CEO ಆಗ್ಬೇಕು ಅನ್ನೋ ಆಸೆಗೆ ಅಕ್ಕನ ಜೀವನವನ್ನೇ ಹಾಳು ಮಾಡಿದ್ಲಾ ಮೈತ್ರಿ?

By ಎಸ್ ಸುಮಂತ್

ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಆದರೆ ಆಸೆ ಅತಿಯಾದಾಗ ಸಂಬಂಧಗಳು ಕೂಡ ದೂರವಾಗಿ ಬಿಡುತ್ತವೆ. ಸಂಬಂಧಗಳಲ್ಲಿಯೇ ದ್ವೇಷ ಹುಟ್ಟಿಕೊಳ್ಳುತ್ತವೆ. ಸ್ವಂತ ಅಕ್ಕ ತಂಗಿಯಾದರೂ ಅಧಿಕಾರದ ಆಸೆಗೆ ಶತ್ರುಗಳಾಗಿ ಬಿಡುತ್ತಾರೆ. ಈಗ ಮೈತ್ರಿ ಮತ್ತು ಅಧಿತಿ ನಡುವೆ ನಡೆಯುತ್ತಿರುವುದು ಅದೇ. ಈ ಇಬ್ಬರು ಅಕ್ಕ ತಂಗಿಯಂದಿರೇ. ಆದರೆ ಮೈತ್ರಿ ತನಗೆ ಅಧಿಕಾರ ಬೇಕು ಎಂಬ ಕಾರಣಕ್ಕೆ ಆಗುತ್ತಿರುವ ಒಳ್ಳೆ ಕೆಲಸಕ್ಕೆ ಕಲ್ಲಾಕುತ್ತಿದ್ದಾಳೆ.

ದಿಗಂತ್ ಒಬ್ಬ ಸಕ್ಸಸ್ ಫುಲ್ ಬಿಸಿನೆಸ್ ಮ್ಯಾನ್. ಯಾವುದೋ ಕಾರಣಕ್ಕೆ ಆತ ನಾರ್ಮಲ್ ಆಗಿ ಇಲ್ಲ. ತನ್ನ ಸ್ವಾರ್ಥಕ್ಕೆ ಮೈತ್ರಿ, ತನ್ನ ಸ್ವಂತ ಅಕ್ಕ ಅಧಿತಿಯನ್ನೇ ದಿಗಂತ್ ಮದುವೆಯಾಗುವಂತೆ ಮಾಡಿದಳು. ಆದರೆ ಅದು ದಿಗಂತ್ ನ ಅದೃಷ್ಟವೇ ಸರಿ. ಇಂದು ಅದಿತಿ ಇಲ್ಲದೆ ಹೋಗಿದ್ದರೆ ತಾನೂ ಸರಿಯಾಗುತ್ತೀನಿ ಎಂಬ ಯಾವ ನಂಬಿಕೆಯೂ ಮನೆಯವರಲ್ಲಿ ಹುಟ್ಟುತ್ತಿರಲಿಲ್ಲ, ಅವನಲ್ಲಿಯೂ ಯಾವುದೇ ರೀತಿಯ ಬದಲಾವಣೆಗಳು ಕಾಣಿಸುತ್ತಿರಲಿಲ್ಲ.

ಅದಿತಿಗೆ ಮನೆಯವರಿಂದ ಫುಲ್ ಮಾರ್ಕ್ಸ್

ಅದಿತಿಗೆ ಮನೆಯವರಿಂದ ಫುಲ್ ಮಾರ್ಕ್ಸ್

ಸಂದರ್ಭ ಏನೇ ಇದ್ದರು ಅದಿತಿ ಮದುವೆಯಾದ ಬಳಿಕ ದಿಗಂತ್ ನನ್ನು ಒಂದು ಮಗುವಿನಂತೆ ನೋಡಿಕೊಳ್ಳುತ್ತಿದ್ದಾಳೆ. ಸ್ನಾನ ಮಾಡಿಸುವುದು, ಊಟ ಮಾಡಿಸುವುದು, ಎಲ್ಲಾ ಸೇರಿ ಅಕ್ಷರಶಃ ಮಗುವಿನಂತೆಯೇ ಕಾಪಾಡುತ್ತಿದ್ದಾಳೆ. ಆ ಎಲ್ಲಾ ಪರಿಶ್ರಮದಿಂದ ಇಂದು ದಿಗಂತ್ ಗೆ ತನ್ನ ನೆನೆಪು ಬಂದು ಹೋಗಿದೆ. ಇದನ್ನು ಕೇಳಿದ ಮನೆಯವರು ಅದಿತಿಯನ್ನು ಹಾಡಿ ಹೊಗಳಿದ್ದಾರೆ. ಅದಿತಿಯ ಪರಿಶ್ರಮವೇ ಇದಕ್ಕೆಲ್ಲಾ ಕಾರಣ ಎಂದಿದ್ದಾರೆ.

ಹಳೆಯ ನೆನಪುಗಳು ಮರಳಿ ಬರುತ್ತಾ?

ಹಳೆಯ ನೆನಪುಗಳು ಮರಳಿ ಬರುತ್ತಾ?

ದಿಗಂತ್ ಇಲ್ಲದೆ ಒಂದು ದೊಡ್ಡ ಪ್ರಾಜೆಕ್ಟ್ ಕೈ ಮೀರಿ ಹೋಗುತ್ತೆ. ಆ ಪ್ರಾಜೆಕ್ಟ್ ಕೈ ಮೀರಿ ಹೋದರು ಪರವಾಗಿಲ್ಲ. ಆದರೆ ನಮ್ಮ ಅಣ್ಣ ಈ ಸ್ಥಿತಿಯಲ್ಲಿದ್ದಾನೆ ಎಂಬುದು ಹೊರಗಿನವರಿಗೆ ತಿಳಿಯುವುದು ಬೇಡ ಎಂದೇ ಮಧು ಬಯಕೆಯಾಗಿದೆ. ಇದರ ನಡುವೆ ಆಫೀಸಿನಲ್ಲಿ ಹೊಸ ಪ್ರಾಜೆಕ್ಟ್‌ನ ಪೂಜೆಗಾಗಿ ಇಡೀ ಫ್ಯಾಮಿಲಿ ಆಫೀಸ್ ಗೆ ಬಂದಿದೆ. ಈ ವೇಳೆ ದಿಗಂತ್‌ಗೆ ಒಂದಷ್ಟು ಹಳೆಯ ನೆನೆಪುಗಳು ಕಾಡಿದೆ. ತಾನು ಆಫೀಸಿನಲ್ಲಿ ಹೇಗೆ ಇರುತ್ತಾ ಇದ್ದೆ ಎಂಬುದು, ಎಲ್ಲಿ ಕುಳಿತು ಕೊಳ್ಳುತ್ತಾ ಇದ್ದೆ ಎಂಬುದು ಹೀಗೆ ಎಲ್ಲಾ ನೆನಪು ಹಾಗೆ ಬಂದು ಹಾಗೇ ಹೋಗಿದೆ.

ಅಕ್ಕನಿಗೆ ತಂಗಿಯೇ ವಿಲನ್

ಅಕ್ಕನಿಗೆ ತಂಗಿಯೇ ವಿಲನ್

ತನ್ನ ಜೀವನ ಸರಿಯಾಗಬೇಕು ಎಂಬ ಕಾರಣಕ್ಕೆ ಅಧಿತಿಯನ್ನು ಅಬ್ ನಾರ್ಮಲ್ ಆಗಿರುವ ದಿಗಂತ್‌ಗೆ ಮದುವೆ ಮಾಡಿಕೊಟ್ಟಳು. ಆದರೆ ಈಗ ಅಧಿತಿಯ ಜೀವನವೂ ಸರಿಯಾಗುತ್ತೆ ಎನ್ನವಾಗಲೇ ಮೈತ್ರಿ ಅಡ್ಡಿಯಾಗುತ್ತಿದ್ದಾಳೆ. ಸಿಎಒ ಚೇರ್ ಮೇಲೆ ಕುಳಿತಿದ್ದ ದಿಗಂತ್ ಸಂಪೂರ್ಣ ಮೊದಲಿನ ದಿಗಂತ್ ಆಗಿ ಬಿಟ್ಟ. ಫೈಲ್, ಪ್ರಾಜೆಕ್ಟ್ ಬಗ್ಗೆ ವಿಚಾರಿಸುತ್ತಾ ಇದ್ದ. ತನ್ನ ಹೆಂಡತಿ, ನಾಧಿನಿಯರನ್ನು ಗುರುತಿಸಲಿಲ್ಲ. ಇವರೆಲ್ಲಾ ಫೀಸ್ ಸ್ಟಾಫ್ಸ್ ಹಾ ಅಂತ ಕೇಳಿದ. ಆದರೆ ಮೈತ್ರಿ, ಮೀನನ್ನು ಕೆಳಗೆ ಬೀಳಿಸಿದ್ದಳು. ಅದನ್ನು ನೋಡಿ ಗಾಬರಿಯಾದ ದಿಗಂತ್ ಮತ್ತೆ ಅಬ್ ನಾರ್ಮಲ್ ಆಗಿಯೇ ವರ್ತಿಸಿದ.

ಮೈತ್ರಿಯ ಐಡಿಯಾ ಉಲ್ಟಾ ಆಗುತ್ತಾ?

ಮೈತ್ರಿಯ ಐಡಿಯಾ ಉಲ್ಟಾ ಆಗುತ್ತಾ?

ಎಲ್ಲರೂ ಮನೆಗೆ ಹೋದ ಮೇಲೆ ಮೈತ್ರಿ ತನ್ನ ಸಿಇಒ ಕುರ್ಚಿಯಲ್ಲಿ ಕುಳಿತು ಅಮ್ಮನಿಗೆ ಕರೆ ಮಾಡಿ, ಬಿಲ್ಡಪ್ ಕೊಟ್ಟು ಕೊಳ್ಳುತ್ತಿದ್ದಾಳೆ. ಇದೆ ಸಮಯದಲ್ಲಿ ಬಂದ ಸತ್ಯ, ದೇವರ ಆರಾಧಾಕರ ಹೆಸರು ಹೇಳಿದ್ದಾರೆ. ಓಕೆ ಓಕೆ ಎಂದು ಕಳುಹಿಸಿದಾಗ, ಇನ್ನೊಬ್ಬ ಎಂಪ್ಲಾಯ್ ಇದೆಲ್ಲ ನಂಬಬೇಡಿ ಮೇಡಂ ಎಲ್ಲಾ ಉಲ್ಟಾ ಹೊಡೆದು ಬಿಡುತ್ತೆ ಎಂದಿದ್ದಾರೆ. ಆಗ ಖುಷಿಯಾದ ಮೈತ್ರಿ, ಮತ್ತೆ ಆಫೀಸ್ ಬಾಯ್ ಸತ್ಯನನ್ನು ಕರೆದು, ಆರಾಧಕರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾಳೆ. ಅಂದರೆ ಅವಳ ಮನಸ್ಸಲ್ಲಿ ಆದರೆ ಕೆಟ್ಟದಾಗಲಿ ಎಂಬುದಿದೆ. ಆದರೆ ಇಲ್ಲಿ ಉಲ್ಟಾ ಕೂಡ ಆಗಬಹುದು. ದಿಗಂತ್ ಮತ್ತೆ ಮೊದಲಿನಂತೆಯೂ ಆಗಬಹುದು.

More from Filmibeat

English summary
Ardhangi Serial September 16th Episode Written Update. Here is the details about diganth health condition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X