ಅರ್ಧಾಂಗಿ: ದಿಗಂತ್ ಮೊದಲಿನಂತೆ ಆಗದಂತೆ ಸೌಭಾಗ್ಯ ಮಾಡುತ್ತಿರೋದೇನು?

By ಎಸ್ ಸುಮಂತ್

ತಮ್ಮನ ಮನೆಯ ಆಸ್ತಿಯನ್ನು ದೋಚಲೇಬೇಕೆಂದು ಸೌಭಾಗ್ಯ ಪಣ ತೊಟ್ಟಿದ್ದಾಳೆ. ಅದಕ್ಕಾಗಿ ಇರುವ ಎಲ್ಲಾ ದಾರಿಯನ್ನು ಸಲೀಸು ಮಾಡಿಕೊಂಡು ಬರುತ್ತಿದ್ದಾಳೆ. ಅಡ್ಡ ಬಂದವರನ್ನು ಮಟ್ಟ ಹಾಕುತ್ತಾ ತನ್ನ ದಾರಿಯನ್ನು ಸಾಗಿಸುತ್ತಿದ್ದಾಳೆ.

ಈಗ ಮೈತ್ರಿಯ ಬಾಯಿ ಮುಚ್ಚಿಸಿ, ಅವಳಿಂದಾನು ಹೆಲ್ಪ್ ತೆಗೆದುಕೊಳ್ಳುತ್ತಿದ್ದಾಳೆ. ಆದರೆ ಸೌಭಾಗ್ಯಳ ಈ ನಯ ನಾಜೂಕಿನ ಬುದ್ದಿ ಆಸ್ತು ಒಡೆದು, ತಮ್ಮನ ಮನೆಯನ್ನು ಬೀದಿಗೆ ತರುವುದಷ್ಟೆ.

ದಿಗಂತ್ ಪರ್ಫೆಕ್ಟ್ ಬ್ಯುಸಿನೆಸ್ ಮ್ಯಾನ್. ಆಸ್ತಿ, ಮನೆ, ಬ್ಯುಸಿನೆಸ್ ಎಲ್ಲದನ್ನು ಒಬ್ಬನೇ ಮೆಂಟೇನ್ ಮಾಡುತ್ತಿದ್ದ ಸೌಭಾಗ್ಯ ಬುದ್ದಿ ಗೊತ್ತಿತ್ತು. ಇದನ್ನು ಸಹಿಸದ ಸೌಭಾಗ್ಯ, ದಿಗಂತ್‌ಗೆ ಅಪಘಾತವಾಗುವಂತೆ ಮಾಡಿದ್ದಾಳೆ. ಅವನಿಗೆ ಯಾವುದು ಸರಿಯಾಗಿ ನೆನಪಿಲ್ಲದಂತೆ ಮಾಡಿದ್ದಾಳೆ. ಈಗ ಔಷಧಿಯಲ್ಲೂ ಸೌಭಾಗ್ಯ ಆಟ ಆಡುತ್ತಿದ್ದಾಳೆ ಅನ್ನೋದು ಅದಿತಿಗೆ ಸಿಕ್ಕಂತಹ ಸಾಕ್ಷಿಗಳು.

ಸೌಭಾಗ್ಯಗೆ ಸಿಗಲಿಲ್ಲ ಆಸ್ತಿಯ ಹಕ್ಕು

ಸೌಭಾಗ್ಯಗೆ ಸಿಗಲಿಲ್ಲ ಆಸ್ತಿಯ ಹಕ್ಕು

ಸೌಭಾಗ್ಯ ಹೆಸರಿಗೆ ಎಲ್ಲಾ ಆಸ್ತಿಯನ್ನು ಬರೆಯುವುದಕ್ಕೆ ಸಿದ್ಧತೆ ನಡೆದಿತ್ತು. ದಿಗಂತ್ ಸಹಿ ಒಂದು ಬೇಕಾಗಿತ್ತು ಅಷ್ಟೇ. ದಿಗಂತ್ ಸಹಿ ಮಾಡುವುದಕ್ಕೆ ಬಂದ ಸ್ಟೈಲ್ ನೋಡಿ ಎಲ್ಲರೂ ಶಾಕ್ ಆಗಿದ್ದರು. ಆದರೆ ದಿಗಂತ್ ಆಗಾಗ ಬದಲಾಗುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದ್ದ ಕಾರಣ ಸುಮ್ಮನೆ ಆಗಿದ್ದರು. ಸಹಿ ಮಾಡುವುದಕ್ಕಾಗಿ ಅದೇ ಸ್ಟೈಲ್‌ನಲ್ಲಿ ಬಂದ ದಿಗಂತ್ ಪತ್ರವನ್ನು ಹರಿದು ಹಾಕಿದ್ದಾನೆ. ಇದನ್ನು ಕಂಡು ಸೌಭಾಗ್ಯ ಹೌಹಾರಿದ್ದಾಳೆ. ಆ ಪೇಪರ್‌ನಲ್ಲಿ ಬೋಟ್ ಮಾಡುವುದಕ್ಕೆ ಹರಿದಿದ್ದ.

ಸೌಭಾಗ್ಯ ಆಸ್ತಿ ಆಸೆಗೆ ಕೊನೆ

ಸೌಭಾಗ್ಯ ಆಸ್ತಿ ಆಸೆಗೆ ಕೊನೆ

ಇಷ್ಟೆಲ್ಲಾ ನಡೆದ ಮೇಲೆ ಸೌಭಾಗ್ಯ ದಿಗಂತ್ ಮೇಲೆ ಬಹಳ ಬೇಗನೆ ಸಾಫ್ಟ್ ಕಾರ್ನರ್ ತೋರಿಸಿದ್ದಳು. ಬಳಿಕ ಅಚ್ಯುತ್, ದಿಗಂತ್‌ನನ್ನು ಬೈಯ್ಯುವುದಕ್ಕೆ ಆರಂಭಿಸಿದರು. ಆಸ್ತಿಗಾಗಿ ಸೌಭಾಗ್ಯ, ತನ್ನ ತಮ್ಮನನ್ನು ಸಮಾಧಾನ ಮಾಡಿದಳು. ಅಪ್ಪಯ್ಯ ಏನೋ ಗೊತ್ತಿಲ್ಲದಂತೆ ಮಾಡಿದ್ದಾನೆ ಬಿಡು. ಮತ್ತೊಂದು ಪೇಪರ್ ಸಿದ್ಧಪಡಿಸಿದರೆ ಆಯಿತು ಎಂದಳು. ಅದಕ್ಕೆ ಅಚ್ಯುತ ಒಪ್ಪಲಿಲ್ಲ. ಬೇಡ ಅಕ್ಕ. ದಿಗಂತ್ ಸರಿಯಾಗುವ ತನಕ ಆಸ್ತಿಯನ್ನು ನಿನ್ನ ಹೆಸರಿಗೆ ಬರೆಯುವುದು ಬೇಡ. ಇದು ಯಾಕೋ ಸರಿ ಕಾಣುತ್ತಿಲ್ಲ ಎಂದು ಸೌಭಾಗ್ಯ ಆಸ್ತಿ ಆಸೆಗೆ ತಣ್ಣೀರು ಎರಚಿದ್ದಾನೆ.

ಆಸ್ತಿ ಉಳಿದಿದ್ದಕ್ಕೆ ಮೈತ್ರಿ ಫುಲ್ ಖುಷಿ

ಆಸ್ತಿ ಉಳಿದಿದ್ದಕ್ಕೆ ಮೈತ್ರಿ ಫುಲ್ ಖುಷಿ

ದಿಗಂತ್‌ನನ್ನು ಮೈತ್ರಿ ಮತ್ತು ಆಕೆಯ ತಾಯಿ ಹುಚ್ಚ ಎಂದು ಆಡಿಕೊಳ್ಳುತ್ತಿದ್ದರು. ಇನ್ನೆಲ್ಲಿ ಆಸ್ತಿ ಕೈ ಮೀರಿ ಹೋಗುತ್ತದೋ ಎಂಬ ಭಯಕ್ಕೆ ಮೈತ್ರಿ ಅಮ್ಮ ಮನೆಗೆ ಬಂದು ಕುಳಿತಿದ್ದಳು. ಮಕ್ಕಳಿಗೆ ಅಲ್ಲದೆ ಹೋದರು, ಮೊಮ್ಮಕ್ಕಳಿಗಾದರೂ ಆಸ್ತಿ ಬೇಕಲ್ಲವಾ ಎಂದು ಕೇಳಿದ್ದಳು. ಅದ್ಯಾವುದಕ್ಕೂ ಸೊಪ್ಪು ಹಾಕದ ಸೌಭಾಗ್ಯ, ತನ್ನ ಹೆಸರಿಗೆ ಆಸ್ತಿ ಬರೆಸಿಕೊಳ್ಳಲು ಹೊರಟಿದ್ದಳು. ಆದರೆ ಅದೃಷ್ಟ ಕೈಕೊಟ್ಟಿತ್ತು ಎನಿಸುತ್ತದೆ. ದಿಗಂತ್ ಪೇಪರ್ ಹರಿದು ಹಾಕಿದ. ಇದನ್ನು ಕಂಡ ಮೈತ್ರಿ ಹಾಗೂ ಆಕೆಯ ಅಮ್ಮ ಹಿರಿಹಿರಿ ಹಿಗ್ಗಿದ್ದಾರೆ. ಆಸ್ತಿ ಉಳಿಯಿತು ಎಂದು ಸಂಭ್ರಮ ಪಟ್ಟುಕೊಂಡಿದ್ದಾರೆ.

ಅದಿತಿಗೆ ಮಾತ್ರೆ ಸತ್ಯ ಗೊತ್ತಾಗುತ್ತಾ..?

ಅದಿತಿಗೆ ಮಾತ್ರೆ ಸತ್ಯ ಗೊತ್ತಾಗುತ್ತಾ..?

ಆಸ್ತಿಗಾಗಿ ಅಪಘಾತವನ್ನೇ ಮಾಡಿಸಿದವಳು ಸೌಭಾಗ್ಯ. ಈಗ ಮಾತ್ರೆಯ ವಿಚಾರಕ್ಕೂ ಆಟವಾಡುತ್ತಿದ್ದಾಳೆ. ದಿಗಂತ್‌ಗೆ ಬೋಟ್ ಆಡುವ ಆಟ ತುಂಬಾನೇ ಇಷ್ಟವಾಗಿ ಬಿಟ್ಟಿದೆ. ಹೀಗಾಗಿ ಬೋಟ್ ಆಡುವುದಕ್ಕೆಂದು ಬಾಲ್ಕನಿಯಲ್ಲಿ ಸಿಕ್ಕ ಪೇಪರ್‌ಗಳನ್ನು ತಂದಿದ್ದರು. ಅದರಲ್ಲಿ ದಿಗಂತ್ ಹೆಸರು ಬರೆದಿತ್ತು. ಸೇಫ್ ಆಗಿ ಎತ್ತಿಡಲು ಹೋದಾಗ ಅಲ್ಲಿ ಬೇರೆಯದ್ದೇ ಮಾತ್ರೆಯ ಇನ್ನೊಂದು ಪೇಪರ್ ಸಿಕ್ಕಿದೆ. ಇದು ಅದಿತಿಗೆ ಅನುಮಾನ ಹುಟ್ಟಿಸಿದ್ದು, ವೈದ್ಯರ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದಾಳೆ. ವೈದ್ಯರ ಬಳಿಯೇ ಸಲಹೆ ಕೇಳಲಿದ್ದಾಳೆ.

More from Filmibeat

English summary
Ardhangi Serial October 18th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X