ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?
ಸೌಭಾಗ್ಯಳ ಮಾತನ್ನು ನಂಬುತ್ತಿದ್ದಂತಹ ಅದಿತಿ ಎಲ್ಲವನ್ನು ಹಂಚಿಕೊಳ್ಳುತ್ತಿದ್ದಳು. ಬರೀ ಮಾತು ಯಾಕೆ ಆಕೆಯನ್ನು ನಂಬಿ ಇಡೀ ಆಸ್ತಿಯನ್ನೇ ಬರೆದುಕೊಡಲು ಮುಂದಾಗಿದ್ದಳು. ಅದಕ್ಕಾಗಿ ದಿಗಂತ್‌ಗೆ ಸೈನ್ ಪ್ರಾಕ್ಟೀಸ್‌ಗೆ ಕೂಡ ತಿಳಿಸಲಾಗಿತ್ತು. ಆದರೆ ದಿಗಂತ್ ಅಂದು ಪೇಪರ್ ಹರಿದು ಹಾಕದೆ ಹೋಗಿದ್ದರೆ, ಇಷ್ಟೊತ್ತಿಗೆ ಆಸ್ತಿಯೆಲ್ಲಾ ಸೌಭಾಗ್ಯ ಪಾಲಾಗುತ್ತಿತ್ತು. ಮನೆಯವರೆಲ್ಲ ಬೀದಿಗೆ ಬರುತ್ತಿದ್ದರು.
ಅದಿತಿಗೆ ದಿಗಂತ್ ಔಷಧಿಯ ಚೀಟಿಗಳು ಸಿಕ್ಕಿದ್ದೆ ಸತ್ಯ ತಿಳಿಯಲು ದಾರಿ ಮಾಡಿಕೊಟ್ಟಂತೆ ಆಗಿದೆ. ಆ ಔಷಧಿಗಳನ್ನೆಲ್ಲಾ ತೆಗೆದುಕೊಂಡು ಆಸ್ಪತ್ರೆಗೆ ಹೋಗಿದ್ದಾಳೆ. ಮನೆಯಲ್ಲಿ ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದ ಅದಿತಿ, ಈ ಬಾರಿ ಅದರೊಳಗೆ ಅಗಿರುವ ಸತ್ಯ ತಿಳಿಯಲು ಸುಳ್ಳು ಹೇಳಿ ಹೋಗಿದ್ದಾಳೆ. ಸೌಭಾಗ್ಯ ಕೇಳಿದಾಗಲೂ ಮಾಮೂಲಿ ಚೆಕಪ್ ಅಷ್ಟೇ ಎಂದಿದ್ದಾಳೆ.

ಟೆನ್ಶನ್‌ನಲ್ಲಿ ಒದ್ದಾಡಿದ ಸೌಭಾಗ್ಯ
ದಿಗಂತ್‌ಗೆ ಅದಾಗಲೇ ಮೆಡಿಕಲ್ ಚೆಕಪ್ ಆಗಿತ್ತು. ಡಾಕ್ಟರ್ ಮನೆಗೆ ಬಂದು ದಿಗಂತ್‌ನನ್ನು ಚೆಕಪ್ ಮಾಡುತ್ತಿದ್ದರು. ಆದರೆ ಅದಿತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಸೌಭಾಗ್ಯಗೆ ಅನುಮಾನ ಹುಟ್ಟು ಹಾಕಿತ್ತು. ಅದಿತಿ ವಾಪಾಸ್ ಬರುವ ತನಕ ಟೆನ್ಶನ್‌ನಲ್ಲಿಯೇ ಕಾಲ ಕಲೆದಿದ್ದಳು. ತನ್ನ ಗಂಡನ ಬಳಿ ಹೇಳಿಕೊಂಡು, ಅದಿತಿಗೆ ಅನುಮಾನ ಬಂದಿರಬೇಕು ಎಂದುಕೊಂಡಿದ್ದಳು. ಆದರೆ ಸೌಭಾಗ್ಯ ಗಂಡ, ಆಕೆಗೆ ಅನುಮಾನ ಬಂದರು ನಂಬಿಕೆಯ ಮುಂದೆ ಅದು ನಿಲ್ಲುವುದಿಲ್ಲ ಎಂದು ಸಮಾಧಾನ ಮಾಡಿದ್ದ.

ಡಾಕ್ಟರ್ ಹೇಳಿದ ಮಾತು ಕೇಳಿ ಅದಿತಿ ಶಾಕ್
ಅದಿತಿಗೆ ಅನುಮಾನ ಮೂಡಿ ದಿಗಂತ್‌ನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಳು. ಚೆಕಪ್ ಮಾಡಿದ ಶ್ರವಣ್, ಎಲ್ಲವೂ ನಾರ್ಮಲ್ ಆಗಿದೆ ಅಂತಾನೆ ಹೇಳಿದರು. ಆದರೆ ನಂತರ ಔಷಧಿಯ ಚೀಟಿ ತೋರಿಸದ ಮೇಲೆಯೇ ಅದಿತಿಗೆ ಆತಂಕ ಶುರುವಾಗಿದ್ದು. ಅದರಲ್ಲಿ ಬ್ಯಾನ್ ಆಗಿರುವ ಔಷಧಿಯನ್ನು ಬರೆದಿತ್ತು. ಈ ಔಷಧಿ ಇಲ್ಲಿಂದ ಬರೆದಿರುವುದಕ್ಕೆ ಸಾಧ್ಯವಿಲ್ಲ ಎಂದು ರಕ್ತ ಪರೀಕ್ಷೆಯನ್ನು ಮಾಡಿಸಲಾಗಿದೆ.

ಅದಿತಿ ಮಾತಿಗೆ ಸೌಭಾಗ್ಯ ನಿರಾಳ
ಸೌಭಾಗ್ಯ ಎಲ್ಲರನ್ನು ತುಂಬಾ ನಂಬಿಸಿದ್ದಾಳೆ. ಹೀಗಾಗಿ ಅದಿತಿ ಕೂಡ ಸೌಭಾಗ್ಯ ಬಳಿ ಯಾವುದೇ ಸುಳ್ಳನ್ನು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ಡಾಕ್ಟರ್ ಶ್ರವಂತ್ ಹೇಳಿದ ಮಾತು ಅದಿತಿಯ ತಲೆ ಕೆಡಿಸಿದೆ. ಬೇಕು ಅಂತಾನೇ ಯಾರೋ ಈ ಮಾತ್ರೆ ಕೊಡುತ್ತಿದ್ದಾರೆ ಎಂಬ ಸತ್ಯ ಗೊತ್ತಾಗಿದೆ. ಅದಕ್ಕಾಗಿ ಮನೆಯವರ ಬಳಿ ಏನು ಆಗಿಲ್ಲದವಳಂತೆ ನಾಟಕವಾಡಿದ್ದಾಳೆ. ಅವರು ಆಕ್ಟಿವ್ ಆಗಿರಲಿಲ್ಲ. ಅದಕ್ಕೆ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದು ಅಷ್ಟೆ. ವಾತಾವರಣ ಬದಲಾವಣೆ ಆಗಿದ್ದಕ್ಕೆ ಈ ರೀತಿ ಆಗಿದೆ ಅಷ್ಟೆ ಅಂದಿದ್ದಾರೆ ಎಂದ ಕೂಡಲೇ ಸೌಭಾಗ್ಯಗೆ ನೆಮ್ಮದಿ ಕಾಣಿಸಿದೆ. ಏನು ಗೊತ್ತಾಗಿಲ್ಲ ಎಂದು ಸುಮ್ಮನೆ ಆಗಿದ್ದಾಳೆ.

ಸಿಸಿಟಿವಿಯಲ್ಲಿ ಸೌಭಾಗ್ಯ ಬಣ್ಣ ಬಯಲು
ಅದಿತಿಗೆ ಅನುಮಾನ ಬಂದ ಮೇಲೆ ಅಡುಗೆ ಮನೆಯ ಸಿಸಿಟಿವಿ ಚೆಕ್ ಮಾಡಿದ್ದಾಳೆ. ಅದರಲ್ಲಿ ಸೌಭಾಗ್ಯ ಮತ್ತು ಆಕೆಯ ಗಂಡ ಹಾಲಿಗೆ ಏನನ್ನೋ ಬೆರೆಸುತ್ತಿದ್ದದ್ದು ಕಂಡು ಬಂದಿದೆ. ಬಳಿಕ ದಿಗಂತ್ ಕೊಟ್ಟ ಹಾಲಿನ ಗ್ಲಾಸಿನಲ್ಲೂ ಬೇರೆ ರೀತಿಯ ವಾಸನೆ ಬಂದಿರುವುದನ್ನು ಗಮನಿಸಿದ್ದಾಳೆ. ಇದೆಲ್ಲವೂ ಸೌಭಾಗ್ಯ ಮಾಡುತ್ತಿರುವ ಪ್ಲ್ಯಾನ್ ಎಂಬುದು ಅರ್ಥವಾಗಿದೆ. ಈಗ ಎಲ್ಲರ ಮುಂದೆ ಸತ್ಯ ಹೇಳುತ್ತಾಳಾ ಅಥವಾ ಸೌಭಾಗ್ಯಳ ರೀತಿಯೇ ಪ್ಲ್ಯಾನ್ ಮಾಡುತ್ತಾಳಾ ಎಂಬುದನ್ನು ನೋಡಬೇಕಿದೆ.


Click it and Unblock the Notifications











