ಅರ್ಧಾಂಗಿ: ದಿಗಂತ್ ಕುಡಿದ ಹಾಲಿನಲ್ಲಿ ಏನಿದೆ? ಸೌಭಾಗ್ಯ ಕುತಂತ್ರ ತಿಳಿಯುತ್ತಾ?
ಸೌಭಾಗ್ಯ ಅದೆಷ್ಟು ಒಳ್ಳೆಯವಳಂತೆ ನಡೆದುಕೊಳ್ಳುತ್ತಿದ್ದಾಳೆ ಎಂದರೆ ಅಕ್ಕ ಎಂದರೆ ಹೀಗೆ ಇರಬೇಕು. ನಮ್ಮ ಅಕ್ಕನಿಗೆ ನಾವೂ ಬಿಟ್ಟರೆ ಬೇರೆ ಯಾವ ಚಿಂತೆಯೂ ಇಲ್ಲ. ನಮಗಾಗಿಯೇ ಜೀವನ ಮಾಡುತ್ತಿದ್ದಾಳೆ ಎಂದೆನಿಸಬೇಕು. ಅಷ್ಟು ಸಲೀಸಾಗಿ ಒಳ್ಳೆಯವಳಂತೆ ನಡೆದುಕೊಳ್ಳುತ್ತಿದ್ದಾಳೆ.
ಸೌಭಾಗ್ಯ ನಡವಳಿಕೆ ನಂಬಿದ್ದ ಮನೆಯವರೆಲ್ಲ ಇಡೀ ಆಸ್ತಿಯನ್ನು ಅವಳ ಹೆಸರಿಗೆ ಬರೆಯುವುದಕ್ಕೆ ಸಿದ್ಧವಾಗಿದ್ದರು. ಆದರೆ ಅದೃಷ್ಟ ಚೆನ್ನಾಗಿತ್ತು. ದಿಗಂತ್ ಅದನ್ನೆಲ್ಲಾ ಹರಿದು ಹಾಕಿದ್ದ.
ಆಸ್ತಿ ಮೇಲೆ ಕಣ್ಣಾಕಿರುವ ಸೌಭಾಗ್ಯ. ಇಂದು ದಿಗಂತ್‌ನ ಈ ಸ್ಥಿತಿಗೆ ಆಕೆಯೇ ಕಾರಣವಾಗಿದ್ದಾಳೆ. ಆಕ್ಸಿಡೆಂಟ್ ಆಗುವಂತೆ ಮಾಡಿದಳು. ನೆನಪು ಬಾರದಂತೆ ಇಲ್ಲಿವರೆಗೂ ನೋಡಿಕೊಳ್ಳುತ್ತಿದ್ದಾಳೆ. ಅದಕ್ಕೆಂದೇ ಬೇರೆ ಮಾತ್ರೆಗಳನ್ನು ನೀಡುತ್ತಾ, ಅವನನ್ನು ಅನಾರೋಗ್ಯಕ್ಕೆ ಈಡು ಮಾಡುತ್ತಿದ್ದಾಳೆ. ಆದರೆ ಅದು ಈಗ ಅದಿತಿಗೆ ತಿಳಿದಂತೆ ಆಗಿದೆ.

ದಿಗಂತ್ ಅಮ್ಮನಿಗೂ ಅನುಮಾನ ಶುರು
ದಿಗಂತ್ ಯಾಕೆ ಇನ್ನು ಹುಷಾರಾಗುತ್ತಿಲ್ಲ ಎಂಬ ಅನುಮಾನ ಮನೆಯವರಿಗೆಲ್ಲಾ ಬಂದಿದೆ. ಆದರೂ ಸಮಾಧಾನ ಮಾಡಿಕೊಂಡು ಸುಮ್ಮನೆ ಆಗಿದ್ದಾರೆ. ವೈದ್ಯರಿಗೆ ತೋರಿಸಿದರೆ ಇಲ್ಲ ಆದಷ್ಟು ಬೇಗ ಹುಷಾರಾಗುತ್ತಾನೆ ಎನ್ನುತ್ತಾರೆ. ಆದರೆ ಏನು ಬದಲಾವಣೆ ಆಗುವುದಿಲ್ಲ. ಯಾಕೋ ನನಗೆ ಆತಂಕವಾಗುತ್ತಿದೆ ಎಂದು ದಿಗಂತ್ ಅಮ್ಮ ತನ್ನ ಗಂಡನ ಬಳಿ ಹೇಳಿಕೊಂಡಾಗ, ಅಚ್ಯುತ್ ಸಮಾಧಾನ ಮಾಡಿದ್ದಾರೆ. ಅದಿತಿ ಇದ್ದಾಳೆ ಎಲ್ಲದನ್ನು ನೋಡಿಕೊಳ್ಳುತ್ತಾಳೆ. ಏನು ಆಗಲ್ಲ ಸರಿ ಆಗುತ್ತೆ ಎಂದಿದ್ದಾನೆ.

ಅದಿತಿ ನಡವಳಿಕೆ ಸೌಭಾಗ್ಯಗೆ ನಡುಕ
ದಿಗಂತ್ ಹೆಸರಿನಲ್ಲಿ ಸಾಕಷ್ಟು ಔಷಧಿಗಳ ಚೀಟಿಗಳು ಸಿಕ್ಕಿವೆ. ಇದು ಅದಿತಿಗೆ ಅನುಮಾನ ಮೂಡಿಸಿದೆ. ಸಿಕ್ಕಿದ ಅಷ್ಟು ಚೀಟಿಯಲ್ಲಿ ಯಾವುದೋ ಯಾವುದೋ ಹೆಸರು ಬರೆದಿರುವ ಕಾರಣ ಅನುಮಾನಗೊಂಡ ಅದಿತಿ, ವೈದ್ಯರ ಭೇಟಿಗೆ ಅನುಮತಿ ಪಡೆದಿದ್ದಾಳೆ. ದಿಗಂತ್‌ನನ್ನು ಕರೆದುಕೊಂಡು ಹೊರಟಿದ್ದಾಳೆ. ಸೌಭಾಗ್ಯ ಮತ್ತು ದಿಗಂತ್ ಅಮ್ಮ ಹೊರಗಡೆ ನಿಂತಿದ್ದಾಗ ಅವರಿಗೂ ವಿಚಾರ ಮುಟ್ಟಿಸಿ, ಹೇಳಿ ಹೊರಟಿದ್ದಾಳೆ. ಆಸ್ಪತ್ರೆಗೆ ಯಾಕೆ ಎಂದು ಸೌಭಾಗ್ಯ ಕೇಳಿದಾಗ ನಾರ್ಮಲ್ ಚೆಕಪ್‌ಗೆ ಅಷ್ಟೇ ಎಂದಿದ್ದಾಳೆ. ಇದು ಸೌಭಾಗ್ಯಗೆ ಆತಂಕ ತಂದೊಡ್ಡಿದೆ. ಏನಾದರೂ ಸತ್ಯಾಂಶ ಗೊತ್ತಾಗಿದೆಯಾ ಎಂಬ ಆತಂಕ ಶುರುವಾಗಿದೆ.

ಹಾಲಿಗೆ ಹೊಸ ಗೊತ್ತಿಲ್ಲದೆ ಔಷಧಿ ಮಿಕ್ಸ್
ಸೌಭಾಗ್ಯ ಮನೆಯಲ್ಲಿ ನಡೆದುಕೊಳ್ಳುವ ರೀತಿ ಯಾರಿಗೂ ಅನುಮಾನವೇ ಬರುವುದಿಲ್ಲ. ದಿಗಂತ್ ಮೇಲೆ ಪ್ರಾಣವೇ ಇಟ್ಟುಕೊಂಡಿರುವವಳಂತೆ ನಡೆದುಕೊಳ್ಳುತ್ತಾಳೆ. ಹೀಗಾಗಿ ಸೌಭಾಗ್ಯ ಏನೇ ಮಾಡಿದರು ಅದಕ್ಕೆ ಮನೆಯವರೆಲ್ಲಾ ಸೈ ಅನ್ನುತ್ತಾರೆ. ಹೀಗಾಗಿ ಸೌಭಾಗ್ಯ, ಪ್ರತಿದಿನ ದಿಗಂತ್‌ಗಾಗಿ ಮಿಸ್ ಮಾಡದೆ ಹಾಲು ತಂದು ಕೊಡುತ್ತಾಳೆ. ಈ ಹಾಲಿನಲ್ಲಿ ದಿಗಂತ್ ಆರೋಗ್ಯ ಸರಿಯಾಗದಂತೆ ಔಷಧಿ ಬೆರೆಸಿ ಕೊಡುತ್ತಿರುತ್ತಾಳೆ.

ದಿಗಂತ್ ಕುಡಿದ ಹಾಲಿನಲ್ಲಿ ಏನಿದೆ?
ನಿನ್ನೆ ರಾತ್ರಿ ಊಟ ಮಾಡುವುದಕ್ಕೂ ದಿಗಂತ್ ಹಠ ಮಾಡಿದ್ದ. ಆಯ್ತು ಊಟ ಮುಗಿಸಿ ಮಲಗಿ ಬಿಡಿ ಎಂದಾಗಲೂ ಇಲ್ಲ ನಂಗೆ ನಿದ್ದೆ ಬರುತ್ತಿಲ್ಲ. ಆಟ ಆಡಿ ಮಲಗುತ್ತೀನಿ ಎಂದಿದ್ದ. ಆದರೆ ಸೌಭಾಗ್ಯ ಕೊಟ್ಟ ಹಾಲು ಕುಡಿದು, ಅದಿತಿ ಊಟ ಹಾಖಿಕೊಂಡು ಬರುವುದರೊಳಗೆ ಮಲಗಿ ಬಿಟ್ಟಿದ್ದ. ಇದು ಅದಿತಿಗೆ ಅನುಮಾನ ಮೂಡಿಸಿತ್ತು. ಅದನ್ನು ಅಲ್ಲಿಗೆ ಬಿಟ್ಟಿದ್ದಾಳೆ. ಆದರೆ ಆಸ್ಪತ್ರೆಯಿಂದ ಮನೆಗೆ ಬಂದ ಅದಿತಿಗೆ ಆ ಗ್ಲಾಸಿನಲ್ಲಿ ಮತ್ತೆ ಯಾವುದೋ ವಾಸನೆ ಹೊಡೆದಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಆ ವಾಸನೆಯ ಜಾಡು ಹಿಡಿದು ಅದಿತಿ ಹೊರಟರೆ, ಸೌಭಾಗ್ಯ ಆಟ ಅಲ್ಲಿಗೆ ನಿಲ್ಲುತ್ತದೆ.


Click it and Unblock the Notifications











