾಡುತ್ತಿದ್ದಾಳೆ.

  ದಿಗಂತ್‌ಗೆ ದೇವರ ಆಶೀರ್ವಾದ ಸಿಗುತ್ತಾ?

  ದಿಗಂತ್‌ಗೆ ದೇವರ ಆಶೀರ್ವಾದ ಸಿಗುತ್ತಾ?

  ಸವದತ್ತಿಗೆ ಅದಿತಿ ಹೋದಾಗ ರೇಣುಕಾ ದೇವಿ ಜೊತೆಯಲ್ಲಿಯೇ ಇದ್ದುಕೊಂಡು ಕಾಪಾಡಿದ್ದಾಳೆ. ಹಲವು ಬಾರಿ ಪ್ರಾಣಾಪಾಯವಾದಾಗಲೂ ಕಾಪಾಡಿದ್ದಾಳೆ. ನೀನು ಮನೆಗೆ ಹೋಗುವಷ್ಟರಲ್ಲಿ ನಿನ್ನ ಗಂಡ ಹುಷಾರಾಗುತ್ತಾನೆ ಅಂತ ಹೇಳಿ ಕಳುಹಿಸಿದ್ದಳು. ಆ ಕಾಲ ಈಗ ಬಂದಿದೆ ಎನ್ನಿಸುತ್ತಿದೆ. ಆಸ್ತಿಗಾಗಿ ಸೌಭಾಗ್ಯ ಮಾಡಿರುವ ಪ್ಲ್ಯಾನ್ ಫೇಲ್ ಆಗಬಹುದು. ದಿಗಂತ್ ಈಗ ಮೊದಲಿನಂತೆ ಆಗಲು ಬಹುದು. ಪವರ್ ಆಫ್ ಅಟಾರ್ನಿಗೆ ಸಹಿ ಹಾಕಲು ದಿಗಂತ್ ಬಿಡುವುದಿಲ್ಲ ಎನಿಸುತ್ತದೆ. ತಾಯಿಯ ಆಶೀರ್ವಾದ ಸಿಗಲೂಬಹುದು.

  English summary
  Ardhangi Serial October 13th Episode Written Update. Here is the details.
  Thursday, October 13, 2022, 21:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X