For Quick Alerts
  ALLOW NOTIFICATIONS  
  For Daily Alerts

  'ಅರ್ಧಾಂಗಿ'ಯಲ್ಲಿ ಶುರುವಾಗಿದೆ ದಸರಾ ಯಾತ್ರೆ: ದಿಗಂತ್‌ನನ್ನು ಸರಿ ಮಾಡುವುದೇ ಅದಿತಿ ಶಪಥ!

  By ಎಸ್ ಸುಮಂತ್
  |

  ಒಳ್ಳೆ ಕೆಲಸಕ್ಕೆ ನೂರೆಂಟು ವಿಘ್ನಗಳು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಳ್ಳೆಯದ್ದು ಆಗಬೇಕೆಂದರೆ ಅದು ಸುಲಭವಾಗಿಯೂ ಆಗುವುದಿಲ್ಲ. ಸಾಕಷ್ಟು ಅಡೆತಡೆಗಳನ್ನು ದಾಟಿದ ಮೇಲೆಯೇ ಆ ಒಳಿತಿಗೆ ಹಾದಿ ಸುಗಮವಾಗುವುದು. ಇದೀಗ ಅದಿತಿಯ ಬಾಳಲ್ಲೂ ಬೆಳಕು ಮೂಡುವುದಕ್ಕೆ ಆರಂಭಿಸಿದೆ. ತಾಯಿ ಸನ್ನಿಧಾನಕ್ಕೆ ಬರುವುದಕ್ಕೂ ಮುನ್ನ ಅದಿತಿ ಹಾಗೂ ದಿಗಂತ್ ಕೂಡ ಹಲವು ಕಲ್ಲು ಮುಳ್ಳಿನ ದಾರಿಯನ್ನು ದಾಟಿ ಬಂದಿದ್ದಾರೆ. ಆದರೆ ತಾಯಿ ತನ್ನ ಮಕ್ಕಳನ್ನು ಸಲೀಸಾಗಿ ಕರೆದುಕೊಂಡಿದ್ದಾಳೆ.

  ಅದಿತಿಗೆ ಈಗ ಬೇಕಿರುವುದು ತನ್ನ ತಾಳಿ ಭಾಗ್ಯ ಗಟ್ಟಿಯಾಗಿರಬೇಕು ಎಂಬುದು. ಅದಕ್ಕಾಗಿಯೇ ಎಲ್ಲಾ ಕಷ್ಟಗಳನ್ನು ಸಹಿಸಿಕೊಳ್ಳುತ್ತಿದ್ದಾಳೆ. ಜೊತೆಗೆ ದಿಗಂತ್ ಮೊದಲಿನಂತೆ ಮಾಡುವುದಕ್ಕೆ ಹೋರಾಟ ನಡೆಸುತ್ತಿದ್ದಾಳೆ. ಮನೆಯವರೆಲ್ಲರ ವಿರೋಧದ ನಡುವೆಯೂ ತಾಯಿ ಬನಶಂಕರಿ ಸನ್ನಿಧಾನಕ್ಕೆ ಕರೆದುಕೊಂಡು ಬಂದಿದ್ದಾಳೆ. ಬರುವಾಗಲೂ ಪ್ರಾಣಾಪಾಯ ಎದುರಾಗಿತ್ತು. ಆದರೆ ಹೇಗೊ ಅದರಿಂದ ಬಚಾವ್ ಆಗಿ ಬಂದಿದ್ದಾರೆ.

  ಮುದ್ದುಮಣಿಗಳು: ಅಹಲ್ಯಾ ಕುತಂತ್ರ ಭೂಮಿಗೆ ಗೊತ್ತಾಯ್ತಾ? ಅಕ್ಕ ತಂಗಿಯರು ಒಂದಾಗುವ ಸೂಚನೆ ಸಿಗ್ತಿದೆ!ಮುದ್ದುಮಣಿಗಳು: ಅಹಲ್ಯಾ ಕುತಂತ್ರ ಭೂಮಿಗೆ ಗೊತ್ತಾಯ್ತಾ? ಅಕ್ಕ ತಂಗಿಯರು ಒಂದಾಗುವ ಸೂಚನೆ ಸಿಗ್ತಿದೆ!

  ಬನಶಂಕರಿ ತಾಯಿ ಮಡಿಲಿಗೆ ದಿಗಂತ್

  ಬನಶಂಕರಿ ತಾಯಿ ಮಡಿಲಿಗೆ ದಿಗಂತ್

  ಕೆಲವೊಮ್ಮೆ ಕೆಲವೊಂದು ಸರಿಯಾಗಬೇಕು ಎಂದರೆ ಅದು ಪವಾಡವೇ ನಡೆಯಬೇಕು. ಆ ಪವಾಡ ಈಗ ದಿಗಂತ್ ಬದುಕಲ್ಲಿ ನಡೆದರೆ ಮಾತ್ರ ಎಲ್ಲವೂ ಮೊದಲಿನಂತೆ ಆಗುತ್ತದೆ. ಆ ಪವಾಡ ವೈದ್ಯ ಲೋಕದಿಂದ ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕಾಗಿಯೇ ಈಗ ಅದಿತಿ ದೇವರನ್ನು ನಂಬಿ ಬಂದಿದ್ದಾಳೆ. ದಿಗಂತ್ ನನ್ನು ಮೊದಲಿನಂತೆ ಮಾಡು ತಾಯಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ದಿಗಂತ್ ಗಾಗಿ ವಿಶೇಷ ಪೂಜೆ ಮಾಡಿಸುತ್ತಿದ್ದಾಳೆ.

  ಕ್ಷಣ ಮಾತ್ರದಲ್ಲಿ ಪಾರಾದ ದಂಪತಿ

  ಕ್ಷಣ ಮಾತ್ರದಲ್ಲಿ ಪಾರಾದ ದಂಪತಿ

  ದಿಗಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅದಿತಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಳು. ಆಸ್ಪತ್ರೆಯಿಂದ ನೇರವಾಗಿ ದೇವಸ್ಥಾನಕ್ಕೆ ಕರೆದೊಯ್ದಳು. ಮೊದಲೇ ದಿಗಂತ್ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕೆ ಮನೆಯವರೆಲ್ಲಾ ಅದಿತಿಯನ್ನು ಒತ್ತಾಯಿಸಿ ಕಾರಿನಲ್ಲಿಯೇ ಕಳುಹಿಸಿದರು. ಡ್ರೈವರ್‌ಗೆ ನಿದ್ದೆಯ ಸಮಯ. ನಿದ್ದೆ ಬರುತ್ತಿದ್ದರು ಧೈರ್ಯ ಮಾಡಿ ಓಡಿಸುವುದಕ್ಕೆ ಯತ್ನಿಸಿದ್ದಾನೆ. ಎದುರುಗಡೆಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆಯಿತು ಎನ್ನುವಾಗಲೇ ಬನಶಂಕರಿ ತಾಯಿಯ ಕೃಪೆಯಿಂದಾನೇ ಬಚಾವ್ ಆಗಿ, ತಾಯಿಯ ಸನ್ನಿಧಾನ ಸೇರಿದ್ದಾರೆ.

  ಅದಿತಿಯಿಂದ ವಿಶೇಷ ಪೂಜೆಗಳು

  ಅದಿತಿಯಿಂದ ವಿಶೇಷ ಪೂಜೆಗಳು

  ದಿಗಂತ್‌ನನ್ನು ಸರಿ ಮಾಡುವುದಕ್ಕೆ ಅದಿತಿ ಎಷ್ಟು ಕಷ್ಟ ಬೇಕಾದರೂ ಎದುರಿಸುತ್ತಾಳೆ ಎಂಬುದಕ್ಕೆ ಇದು ಕೂಡ ಒಂದು ಉದಾಹರಣೆ. ದಿಗಂತ್ ಮೊದಲಿನಂತೆ ಆಗಬೇಕು ಎಂಬ ಕಾರಣಕ್ಕೆ ಅದಿತಿ ಬನಶಂಕರಿ ತಾಯಿ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿದ್ದಾಳೆ. ನೆಲದ ಮೇಲೆ ಪ್ರಸಾದ ಸ್ವೀಕರಿಸಿದ್ದಾಳೆ. ಉರುಳು ಸೇವೆ ಮಾಡುವಾಗ ಹೊಟ್ಟೆಗೆ ಗಾಜಿನ ಪುಡಿಗಳು ಚುಚ್ಚಿದರು ಅದಕ್ಕೂ ಗಮನ ಕೊಡದೆ ತನ್ನ ಸೇವೆಯನ್ನು ಮುಂದುವರೆಸಿದ್ದಾಳೆ. ಅತ್ತ ಕಡೆ ಮಗ ಸೊಸೆಗೆ ಯಾವ ತೊಂದರೆಯೂ ಆಗದಿರಲಿ ಎಂದು ಮನೆಯಲ್ಲೂ ಪ್ರತಿದಿನ ಪೂಜೆ ಪುನಸ್ಕಾರ ಮುಂದುವರೆಸಿದ್ದಾರೆ.

  ದಿಗಂತ್‌ಗೆ ಬರುತ್ತಾ ಹಳೆಯ ನೆನಪು?

  ದಿಗಂತ್‌ಗೆ ಬರುತ್ತಾ ಹಳೆಯ ನೆನಪು?

  ದಿಗಂತ್ ಗೆ ಹಳೆಯ ನೆನಪು ಬರುವುದು ಕಷ್ಟವೇನು ಅನ್ನಿಸುತ್ತಿಲ್ಲ. ಯಾಕೆಂದರೆ ಈಗಾಗಲೇ ದಿಗಂತ್ ತಾನೂ ಓಡಾಡಿದ ಜಾಗಕ್ಕೆ ಕರೆದುಕೊಂಡು ಹೋದಾಗಲೂ ಹಳೆಯ ನೆನಪುಗಳು ಮರುಕಳುಹಿಸಿದೆ. ಆದರೆ ಯಾವುದೋ ಒಂದು ಸಣ್ಣ ಭಯ ಅವನ ನೆನಪನ್ನು ಅಳಿಸಿ ಹಾಕುತ್ತಿದೆ. ಇದೀಗ ತಾಯಿಯ ಸನ್ನಿಧಾನಕ್ಕೆ ಬಂದಿದ್ದು, ಆ ಭಯವೂ ಹೋಗುವ ಸೂಚನೆ ಸಿಕ್ಕಿದೆ. ಆದರೆ ದಿಗಂತ್‌ಗೆ ಹಳೆಯ ನೆನಪುಗಳು ಬಂದರೆ ಅದಿತಿಯನ್ನು ಒಪ್ಪಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.

  English summary
  Ardhangi Serial September 23rd Episode Written Update. Here is the details.
  Friday, September 23, 2022, 23:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X