ಅರ್ಧಾಂಗಿ: ಸೌಭಾಗ್ಯ ಆಟ ನಡೆಯಲಿಲ್ಲ, ಪವರ್ ಆಫ್ ಅಟಾರ್ನಿ ಪೇಪರ್ ಹರಿದು ಹಾಕಿದ ದಿಗಂತ್!
ಎಲ್ಲರಿಗೂ ಮಂಕು ಬೂದಿ ಎರಚಿ, ತನ್ನ ಆಸೆಯನ್ನು ಈಡೇರಿಸಿಕೊಳ್ಳುವಲ್ಲಿ ಸೌಭಾಗ್ಯ ಯಶಸ್ವಿಯಾಗಿದ್ದಾಳೆ. ನಿಮ್ಮೆಲ್ಲರ ಖುಷಿಯೇ ನನ್ನ ಖುಷಿ ಎಂದು ನಂಬಿಸಿದ್ದಾಳೆ, ನಿಮ್ಮನ್ನು ಬಿಟ್ಟರೆ ನನಗೆ ಬೇರೆ ಯಾರಿದ್ದಾರೆ ಎಂದು ಸುಳ್ಳನ್ನು ಒಪ್ಪಿಸಿದ್ದಾಳೆ. ತಮ್ಮನಿಗೆ ನೆಮ್ಮದಿ ಬೇಕು ಎಂದು ಪುಸಲಾಯಿಸಿದ್ದಾಳೆ. ಇದೆಲ್ಲದರ ನಡುವೆ ಮಕ್ಕಳು ಕೂಡ ಅತ್ತೆಯನ್ನು ಹೆಚ್ಚಾಗಿ ನಂಬಿದ್ದಾರೆ. ಹೀಗಾಗಿ ಸೌಭಾಗ್ಯ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿದೆ.
ಅದಿತಿಗೆ ಮಾವನ ಬಗ್ಗೆ ಚಿಂತೆ. ಆಫೀಸ್ ಟೆನ್ಶನ್‌ನಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬುದು. ಹೀಗಾಗಿ ಆಸ್ತಿಯನ್ನೆಲ್ಲಾ ದೊಡ್ಡಮ್ಮನ ಹೆಸರಿಗೆ ಮಾಡಿದರೆ ಅವರೇ ನಿಭಾಯಿಸಿಕೊಂಡು ಹೋಗುತ್ತಾರೆ ಎಂದು ನಂಬಿದ್ದಾಳೆ. ಹೀಗಾಗಿ ಗಂಡನ ಹೆಸರಲ್ಲಿರುವ ಆಸ್ತಿಯನ್ನು ದೊಡ್ಡಮ್ಮನ ಹೆಸರಿಗೆ ಬರೆಯುವುದಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾಳೆ. ಅದರಂತೆ ಎಲ್ಲವೂ ಸಿದ್ಧವಾಗಿದೆ.

ಆಸ್ತಿ ಕೈ ತಪ್ಪುವ ಭಯದಲ್ಲಿ ಸೌಭಾಗ್ಯ
ಸೌಭಾಗ್ಯ ಇಷ್ಟು ದಿನ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದೆ. ಅಚ್ಯುತನಿಗೂ ಚೆನ್ನಾಗಿ ತಲೆ ಸವರಿದ್ದಾಳೆ. ನನ್ನ ಅಕ್ಕನ ಹೆಸರಲ್ಲಿದ್ದರೆ ಯಾವುದೇ ಸಮಸ್ಯೆ ಇಲ್ಲ ಎಂದು ಅಚ್ಯುತ್ ಕೂಡ ನಂಬಿದ್ದಾನೆ. ಹೀಗಾಗಿ ಪವರ್ ಆಫ್ ಅಟಾರ್ನಿಯನ್ನು ಸೌಭಾಗ್ಯ ಹೆಸರಿಗೆ ಬರೆಯಲು ಯಾವುದೇ ಸಮಸ್ಯೆ ಅಚ್ಯುತನಿಗೆ ಕಾಣಿಸುತ್ತಿಲ್ಲ. ಅತ್ತ ಲಾಯರ್ ಬರುವುದು ಬೇರೆ ತಡವಾಗುತ್ತಿದೆ. ಹೀಗಾಗಿ ಸೌಭಾಗ್ಯ ಸ್ವಲ್ಪ ಟೆನ್ಶನ್ ನಲ್ಲಿಯೇ ಇದ್ದಾಳೆ.

ಮಕ್ಕಳಿಗೆ ಆಸ್ತಿ ಕೇಳಲು ಬಂದ ಮೈತ್ರಿ ಅಮ್ಮ
ಮೈತ್ರಿ ಹಾಗೂ ಅದಿತಿ ಅಕ್ಕ ತಂಗಿಯರು. ಮೈತ್ರಿಗಾಗಿ ಅದಿತಿ ತನ್ನ ಜೀವನವನ್ನು ತ್ಯಾಗ ಮಾಡಿದಳು. ತಾಯಿ ಕೂಡ ಹೆಚ್ಚು ಬೆಂಬಲವಾಗಿ ನಿಂತಿರುವುದು ಮೈತ್ರಿಗೆ. ಮನೆಯಲ್ಲಿ ಆಗುವ ಎಲ್ಲಾ ಆಗು ಹೋಗುಗಳನ್ನು ಮೈತ್ರಿ ತನ್ನ ತಾಯಿಗೆ ಹೇಳುತ್ತಾಳೆ. ಈಗ ಆಸ್ತಿ ಹಂಚಿಕೆಯಾಗುತ್ತಿರುವ ವಿಚಾರವೂ ಗೊತ್ತಾಗಿದೆ. ಹೀಗಾಗಿ ಮನೆಗೆ ಬಂದಿರುವ ಮೈತ್ರಿ ಅಮ್ಮ, ನನ್ನ ಮಕ್ಕಳಿಗೂ ಆಸ್ತಿ ಬೇಕು ಎಂದು ಗಲಾಟೆ ಮಾಡಿದ್ದಾಳೆ. ಅದಕ್ಕೆ ಸೌಭಾಗ್ಯ ರೊಚ್ಚಿಗೆದ್ದಿದ್ದು, ಅಚ್ಯುತನ ಆಸ್ತಿಗೆ ಸಂಬಂಧ ಇಲ್ಲದೆ ಇರುವವರೆಲ್ಲಾ ಬಂದು ಬಿಡುತ್ತಾರೆ ಎಂದು ಕೋಪಗೊಂಡಿದ್ದಾಳೆ. ಮೈತ್ರಿ ಅಮ್ಮನನ್ನು ಅಚ್ಯುತ್ ಸಮಾಧಾನ ಮಾಡಿದ್ದಾನೆ.

ಆಸ್ತಿ ಪತ್ರಕ್ಕೆ ಸಹಿ ಹಾಕಲು ರೆಡಿಯಾದ ದಿಗಂತ್
ಪವರ್ ಆಫ್ ಅಟಾರ್ನಿಗೆ ದಿಗಂತ್ ಸಹಿ ತುಂಬಾ ಮುಖ್ಯವಾಗಿದೆ. ಆದರೆ ಸಹಿ ಹಾಕುವಷ್ಟು ಶಕ್ತನಾಗಿ ದಿಗಂತ್ ಇಲ್ಲ. ಆದರೆ ಅದಿತಿ ಆ ಜವಾಬ್ದಾರಿ ಪಡೆದಿದ್ದಾಳೆ. ಹೀಗಾಗಿ ದಿಗಂತ್ ಬಳಿ ಸಹಿ ಹಾಕಿಸುವುದಕ್ಕೆ ಪ್ರಾಕ್ಟಿಸ್ ಮಾಡಿಸುತ್ತಿದ್ದಾಳೆ. ದಿಗಂತ್, ಅದಿತಿ ಹೇಳಿದ ಮಾತನ್ನು ತೆಗೆದು ಹಾಕುವುದಿಲ್ಲ. ಹೀಗಾಗಿ ಅದಿತಿ ಹೇಳಿದಂತೆ ಕೇಳುತ್ತಿದ್ದಾನೆ. ಸಹಿ ಹಾಕುವುದನ್ನು ಪ್ರಾಕ್ಟೀಸ್ ಮಾಡಿಕೊಳ್ಳುತ್ತಿದ್ದಾನೆ.

ಸೌಭಾಗ್ಯ ಕೈ ಮೀರಿದ ಆಸ್ತಿ ಆಸೆ
ಎಲ್ಲವೂ ಸಿದ್ದತೆಯಾಗಿದೆ. ಸೌಭಾಗ್ಯಳ ಹೆಸರಿಗೆ ಆಸ್ತಿ ಹಂಚಿಕೆಯಾಗುತ್ತೆ. ಆಸ್ತಿ ಬಂದ ಕೂಡಲೇ ಎಲ್ಲರನ್ನು ಬೀದಿಗೆ ತರುವ ಪ್ಲ್ಯಾನ್ ಮಾಡಿಕೊಂಡು ಒಳಗೊಳಗೆ ಖುಷಿ ಪಡುತ್ತಿದ್ದಾಳೆ. ಸೌಭಾಗ್ಯ ಹಾಗೂ ಆಕೆಯ ಗಂಡ, ಅಚ್ಯುತ್ ಸಹಿ ಹಾಕಿ ಆಯ್ತು. ದಿಗಂತ್‌ನನ್ನು ಸಹಿ ಹಾಕುವುದಕ್ಕೆ ಕರೆಯಲಾಗಿದೆ. ಫುಲ್ ಟಿಪ್ ಟಾಪ್ ಆಗಿ ರೆಡಿಯಾಗಿ ಬಂದ ದಿಗಂತ್ ಎಲ್ಲರಿಗೂ ಶಾಕ್ ನೀಡಿದ್ದಾನೆ. ದಿಗಂತ್ ರೆಡಿಯಾಗಿದ್ದು ಯಾರಿಗೂ ಆಶ್ಚರ್ಯ ಎನಿಸಲಿಲ್ಲ. ಆದರೆ ಪವರ್ ಆಫ್ ಅಟಾರ್ನಿ ಪೇಪರ್‌ಗೆ ಸಹಿ ಹಾಕುವುದಕ್ಕೆ ನೀಡಿದರೆ ಅದನ್ನು ಹರಿದು ಬಿಸಾಕಿದ್ದಾನೆ.


Click it and Unblock the Notifications











