For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ದಿಗಂತ್ ವಿಚಾರದಲ್ಲಿ ಸೌಭಾಗ್ಯ ಗೇಮ್ ಆಡಿದ್ದೇಕೆ? ಮೈತ್ರಿಗಿಂತ ಲಾಭ ಜಾಸ್ತಿನಾ?

  By ಎಸ್ ಸುಮಂತ್
  |

  ಹಣ, ಆಸ್ತಿ, ಅಧಿಕಾರದ ಮುಂದೆ ಸಂಬಂಧಗಳು ಲೆಕ್ಕಕ್ಕೆ ಇರುವುದಿಲ್ಲ ಎಂಬುದು ಎಷ್ಟೋ ಸಲ ಪ್ರೂವ್ ಆಗಿ ಆಗಿದೆ. ಇನ್ನು ದಿಗಂತ್ ಫ್ಯಾಮಿಲಿಯಲ್ಲೂ ಆ ಘಟನೆ ನಡೆಯುತ್ತಲೆ ಇದೆ. ಆದರೆ ಅಪ್ಪಯ್ಯನ ಮೇಲೆ ಅಪಾರ ಪ್ರೀತಿ ತೋರಿಸುವ ಸೌಭಾಗ್ಯಗೆ ಅದೇನೋ ಲಾಭ ಇದ್ದಂತೆ ಕಾಣುತ್ತಿದೆ. ಆ ಲಾಭ ಏನು ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಆಸ್ತಿ, ಅಧಿಕಾರಕ್ಕಾಗಿ ಕತ್ತಿ ಮಸೆಯುತ್ತಿರುವ ಮೈತ್ರಿಗೂ ಇದು ಗೊಂದಲದ ಗೂಡಾಗಿದೆ.

  ದಿಗಂತ್ ಈಗ ಆಸ್ಪತ್ರೆಯಲ್ಲಿದ್ದಾನೆ. ಆತನ ಕಂಡೀಷನ್ ಅಷ್ಟಾಗಿ ಸರಿ ಇಲ್ಲ. ಅತ್ತ ಅಧಿತಿ ತುಂಬಾ ಗಾಬರಿಯಾಗಿದ್ದಾಳೆ. ಹೇಗಾದರೂ ಮಾಡಿ ದಿಗಂತ್‌ನನ್ನು ಉಳಿಸಿಕೊಳ್ಳಲೇಬೇಕೆಂದು ತಾಯಿ ಮೊರೆ ಹೋಗಿದ್ದಾಳೆ. ಅಲ್ಲಿ ಸಿಕ್ಕಂತ ಅರ್ಚಕರು ಖ್ಯಾತಿ ಪಡೆದಿರುವ ಅಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವಂತೆ ಸೂಚಿಸಿದ್ದಾರೆ. ಮಾನಸಿಕ ಆರೋಗ್ಯ ಸರಿಯಾಗುವುದಕ್ಕೂ ಆಯುರ್ವೇದ ವೈದ್ಯರನ್ನು ಸಂಪರ್ಕಿಸಲು ತಿಳಿಸಿದ್ದಾರೆ.

  'ಸೋನು ಮನಸ್ಸು ನಿಶ್ಕಲ್ಮಶ, ಆಕೆಗೆ ರಾಕೇಶ್ ತರ ಲೈಫ್ ಪಾರ್ಟ್ನರ್ ಸಿಗ್ಬೇಕು''ಸೋನು ಮನಸ್ಸು ನಿಶ್ಕಲ್ಮಶ, ಆಕೆಗೆ ರಾಕೇಶ್ ತರ ಲೈಫ್ ಪಾರ್ಟ್ನರ್ ಸಿಗ್ಬೇಕು'

  ದಿಗಂತ್ ಆಸ್ಪತ್ರೆ ಸೇರುವಂತೆ ಮಾಡಿದ ಮೈತ್ರಿ

  ದಿಗಂತ್ ಆಸ್ಪತ್ರೆ ಸೇರುವಂತೆ ಮಾಡಿದ ಮೈತ್ರಿ

  ದಿಗಂತ್ ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್. ಆದರೆ ನಡೆದ ಅಪಘಾತದಿಂದ ತನ್ನೆಲ್ಲಾ ಮನಸ್ಸಿನ ತಾಳ್ಮೆ ಕಳೆದುಕೊಂಡು ಐದು ವರ್ಷದ ಮಗುವಿನಂತೆ ಆಗಿದ್ದಾರೆ. ಮಗುವನ್ನು ನೋಡಿಕೊಂಡಂತೆ ಅಧಿತಿ, ದಿಗಂತ್‌ನನ್ನು ನೋಡಿಕೊಳ್ಳುತ್ತಿದ್ದಾಳೆ. ಆದರೆ ಮೈತ್ರಿಗೆ ತಾನೇ ಎಲ್ಲಾ ಅಧಿಕಾರವನ್ನು ಅನುಭವಿಸಬೇಕು ಎಂಬ ಬಯಕೆ. ಇದರಿಂದಾಗಿನೇ ದಿಗಂತ್‌ನನ್ನು ಟಾರ್ಗೆಟ್ ಮಾಡಿ, ಆತ ಮತ್ತೆ ಮತ್ತೆ ಮನಸ್ಥೈರ್ಯ ಕಳೆದುಕೊಳ್ಳುವಂತೆ ಮಾಡುತ್ತಿದ್ದಾಳೆ. ಈಗ ಆತ ಆಸ್ಪತ್ರೆ ಸೇರುವುದಕ್ಕೂ ಆಕೆಯೇ ಕಾರಣವಾಗಿದ್ದಾಳೆ.

  ಮತ್ತೆ ಮನೆ ಬಳಿ ಬಂದ ಝೇಂಡೇ ಗ್ರಹಚಾರ ಬಿಡಿಸಿದ ಶಾರದಾ ದೇವಿ!ಮತ್ತೆ ಮನೆ ಬಳಿ ಬಂದ ಝೇಂಡೇ ಗ್ರಹಚಾರ ಬಿಡಿಸಿದ ಶಾರದಾ ದೇವಿ!

  ವಾಕಿಂಗ್ ಮಾಡುವಾಗ ಎಡವಟ್ಟು

  ವಾಕಿಂಗ್ ಮಾಡುವಾಗ ಎಡವಟ್ಟು

  ತಾನು ಕೂಡ ತಮ್ಮನ ರೀತಿ ಫಿಟ್ ಆಗಬೇಕೆಂದುಕೊಂಡು ದಿಗಂತ್, ವಾಕಿಂಗ್ ಮಾಡುತ್ತಾ ಇದ್ದ. ಅಧಿತಿ ಎಷ್ಟೇ ಹೇಳಿದರು ಕೇಳದ ದಿಗಂತ್, ಏಂಜಲ್ ನನಗೆ ಸುಸ್ತಾಗುತ್ತಿದೆ. ಮೊದಲು ಜ್ಯೂಸ್ ತಗೊಂಡು ಬಾ ಅಂತ ಹೇಳಿ ಕಳುಹಿಸಿದ. ಅಲ್ಲಿಗೆ ಬಂದ ಮೈತ್ರಿಯನ್ನು ನೀನು ಬ್ಯಾಡ್ ಗರ್ಲ್ ಎಂದ. ಮಾತಾಡಿದಂತೆ ನೀನು ನಡೆದುಕೊಳ್ಳುವುದಿಲ್ಲ. ನೀನು ಇಲ್ಲಿಂದ ಹೋಗು ಎಂದಾಗ, ಮೈತ್ರಿ ವಾಕಿಂಗ್ ಮಶಿನ್ ನ ಸ್ಪೀಡ್ ಜಾಸ್ತಿ ಮಾಡಿ ಅಲ್ಲಿಂದ ಹೋಗಿದ್ದಾಳೆ. ನಡೆದು ನಡೆದು ತಲೆ ತಿರುಗಿ ದಿಗಂತ್ ನೆಲಕ್ಕೆ ಬಿದ್ದಿದ್ದಾನೆ.

  ಮೈತ್ರಿ-ಸೌಭಾಗ್ಯ ಒಂದಾಗುತ್ತಾರಾ?

  ಮೈತ್ರಿ-ಸೌಭಾಗ್ಯ ಒಂದಾಗುತ್ತಾರಾ?

  ದಿಗಂತ್ ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಆಗಾಗ ಹಳೆಯ ನೆನಪುಗಳು ದಿಗಂತ್ ನನ್ನು ಕಾಡುತ್ತಿವೆ. ಇದರ ನಡುವೆ ಮನೆಯವರೆಲ್ಲಾ ಟೆನ್ಶನ್ ಆಗಿದ್ದಾರೆ. ಆದರೆ ಸೌಭಾಗ್ಯ ಸ್ವಲ್ಪ ಹೆಚ್ಚೆ ಕಾಳಜಿ ತೋರಿಸುತ್ತಿದ್ದರು. ಅಪ್ಪಾಜಿಗೆ ಏನ್ ಆಯ್ತೋ ಏನೋ ಅಂತ ಹೆಚ್ಚು ಟೆನ್ಶನ್ ಮಾಡಿಕೊಂಡವರಂತೆ ಕಂಡಿದ್ದನ್ನು ಗಮನಿಸಿರುವ ಮೈತ್ರಿ, ದಿಗಂತ್‌ನ ಅಪ್ಪ ಅಮ್ಮನೇ ಸುಮ್ಮನೆ ನಿಂತಿರುವಾಗ ಸೌಭಾಗ್ಯ ಯಾಕೆ ಈ ರೀತಿ ಆಡುತ್ತಿದ್ದಾರೆ. ದಿಗಂತ್‌ನಿಂದ ಏನಾದರೂ ಲಾಭ ಇದೆಯಾ ಅಂತ ಯೋಚಿಸುತ್ತಿದ್ದಾಳೆ.

  ದಿಗಂತ್‌ಗೆ ನೆನಪು ಬಂತಾ ಏಂಜೆಲ್ ಕಥೆ

  ದಿಗಂತ್‌ಗೆ ನೆನಪು ಬಂತಾ ಏಂಜೆಲ್ ಕಥೆ

  ಅದಿತಿಗೆ ದಿಗಂತ್ ಸ್ಥಿತಿ ಗೊತ್ತಿದ್ದರು ಮದುವೆಯಾಗಿದ್ದಾಳೆ. ಈಗ ಎಲ್ಲಿಯೂ ಬಿಡದಂತೆ ಸುಧಾರಿಸುತ್ತಿದ್ದಾಳೆ. ಅಷ್ಟೇ ಅಲ್ಲ ಈಗ ದಿಗಂತ್‌ಗೆ ಹಳೆಯ ನೆನಪುಗಳನ್ನು ತರಿಸುವುದಕ್ಕೂ ಪ್ರಯತ್ನ ಪಡುತ್ತಿದ್ದಾಳೆ. ಈಗ ತಾಯಿ ದೇವಸ್ಥಾನಕ್ಕೆ ಕರೆದುಕೊಂಡು ಹೋದರೆ ಎಲ್ಲಾ ರೀತಿಯ ಆರೋಗ್ಯ ಸುಧಾರಿಸುತ್ತದೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ. ಈಗ ಅಲ್ಲಿಗೆ ಕರೆದುಕೊಂಡು ಹೋಗಲು ಮನೆಯವರನ್ನೇ ಎದುರು ಹಾಕಿಕೊಂಡಿದ್ದಾಳೆ. ಈ ಮಧ್ಯೆ ದಿಗಂತ್‌ಗೆ ಮೊದಲಿನಂತೆ ಪ್ರಜ್ಞೆ ಬಂದರೆ ಏಂಜೆಲ್ ಎನ್ನುತ್ತಿರುವ ಅದಿತಿಯ ಯಾವ ನೆನೆಪು ಉಳಿದಿರುವುದಿಲ್ಲ.

  English summary
  Ardhangi Serial September 20th Episode Written Update. Here is the details about Diganth hospitalization.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X