For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ಮೈತ್ರಿ ಫ್ಲ್ಯಾನ್ ಫ್ಲಾಪ್.. ಅದಿತಿ ಜೊತೆಗಿದ್ದಾಳೆ ರೇಣುಕಾ ದೇವಿ!

  By ಎಸ್ ಸುಮಂತ್
  |

  ಆಸ್ತಿಗಾಗಿ ಮೈತ್ರಿ ಮತ್ತು ಸೌಭಾಗ್ಯ ಒಂದಾಗಿದ್ದಾರೆ. ಇದೇ ಸ್ವಾರ್ಥದಿಂದಾಗಿಯೇ ಇಂದು ದೇವರ ಸನ್ನಿಧಾನದಲ್ಲೂ ಅಕ್ಕ ಎಂಬುದನ್ನು ನೋಡದೆ ಕೊಲೆ ಮಾಡಲು ಹೊರಟಿದ್ದಾಳೆ. ಆದರೆ ತನ್ನ ಭಕ್ತೆಯನ್ನು ರೇಣುಕಾ ದೇವಿ ಅಷ್ಟು ಸುಲಭದಲ್ಲಿ ಬಿಡುವುದಿಲ್ಲ. ಹೀಗಾಗಿಯೆ ಎಷ್ಟೆ ಕೆಟ್ಟದ್ದನ್ನು ಮಾಡುವವರು ಅದಿತಿಯ ಸುತ್ತ ಇದ್ದರು ಅವರನ್ನೆಲ್ಲಾ ತಾಯಿ ರೇಣುಕಾ ದೇವಿ ತನ್ನ ಕಣ್ಣುಗಳ ಶಕ್ತಿಯಿಂದಾನೇ ಮಟ್ಟ ಹಾಕಿದ್ದಾಳೆ. ಮಾಡಿದ ಫ್ಲ್ಯಾನ್ ಎಲ್ಲಾ ಹಾಳಾಯ್ತಲ್ಲ ಅಂತ ಅತ್ತ ಮೈತ್ರಿ ದೊಡ್ಡಮ್ಮನ ಬಳಿ ಬೈಸಿಕೊಂಡಿದ್ದಾಳೆ.

  ಸೌಭಾಗ್ಯ ಆಸ್ತಿ ಹೊಡೆಯುವುದಕ್ಕೆ ಮೈತ್ರಿಯನ್ನು ಬಳಸಿಕೊಂಡಿದ್ದಾಳೆ. ಮೈತ್ರಿ ಇದ್ಯಾವುದನ್ನು ತಿಳಿಯದವಳಂತೆ ದೊಡ್ಡಮ್ಮನ ಬೆಂಬಲಕ್ಕೆ ನಿಂತಿದ್ದಾಳೆ. ಸ್ವಂತ ಅಕ್ಕ ಎಂಬುದನ್ನು ನೋಡದೆ ಅಕ್ಕನ ಪ್ರಾಣವನ್ನೇ ತೆಗೆಯಲು ಹೊರಟಿದ್ದಾಳೆ. ನಾಳೆ ಒಂದು ದಿನದ ವ್ರತ ಮಾಡಿ ಮುಗಿಸಿದರೆ ಮುಗೀತು. ಅದಿತಿಯ ಜೀವನಕ್ಕೊಂದು ಅರ್ಥ ಸಿಗುತ್ತದೆ. ಆದರೆ ದಿಗಂತ್ ಹೇಗೆ ರಿಯಾಕ್ಟ್ ಮಾಡುತ್ತಾನೆ ಎಂಬುದೇ ಆತಂಕ.

  ಅರ್ಧಾಂಗಿ: ಕಡೆಗೂ ಬಯಲಾಯ್ತು ಸೌಭಾಗ್ಯ ಫ್ಲ್ಯಾನ್.. ಆಸ್ತಿಗಾಗಿ ಪ್ರಾಣವನ್ನೇ ತೆಗೆಯುತ್ತಾಳಾ?ಅರ್ಧಾಂಗಿ: ಕಡೆಗೂ ಬಯಲಾಯ್ತು ಸೌಭಾಗ್ಯ ಫ್ಲ್ಯಾನ್.. ಆಸ್ತಿಗಾಗಿ ಪ್ರಾಣವನ್ನೇ ತೆಗೆಯುತ್ತಾಳಾ?

  ಅಕ್ಕ ಭಾವನನ್ನು ಕೊಲ್ಲಲು ಹೊರಟ ಮೈತ್ರಿ

  ಅಕ್ಕ ಭಾವನನ್ನು ಕೊಲ್ಲಲು ಹೊರಟ ಮೈತ್ರಿ

  ಅದಿತಿ, ದಿಗಂತ್‌ನನ್ನು ಕರೆದುಕೊಂಡು ಸವದತ್ತಿಗೆ ಬಂದಿದ್ದಾಳೆ. ಅವಳ ಭಕ್ತಿಗೆ, ಅವಳ ಮುಗ್ಧತೆಗೆ ಯಲ್ಲಮ್ಮ ದೇವಿ ಸ್ವತಃ ಬೆಂಬಲಕ್ಕೆ ನಿಂತಿದ್ದಾಳೆ. ಆದರೆ ಇದರ ನಡುವೆ ದುಷ್ಟ ಶಕ್ತಿಗಳು ದೂರ ಬಂದರೂ ಬಿಡದಂತೆ ಕಾಡುತ್ತಿದೆ. ಮೈತರಿ ಬೆಂಗಳೂರಿನಿಂದ ಸವದತ್ತಿಗೆ ಹುಡುಕಿಕೊಂಡು ಬಂದಿದ್ದಾಳೆ. ಅದಾಗಲೇ ದಿಗಂತ್‌ನನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಳು. ರೌಡಿಗಳನ್ನು ಬಿಟ್ಟು ಹೊಡೆಸಿದ್ದಳು. ಇನ್ನೇನು ಚಾಕು ಚುಚ್ಚಬೇಕು ಅಷ್ಟರಲ್ಲಿ ರೇಣುಕಾ ದೇವಿ ಬಂದು ಕಾಪಾಡಿದಳು.

  ತಾಯಿ ಸನ್ನಿಧಾನದಲ್ಲಿ ವಿಷ ಬೆರೆಸಿದ ಮೈತ್ರಿ

  ತಾಯಿ ಸನ್ನಿಧಾನದಲ್ಲಿ ವಿಷ ಬೆರೆಸಿದ ಮೈತ್ರಿ

  ಹೇಗಾದರೂ ಮಾಡಿ ಅದಿತಿ ಮತ್ತು ದಿಗಂತ್ ಇಬ್ಬರನ್ನು ಕೊಲೆ ಮಾಡಬೇಕೆಂಬುದು ಮೈತ್ರಿ ಹಾಗೂ ಸೌಭಾಗ್ಯ ಫ್ಲ್ಯಾನ್. ಇದಕ್ಕಾಗಿ ದಿಗಂತ್ ಮೇಲೆ ಅಟ್ಯಾಕ್ ಮಾಡಿ ಫೇಲ್ ಆದ ಮೈತ್ರಿ ಈಗ ಅದಿತಿ ತಿನ್ನುವ ಪ್ರಸಾದಕ್ಕೂ ವಿಷ ಬೆರೆಸಿದ್ದಳು. ಇನ್ನೇನು ಅದಿತಿ ತಿನ್ನಬೇಕು ಎನ್ನುವಷ್ಟರಲ್ಲಿ ತಾಯಿ ರೇಣುಕಾ ಬಂದಳು. ಮೊದಲು ನನಗೆ ಪ್ರಸಾದ ಕೊಡು ಎಂದಾಗ ಅದರಲ್ಲಿ ವಿಷ ಬೆರೆತಿದ್ದದ್ದು ತಿಳಿಯಿತು. ಅದನ್ನು ತನ್ನ ಕಣ್ಣುಗಳ ಶಕ್ತಿಯಿಂದಾನೇ ತೆಗೆದು ತಾಯಿಯೂ ಪ್ರಸಾದ ಸೇವಿಸಿದಳು, ಅದಿತಿಯೂ ತಿಂದಳು. ಆದರೆ ಮೈತ್ರಿ ಮಾತ್ರ ಇನ್ನು ಸಾಯಲಿಲ್ಲವಲ್ಲ ಅಂತ ಕೋಪ ಮಾಡಿಕೊಂಡು ಹೋದಳು.

  ಮೈತ್ರಿ ಮಾಡಿದ ಪ್ಲ್ಯಾನ್ ವರ್ಕೌಟ್

  ಮೈತ್ರಿ ಮಾಡಿದ ಪ್ಲ್ಯಾನ್ ವರ್ಕೌಟ್

  ನಾಳೆ ಅದಿತಿ ಮಾಡುತ್ತಿರುವ ವಿಶೇಷ ಪೂಜೆ ಕೊನೆಯಾಗುತ್ತದೆ. ಪೂಜೆ ಮುಗಿದ ಬಳಿಕ ಇಷ್ಟಾರ್ಥ ಲಭಿಸುತ್ತದೆ. ಆದರೆ ಅದಕ್ಕೂ ಮುನ್ನ ಕೊಂಡ ಹಾಯುವ ಮುತ್ತೈದೆಯರಿಗೆ ಒಂಬತ್ತು ಬಾಗಿನ ಕೊಡಬೇಕು. ಅದರಂತೆ ಎಲ್ಲಾ ಬಾಗಿನವನ್ನು ಸಿದ್ಧ ಮಾಡಿಕೊಳ್ಳುತ್ತಿದ್ದಳು ಅದಿತಿ. ಆದರೆ ಅಷ್ಟರಲ್ಲಿ ಮುತ್ತೈದೆಯರ ಬಳಿ ಬಂದ ಮೈತ್ರಿ ಆ ಹೆಂಗಸಿನ ಗಂಡನಿಗೆ ಕಾಳಿ ದೋಷ ಇದೆ. ಅದನ್ನು ತೆಗೆದುಕೊಂಡರೆ ನಮಗೂ ದೋಷ ಬರುತ್ತದೆ ಎಂದು ಯಾರು ಬಾರದಂತೆ ಮಾಡಿಬಿಟ್ಟಳು. ಮೈತ್ರಿ ಮಾತು ಕೇಳಿ ಎಲ್ಲರು ಹೊರ ನಡೆದರು.

  ಭಕ್ತೆಗೆ ಒಲಿದ ತಾಯಿ ರೇಣುಕಾ

  ಭಕ್ತೆಗೆ ಒಲಿದ ತಾಯಿ ರೇಣುಕಾ

  ಮೈತ್ರಿ ಮಾಡಿದ ಎಲ್ಲಾ ಕರ್ಮಗಳನ್ನು ರೇಣುಕಾ ದೇವಿ ನೋಡಿದ್ದಾಳೆ. ತನ್ನ ಭಕ್ತೆಯ ಶ್ರದ್ದೆಯನ್ನು ಕಂಡಿದ್ದಾಳೆ. ಇಂತ ಸಮಯದಲ್ಲಿ ಬಿಟ್ಟುಕೊಡುವುದಕ್ಕೆ ಹೇಗೆ ಸಾಧ್ಯ. ಒಂಭತ್ತು ಅವತಾರವೆತ್ತಿ ತಾಯಿಯೇ ಬಂದಿದ್ದಾಳೆ. ಕಣ್ಣೀರು ಒರೆಸಿಕೊಂಡು ಎಲ್ಲರಿಗೂ ಬಾಗಿನ ನೀಡಿದ್ದಾಳೆ. ತಾಯಿ ತೃಪ್ತಳಾಗಿದ್ದಾಳೆ. ತಾಯಿ ಸನ್ನಿಧಾನದಿಂದ ಹೋಗುವುದರೊಳಗಾಗಿ ಮೈತ್ರಿ ಬುದ್ದಿ ಕಲಿತೇ ಹೋಗುತ್ತಾಳೆ.

  English summary
  Ardhangi Serial October 8th Episode Written Update. Here is the details.
  Sunday, October 9, 2022, 14:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X