ಸೌಭಾಗ್ಯರಂತೆ ಆಗ್ಬಿಟ್ರಾ ದಿಗಂತ್ ಅಮ್ಮ: ಮಗನ ಕೊಲೆಗೆ ಸಾಥ್ ನೀಡಿದ್ರಾ?

By ಎಸ್ ಸುಮಂತ್

ದಿಗಂತ್ ಮನೆಯಲ್ಲಿ ಆಸ್ತಿಗಾಗಿ ಹೊಂಚು ಹಾಕುತ್ತಿರುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇದೇ ಆಸ್ತಿಯೇ ದಿಗಂತ್ ತನ್ನೆಲ್ಲಾ ನೆನಪುಗಳನ್ನು ಕಳೆದುಕೊಳ್ಳುವಂತೆ ಮಾಡಿದೆ. ಅವನ ಪ್ರಾಣವನ್ನು ಲೆಕ್ಕಿಸದೇ ಆಸ್ತಿಗಾಗಿ ಮನೆಯಲ್ಲಿರುವ ಮೃಗೀಯ ಮನಸ್ಥಿತಿಯವರು ಯತ್ನಿಸುತ್ತಿದ್ದಾರೆ. ಆದರೆ ದಿಗಂತ್ ಬಾಳಿಗೆ ಬೆಳಕಾಗಿ ಬಂದಿರುವುದು ಅದಿತಿ. ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ, ದಿಗಂತ್ ನನ್ನು ಕಾಪಾಡಿಯೇ ಕಾಪಾಡುವ ಪಣ ತೊಟ್ಟಿದ್ದಾಳೆ.

ಸೌಭಾಗ್ಯ ಮನೆಯವರೆಲ್ಲರ ಮುಂದೆ ತನಗೇನು ಬೇಡ, ನಾನಿರುವುದೇ ಮನೆಯವರ ಒಳಿತಿಗಾಗಿ, ನಿಮ್ಮೆಲ್ಲರ ಆರೋಗ್ಯ ಭಾಗ್ಯವೇ ನನಗೆ ಬಹಳ ಮುಖ್ಯವಾದದ್ದು ಎಂಬ ನಾಟಕವಾಡುತ್ತಿದ್ದಾಳೆ. ಈ ನಾಟಕವನ್ನೇ ಎಲ್ಲರೂ ನಂಬಿಕೊಂಡು ಕೂತಿದ್ದಾರೆ. ಆದರೆ ಸೌಭಾಗ್ಯ ಫ್ಲ್ಯಾನ್ ಬೇರೆಯದ್ದೇ ಆಗಿದೆ. ಅದು ಈಗಾಗಲೇ ಮೈತ್ರಿ ಮೂಲಕ ಕಾರ್ಯ ರೂಪಕ್ಕೆ ಬರುತ್ತಿದೆ.

ಆಸ್ತಿಗಾಗಿ ಒಂದಾದ ಕೆಡುಕರು

ಆಸ್ತಿಗಾಗಿ ಒಂದಾದ ಕೆಡುಕರು

ಸಮಾನ ಮನಸ್ಕರಲ್ಲಿ ಈ ಆಸ್ತಿಗಾಗಿ ಸ್ಕೆಚ್ ಹಾಕುತ್ತಿರುವವರು ಬರುತ್ತಾರೆ. ಅದಕ್ಕೆ ಉದಾಹರಣೆ ಮೈತ್ರಿ ಹಾಗೂ ಸೌಭಾಗ್ಯ. ಮೈತ್ರಿ ಆಸ್ತಿ ಒಡೆಯುವುದಕ್ಕೆ ಅದ್ಯಾವಾಗ ನಕಲಿ ಆಫೀಸರ್‌ನ ಕರೆಸಿದಳೋ, ಅಲ್ಲಿ ಸೌಭಾಗ್ಯಳ ಕೈಗೊಂಬೆಯಾಗಿ ಬಿಟ್ಟಳು. ಇವಳು ಮಾಡುತ್ತಿರುವುದು ಆಸ್ತಿಗಾಗಿಯೇ ಎಂದು ತಿಳಿದ ಸೌಭಾಗ್ಯ, ಅವಳ ದೋಸ್ತಿ ಮಾಡಿದಳು. ಆದರೆ ಅಷ್ಟೇ ಭಯವನ್ನು ಇಟ್ಟಿದ್ದಾಳೆ. ಈಗ ಇಬ್ಬರು ಸೇರಿಕೊಂಡು ಆಸ್ತಿಗಾಗಿ ಕೆಡುಕಿನ ಯುದ್ಧ ನಡೆಸುತ್ತಿದ್ದಾರೆ.

ಯಲ್ಲಮ್ಮನ ಸನ್ನಿಧಿಗೆ ಹೋಗುವಾಗ ಹಾವು ಕಡಿತ

ಯಲ್ಲಮ್ಮನ ಸನ್ನಿಧಿಗೆ ಹೋಗುವಾಗ ಹಾವು ಕಡಿತ

ದಿಗಂತ್ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿರುವ ಅದಿತಿಯ ಪಯಣ ಈಗ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಕಡೆ ಸಾಗಿದೆ. ಕಾಡು ದಾರಿಯಲ್ಲಿ ನಡೆದೇ ಸಾಗಬೇಕು. ಈ ಮಧ್ಯೆ ದಿಗಂತ್ ಮಗುವಿನ ಮನಸ್ಸಿನಿಂದ ಅದಿತಿ ಫುಲ್ ಖುಷಿಯಾಗಿದ್ದಾಳೆ. ಅವನು ತೋರುವ ನಿಶ್ಕಲ್ಮಶ ಪ್ರೀತಿಗೆ ಮೌನಿಯಾಗಿದ್ದಾಳೆ. ಆದರೆ ಈ ಖುಷಿಯ ನಡುವೆ ಒಂದು ದೊಡ ಅನಾಹುತ ನಡೆದಿದೆ. ದಿಗಂತ್ ಕುಳಿತಿದ್ದಾಗ ಹಾವು ಕಚ್ಚಿ ಬಿಟ್ಟಿದೆ. ಅದನ್ನು ಕಂಡ ದಿಗಂತ್ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಮೈಯಲೆಲ್ಲಾ ವಿಷವೇರಿದೆ. ಅದಿತಿ ಕಂಗಲಾಗಿ ತಾಯಿಯನ್ನು ಬೇಡಿಕೊಂಡಾಗ, ತಾಯಿ ಬೇರೆ ರೂಪದಲ್ಲಿ ಪ್ರತ್ಯಕ್ಷವಾಗಿದ್ದಾಳೆ. ದಿಗಂತ್ ಮೈಯಲ್ಲಿದ್ದ ವಿಷ ತೆಗೆದು ಬದುಕಿಸಿದ್ದಾಳೆ.

ಸೌಭಾಗ್ಯಳಿಗೆ ಸಾಥ್ ನೀಡಿದಳಾ ತಾಯಿ?

ಸೌಭಾಗ್ಯಳಿಗೆ ಸಾಥ್ ನೀಡಿದಳಾ ತಾಯಿ?

ಸೌಭಾಗ್ಯಗೆ ದಿಗಂತ್ ಬದುಕಿರುವ ತನಕ ಯಾವುದೇ ರೀತಿಯ ಆಸ್ತಿ ಸಿಗುವುದಿಲ್ಲ ಎಂಬುದು ಅರ್ಥವಾಯಿತು. ಯಾಕೆಂದರೆ ಎಲ್ಲಾ ಆಸ್ತಿಯೂ ದಿಗಂತ್ ಹೆಸರಿನಲ್ಲಿದೆ. ಆದರೆ ಆಸ್ತಿಗಾಗಿ ಇಷ್ಟೆಲ್ಲ ನಾಟಕ ಮಾಡುತ್ತಿರುವ ಸೌಭಾಗ್ಯ ಕೊನೆ ಹಂತಕ್ಕೆ ತಲುಪಿದ್ದಾಳೆ. ದಿಗಂತ್‌ನನ್ನು ಮುಗಿಸಿ ಬಿಡಬೇಕೆಂಬ ಫ್ಲ್ಯಾನ್‌ನಲ್ಲಿದ್ದಾಳೆ. ಅದನ್ನೇ ಮೈತ್ರಿ ಬಳಿ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ದಿಗಂತ್ ಸವದತ್ತಿಯಲ್ಲಿ ಇರಬಾರದು ಎಂಬುದನ್ನು ಕೇಳಿಸಿಕೊಂಡ ದಿಗಂತ್ ತಾಯಿ ಹೌದು ಅತ್ತಿಗೆ ನೀವೂ ಹೇಳುವುದು ಸರಿ ಇದೆ. ನೀವೂ ಬಯಸಿದ್ದನ್ನೇ ನಾನು ಬಯಸುವುದು ಎಂದಿದ್ದಾಳೆ. ಇದನ್ನು ಕೇಳಿದ ಸೌಭಾಗ್ಯಗೆ ತುಂಬಾನೇ ಶಾಕ್ ಆಗಿದೆ. ತಾಯಿಯಾಗಿ ಇವಳು ಯಾಕೆ ಹಿಂಗೆ ಹೇಳುತ್ತಿದ್ದಾಳೆ ಅಂತ. ಆದರೆ ಬಳಿಕ ನಮಗೂ ದಿಗಂತ್ ಬಿಟ್ಟಿ ಇರುವುದಕ್ಕೆ ಸಾಧ್ಯವಿಲ್ಲ. ಆದಷ್ಟು ಬೇಗ ಬರಲಿ ಅವನು. ಅದಿತಿ ಬಳಿ ತಾನೇ ಮಾತನಾಡಿದ್ದು ಅಂತ ಮತ್ತೆ ಮೋಸ ಹೋಗುತ್ತಾಳೆ.

ಸವದತ್ತಿ ಕಡೆಗೆ ಹೊರಟ ಮೈತ್ರಿ

ಸವದತ್ತಿ ಕಡೆಗೆ ಹೊರಟ ಮೈತ್ರಿ

ಮೈತ್ರಿ ಸದ್ಯ ತನ್ನೆಲ್ಲಾ ವೀಕ್‌ನೆಸ್ ಅನ್ನು ಸೌಭಾಗ್ಯ ಬಳಿ ಬಿಟ್ಟುಕೊಟ್ಟಿದ್ದಾಳೆ. ಇದೇ ಕಾರಣಕ್ಕೆ ಈಗ ಸೌಭಾಗ್ಯ ಹೇಳಿದಂತೆ ಕುಣಿಯುತ್ತಿದ್ದಾಳೆ. ಆಸ್ತಿ, ಅಂತಸ್ತಿನ ಸ್ವಾರ್ಥ ಮೈತ್ರಿಗೂ ಜಾಸ್ತಿ ಇರುವ ಕಾರಣ ಅಕ್ಕ ಎಂಬುದನ್ನು ನೋಡದೆ ಅವಳ ಬಾಳನ್ನೇ ಹಾಳು ಮಾಡಲು ಹೊರಟಿದ್ದಾಳೆ. ಸವದತ್ತಿ ತಲುಪಿದ್ದು, ದಿಗಂತ್‌ನನ್ನು ಕೊಲ್ಲುವ ಪ್ರಯತ್ನಕ್ಕೆ ಕೈ ಹಾಕಿದ್ದಾಳೆ.

More from Filmibeat

English summary
Ardhangi Serial October 3rd Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X