For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ಮನೆಯವರ ವಿರೋಧದ ನಡುವೆ ದಿಗಂತ್ ಕರೆದುಕೊಂಡ ಹೋದ ಅದಿತಿ ವಾಪಾಸ್ ಬರುತ್ತಾಳಾ?

  By ಎಸ್ ಸುಮಂತ್
  |

  ದಿಗಂತ್ ಹುಷಾರಾಗಬೇಕು ಎಂಬುದು ಹಲವು ಮನಸ್ಸುಗಳ ಹಾರೈಕೆಯಾದರೆ, ಇನ್ನು ಕೆಲವು ಮನಸ್ಸುಗಳ ಹಾರೈಕೆ ಹಿಂಗೆ ಇದ್ದು ಬಿಡಲಿ ಎಂಬುದು. ನೆಗೆಟಿವ್ ಮತ್ತು ಪಾಸಿಟಿವ್ ಈ ಎರಡರ ನಡುವೆ ಅದಿತಿ ದಿಗಂತ್‌ನನ್ನು ಉಳಿಸಿಕೊಳ್ಳಲೇಬೇಕೆಂದು ಪಣ ತೊಟ್ಟಿದ್ದಾಳೆ. ಆದರೆ ಅಧಿತಿಯ ಮಾತು ಮನೆಯವರಿಗೆ ಕೊಂಚವೂ ಇಷ್ಟವಾಗುತ್ತಿಲ್ಲ. ಹೀಗೆ ಇದ್ದರು ಚಿಂತೆ ಇಲ್ಲ, ಕಣ್ಣ ಮುಂದೆ ಇದ್ದು ಬಿಡಲಿ ಎಂದೇ ಭಾವಿಸುತ್ತಿದ್ದಾರೆ. ಆದರೆ ಎಲ್ಲದನ್ನು ಮೀರಿ ಅದಿತಿ ಹೊರಟು ನಿಂತಿದ್ದಾಳೆ. ಮನೆಯವರ ವಿರೋಧಕ್ಕೆ ತಕ್ಕಂತೆ ಸಮಸ್ಯೆಯಲ್ಲಿ ಸಿಲುಕಿದ್ದಾಳೆ ಅದಿತಿ.

  ಎಷ್ಟೋ ಸಲ ವೈದ್ಯರಿಂದ ಆಗದ ಸಾಧನೆ ಪವಾಡಗಳಿಂದ ಸಂಭವಿಸಿದೆ. ದೇವರು ಎಂಬ ನಂಬಿಕೆಯಿಂದ ಅದೆಷ್ಟೋ ಸಮಸ್ಯೆಗಳು ಬಗೆಹರಿದಿದೆ. ಇದೀಗ ವೈದ್ಯಲೋಕದಿಂದ ಆಗದೆ ಇರುವುದನ್ನು ಅದಿತಿ ದೇವರ ಪ್ರಾಂಗಣದಲ್ಲಿ ಬಗೆಹರಿಸಿಕೊಳ್ಳಲು ಹೊರಟಿದ್ದಾಳೆ. ಅದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಆದಿಗೆ ಇನ್ನು ಅಮ್ಮನ ಮೇಲೆ ಅನುಮಾನ : ಮಗನ ಪ್ರೀತಿ ಕಂಡು ಖುಷಿಯಾಗುತ್ತಿದ್ದಾಳೆ ಅಖಿಲಾ..!ಆದಿಗೆ ಇನ್ನು ಅಮ್ಮನ ಮೇಲೆ ಅನುಮಾನ : ಮಗನ ಪ್ರೀತಿ ಕಂಡು ಖುಷಿಯಾಗುತ್ತಿದ್ದಾಳೆ ಅಖಿಲಾ..!

  ಅದಿತಿ ತೀರ್ಮಾನಕ್ಕೆ ಮನೆಯವರ ವಿರೋಧ

  ಅದಿತಿ ತೀರ್ಮಾನಕ್ಕೆ ಮನೆಯವರ ವಿರೋಧ

  ದಿಗಂತ್ ಬಿದ್ದು ಆಸ್ಪತ್ರೆ ಸೇರಿದ್ದಾನೆ. ಇದಕ್ಕೆ ಗಾಬರಿಯಾದ ಅದಿತಿ ಸೀದಾ ದೇವಸ್ಥಾನಕ್ಕೆ ಹೋಗಿದ್ದಾಳೆ. ದೇವರ ಬಳಿ ಮೊರೆ ಇಡುತ್ತಿದ್ದಾಗ ಅಲ್ಲಿದ್ದ ಅರ್ಚಕರು ತಾಯಿಯ ಸನ್ನಿಧಾನಕ್ಕೆ ಕರೆದುಕೊಂಡು ಹೋದರೆ ಎಲ್ಲವೂ ಸರಿಯಾಗುತ್ತೆ. ಪ್ರಾಣಾಪಾಯವಿದೆ ಎಂದು ಹೇಳಿದ್ದಾರೆ. ಹೇಗಾದರೂ ಮಾಡಿ ದಿಗಂತ್‌ನನ್ನು ಉಳಿಸಿಕೊಳ್ಳಲೇಬೇಕೆಂದು ಹೊರಟ ಅದಿತಿಗೆ ಮನೆಯವರ ವಿರೋಧ ಎದುರಾಗಿದೆ. ಯಾರೊಬ್ಬರು ಕೂಡ ಒಪ್ಪಿಗೆ ನೀಡಲಿಲ್ಲ. ದಿಗಂತ್‌ಗೆ ಟ್ರೀಟ್ಮೆಂಟ್ ಅಗತ್ಯವಿದೆ. ಹೀಗಾಗಿ ಕಳುಹಿಸುವುದಿಲ್ಲ ಎಂದೇ ಹೇಳಿದ್ದಾರೆ. ಆಗ ಅದಿತಿ ನನ್ನ ಗಂಡನನ್ನು ನಾನು ಕರೆದುಕೊಂಡು ಹೋಗೆ ಹೋಗ್ತೀನಿ ಅಂತ ಹಠ ಮಾಡಿದ್ದಾಳೆ.

  ಏಂಜಲ್ ಜೊತೆ ಹೊರಟು ನಿಂತ ದಿಗಂತ್

  ಏಂಜಲ್ ಜೊತೆ ಹೊರಟು ನಿಂತ ದಿಗಂತ್

  ವೈದ್ಯರು ಕೂಡ ಅದಿತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆದರೆ ಅದಿತಿಯ ಮನವಿಗೆ ಡಾಕ್ಟರ್ ಕೂಡ ಕರಗದೆ ಇರಲಿಲ್ಲ. ಆದರೆ ಇದರ ನಡುವೆ ಸೌಭಾಗ್ಯ ಮತ್ತೆ ದಿಗಂತ್ ಇದ್ದ ರೂಮಿಗೆ ಬಂದಿದ್ದಾಳೆ. ಅಲ್ಲಿ ದಿಗಂತ್ ಗೆ ನಾವೆಲ್ಲಾ ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರು, ಇಲ್ಲ ನಾನು ಏಂಜೆಲ್ ಎಲ್ಲಿಗೆ ಹೋಗುತ್ತಾಳೋ ಅಲ್ಲಿಗೆ ಹೋಗುತ್ತೀನಿ. ಏಂಜೆಲ್ ಇದ್ದ ಕಡೆಯಲ್ಲಿಯೇ ನಾನು ಇರುವುದಕ್ಕೆ ಸಾಧ್ಯ ಎಂದಿದ್ದಾನೆ. ಈ ಮಾತಿನ ಬಳಿಕ ಸೌಭಾಗ್ಯಾಗೆ ದಾರಿ ಕಾಣದೆ ಸುಮ್ಮನಾಗಿದ್ದಾಳೆ.

  ದಿಗಂತ್‌ಗೆ ಗೊಂಬೆ ಆಸೆ ತೋರಿಸಿದ ಅದಿತಿ

  ದಿಗಂತ್‌ಗೆ ಗೊಂಬೆ ಆಸೆ ತೋರಿಸಿದ ಅದಿತಿ

  ದಿಗಂತ್ ಅಕ್ಷರಶಃ ಒಂದು ಮಗುವಿನ ರೀತಿ ಆಡುತ್ತಿದ್ದಾನೆ. ಎಲ್ಲದನ್ನು ಮರೆತಿರುವ ದಿಗಂತ್ ನನ್ನು ಮಗುವಿನಂತೆಯೇ ನೋಡಿಕೊಳ್ಳಬೇಕು. ಅದಕ್ಕೆ ಸೌಭಾಗ್ಯ ಗೊಂಬೆ ಹಬ್ಬ ಹತ್ತಿರ ಬಂತು. ಗೊಂಬೆ ಕೂರಿಸುವುದನ್ನು ನೋಡಬಹುದು ಎಂದು ಆಸೆ ತೋರಿಸಿದ್ದಾಳೆ. ಅದಕ್ಕೆ ದಿಗಂತ್ ಮಗುವಿನಂತೆ ಹೌದು ಏಂಜೆಲ್ ನನಗೆ ಗೊಂಬೆ ಎಂದರೆ ತುಂಬಾ ಇಷ್ಟ ಎಂದಿದ್ದಾನೆ. ಅಲ್ಲಿಯೂ ಗೊಂಬೆ ಇದೆ. ತೋರಿಸುತ್ತೀನಿ ಅಂತ ಆಸೆ ತೋರಿಸಿ ಕರೆದೊಯ್ಯುತ್ತಿದ್ದಾಳೆ.

  ಕಾರಿನಿಂದಾನೇ ಅಪಾಯ ಕಾದಿದೆಯಾ..?

  ಕಾರಿನಿಂದಾನೇ ಅಪಾಯ ಕಾದಿದೆಯಾ..?

  ಫೈನಲಿ ಅದಿತಿ ತನ್ನ ಹಠವನ್ನು ಬಿಡಲಿಲ್ಲ. ದಿಗಂತ್ ನನ್ನು ತಾಯಿ ಸನ್ನಿದಿಗೆ ಕರೆದುಕೊಂಡು ಹೊರಟಿದ್ದಾಳೆ. ಎಲ್ಲರೂ ದೇವರ ಬಳಿ ಮಗ ಮತ್ತು ಸೊಸೆಗೆ ಏನು ಆಗದಿರಲಿ ಎಂದು ಬೇಡಿಕೊಂಡಿದ್ದಾರೆ. ಈ ಮಧ್ಯೆ ದಿಗಂತ್ ಅಪ್ಪ ಕಾರಿನಲ್ಲಿಯೇ ಹೋಗು ಎಂದು ಹೇಳಿದ್ದಾರೆ. ಸೌಭಾಗ್ಯ ಅದಕ್ಕೂ ವಿರೋಧಿಸಿದ್ದಾಳೆ. ಆಗ ಇದು ದಿಗಂತ್ ಆರೋಗ್ಯ ಪ್ರಶ್ನೆ ಎಂದು ಬಿಡಿಸಿ ಹೇಳಿದ್ದಾರೆ. ಹೊರಡುವಾಗ ರಾತ್ರಿಯಾಗಿತ್ತು. ಆದರೆ ಕಾರಿನ ಡ್ರೈವರ್ ಗೆ ಕೊಂಚ ನಿದ್ದೆಗೆ ಜಾರಿದ್ದಾನೆ. ಇದು ಅಪಾಯದ ಮುನ್ಸೂಚನೆಯಾಗಿದೆ.

  English summary
  Ardhangi Serial September 21th Episode Written Update. Here is the details.
  Wednesday, September 21, 2022, 23:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X