For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!

  By ಎಸ್ ಸುಮಂತ್
  |

  ದಿಗಂತ್ ನ ಆರೋಗ್ಯಕ್ಕಾಗಿ ಅದಿತಿ ಬನಶಂಕರಿ ತಾಯಿ ಬಳಿ ಬಂದಿದ್ದಾಳೆ. ದಿಗಂತ್ ಗಾಗಿ ಪ್ರಾರ್ಥನೆ ಮಾಡಿದ್ದಾಳೆ. ಇಂದು ದಿಗಂತ್ ಗೆ ನೀಡುವ ಚಿಕಿತ್ಸೆ ಕೊನೆಯ ದಿನವಾಗಿದೆ. ಆಶ್ರಮದ ಗುರುಗಳಿಗೂ ನಂಬಿಕೆ ಬಂದಿದೆ. ದಿಗಂತ್ ಆರೋಗ್ಯ ಮೊದಲಿನಂತೆ ಆಗುತ್ತೆ. ಮನಸ್ಥಿತಿ ಹತೋಟಿಗೆ ಬರುತ್ತದೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ ಅಂದುಕೊಂಡಂತೆ ಏನೋ ಆಯಿತು. ಆದರೆ ನೆನಪಿನ ಶಕ್ತಿ ಬಂದಿದ್ದೆ ಯಡವಟ್ಟಾಗಿದೆ.

  ಆಗಾಗ ಧಾರಾವಾಹಿಗಳಲ್ಲಿ ಅತಿಥಿ ಪಾತ್ರಗಳು ಬಂದು ಹೋಗುವುದು ಸರ್ವೇ ಸಾಮಾನ್ಯ. ಧಾರಾವಾಹಿಯಲ್ಲಿ ಕಷ್ಟದ ಸಮಯದಲ್ಲಿ ಆತ್ಮೀಯರಾಗಿ ಬೇರೆ ಧಾರಾವಾಹಿ ಪಾತ್ರದಾರಿಗಳನ್ನು ಮಿಕ್ಸ್ ಮಾಡುತ್ತಾರೆ. ಇದೀಗ ಕಷ್ಟದಲ್ಲಿರುವ ಅದಿತಿಯನ್ನು ಕಾಪಾಡುವುದಕ್ಕೆ ದೇವರಾಗಿ ರಾಧಿಕಾ ನಾರಾಯಣ್ ಬಂದಿದ್ದಾರೆ. ತಾಯಿ ಬನಶಂಕರಿಯಾಗಿ ಬಂದಿರುವ ರಾಧಿಕಾ ಅವರಿಂದ ಅದಿತಿಯ ಕಷ್ಟ ಕಾರ್ಪಣ್ಯಗಳು ಕಳೆಯುವ ಸಾಧ್ಯತೆ ಇದೆ.

  Bigg Boss Kannada 9 : ಯಾರ ಕೈಗೆ ಯಾರ 'ಬ್ಯಾಂಡು'? ಯಾರ ಕೈಗಳು ಉಳಿದವು ಖಾಲಿ?Bigg Boss Kannada 9 : ಯಾರ ಕೈಗೆ ಯಾರ 'ಬ್ಯಾಂಡು'? ಯಾರ ಕೈಗಳು ಉಳಿದವು ಖಾಲಿ?

  ದಿಗಂತ್‌ಗೆ ಬಂತು ಹಳೆಯ ನೆನಪು

  ದಿಗಂತ್‌ಗೆ ಬಂತು ಹಳೆಯ ನೆನಪು

  ದಿಗಂತ್‌ಗೆ ಆಗಾಗ ಹಳೆಯ ನೆನಪುಗಳು ಬರುತ್ತವೆ ಹೋಗುತ್ತವೆ. ಸ್ವಲ್ಪ ಭಯಪಟ್ಟರು ಮತ್ತೆ ಹಳೆಯ ನೆನಪುಗಳು ಮಾಸಿ ಹೋಗುತ್ತವೆ. ಮಗುವಿನಂತೆ ಆಡುವುದಕ್ಕೆ ಆರಂಭಿಸುತ್ತಾನೆ. ಇದೆಲ್ಲವನ್ನು ಸರಿ ಮಾಡಬೇಕು ಅಂತಾನೆ ಈಗ ಅದಿತಿ ಬನಶಂಕರಿ ತಾಯಿ ಬಳಿ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾಳೆ. ಆದರೆ ದಿಗಂತ್‌ಗೆ ಹಳೆ ನೆನಪು ಬಂದಾಗೆಲ್ಲಾ ಹೆಚ್ಚಾಗಿ ಕಾಡುವುದು ಸೋನು ಎಂಬ ಹುಡುಗಿ. ಅದು ದಿಗಂತ್‌ನ ಹಳೆಯ ಪ್ರೀತಿ ಎಂಬುದು ಸ್ಪಷ್ಟವಾಗಿದೆ. ಈ ಬಾರಿ ಹಳೆಯ ನೆನಪು ಬಂದಾಗ ಸೋನುನನ್ನು ಹುಡುಕಿಕೊಂಡು ಕಾಡಿಗೆ ಹೊರಟೆ ಬಿಟ್ಟಿದ್ದಾನೆ.

  ಹೂವಿಯ ಹಿನ್ನೆಲೆ ಹುಡುಕಲು ಹೊರಟ ಮಾಲಿನಿ: ಸ್ವಂತ ತಂಗಿ ಎಂದು ತಿಳಿದರೆ ಅರಗಿಸಿಕೊಳ್ಳುತ್ತಾಳಾ..?ಹೂವಿಯ ಹಿನ್ನೆಲೆ ಹುಡುಕಲು ಹೊರಟ ಮಾಲಿನಿ: ಸ್ವಂತ ತಂಗಿ ಎಂದು ತಿಳಿದರೆ ಅರಗಿಸಿಕೊಳ್ಳುತ್ತಾಳಾ..?

  ಮಧ್ಯದಲ್ಲಿಯೇ ಮತ್ತೆ ಕೈಕೊಟ್ಟ ಬ್ರೈನ್

  ಮಧ್ಯದಲ್ಲಿಯೇ ಮತ್ತೆ ಕೈಕೊಟ್ಟ ಬ್ರೈನ್

  ಅರ್ಚಕರು ಅಂದುಕೊಂಡಂತೆ ದಿಗಂತ್‌ಗೆ ಹಳೆಯ ನೆನಪುಗಳು ಮರುಕಳುಹಿಸಿದೆ. ದಿಗಂತ್ ಮೊದಲಿನ ದಿಗಂತ್ ಆಗಿದ್ದಾನೆ. ಎಚ್ಚರವಾದಾಗ ತಾನೂ ಎಲ್ಲಿದ್ದೀನಿ ಎಂಬುದನ್ನು ಮರೆತು ಕಾಡಿನೊಳಗೆ ಹೋಗಿದ್ದಾನೆ. ಅಲ್ಲಿ ದಾರಿ ಕಾಣುತ್ತಿಲ್ಲ. ಯಾವುದೋ ಪ್ರಾಣಿಯ ಶಬ್ದಕ್ಕೆ ಹೆದರಿದ್ದಾನೆ. ಮತ್ತೆ ಹಳೆಯ ನೆನಪುಗಳು ಅಳಿಸಿ ಹೋಗಿದ್ದು, ಏಂಜಲ್‌ನನ್ನು ಹುಡುಕುತ್ತಿದ್ದಾನೆ. ಈ ಕಾರಣದಿಂದ ದಿಗಂತ್‌ಗೆ ಹಳೆಯ ನೆನಪುಗಳು ಬರುವುದು ಕಷ್ಟ ಸಾಧ್ಯವಾಗಿದೆ.

  ಮಹಾರಾಜನ ತಲೆ ಉರುಳಿತು

  ಮಹಾರಾಜನ ತಲೆ ಉರುಳಿತು

  ದಿಗಂತ್ ಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಪ್ರತಿವರ್ಷದಂತೆ ಈ ವರ್ಷವೂ ಗೊಂಬೆಗಳನ್ನು ಕೂರಿಸಿದ್ದಾರೆ. ಮಹಾರಾಜ ಮತ್ತು ಮಹಾರಾಣಿಯ ಸ್ಥಾನದಲ್ಲಿ ದಿಗಂತ್ ಮತ್ತು ಅದಿತಿಯ ಹೆಸರೇಳಿ ಗೊಂಬೆಗಳನ್ನು ಕೂರಿಸಲಾಗಿದೆ. ಆದರೆ ದಿಗಂತ್ ಹೆಸರಿನ ಗೊಂಬೆಯನ್ನು ಸೌಭಾಗ್ಯ ಕಿತ್ತು ಹಾಕಿದ್ದಾಳೆ. ಇದು ಪೂಜೆಯ ಸಮಯಕ್ಕೆ ಸರಿಯಾಗಿ ಬಿದ್ದು ಹೋಗಿದೆ. ಇದನ್ನು ಕಂಡು ಮನೆ ಮಂದಿಯೆಲ್ಲಾ ಗಾಬರಿಯಾಗಿದ್ದಾರೆ. ದಿಗಂತ್‌ಗೆ ಏನೋ ಸಮಸ್ಯೆ ಆಗಿದೆ ಎಂದೇ ಭಾವಿಸಿದ್ದಾರೆ.

  ಡಿಕೆಡಿ 6 ವಿಶೇಷ ಪ್ರತಿಭೆಗಳಿಗೆ 1 ಲಕ್ಷ ಬಹುಮಾನ ನೀಡಿದ ತೋತಾಪುರಿ ಟೀಮ್!ಡಿಕೆಡಿ 6 ವಿಶೇಷ ಪ್ರತಿಭೆಗಳಿಗೆ 1 ಲಕ್ಷ ಬಹುಮಾನ ನೀಡಿದ ತೋತಾಪುರಿ ಟೀಮ್!

  ಬನಶಂಕರಿಯಾಗಿ ಬಂದ ರಾಧಿಕಾ ನಾರಾಯಣ್

  ಬನಶಂಕರಿಯಾಗಿ ಬಂದ ರಾಧಿಕಾ ನಾರಾಯಣ್

  ಇನ್ನು ದಿಗಂತ್ ದಾರಿ ತಪ್ಪಿ ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾನೆ. ಆಶ್ರಮಕ್ಕೆ ಬಂದ ಅದಿತಿಗೆ ಈ ವಿಚಾರ ತಿಳಿದಿದೆ. ತಕ್ಷಣ ದಿಗಂತ್‌ನನ್ನು ಹುಡುಕಿಕೊಂಡು ಹೊರಟಿದ್ದಾಳೆ. ದೇವಸ್ಥಾನದಲ್ಲಿ ಹಾಡಿದ ಹಾಡಿಗೆ ಮನಸೋತು ದಿಗಂತ್ ಹೋಗಿರಬಹುದು ಎಂಬ ಅರ್ಚಕರ ಮಾತನ್ನು ನೆನಪಿಸಿಕೊಂಡ ಅದಿತಿ, ತಾಯಿಗೆ ಹಾಡನ್ನು ಹೇಳಿಕೊಂಡೆ ಕಾಡಿನಲ್ಲಿ ಹುಡುಕಾಟ ನಡೆಸಿದ್ದಾಳೆ. ಆದರೆ ಸುಸ್ತಾಗಿ ಅದಿತಿ ಕೂಡ ಕಾಡಿನಲ್ಲಿ ಬಿದ್ದಿದ್ದಾಳೆ. ಈಗ ತಾಯಿ ಬನಶಂಕರಿಯೇ ಕಾಪಾಡಬೇಕು. ಆ ರೂಪದಲ್ಲಿ ರಾಧಿಕಾ ನಾರಾಯಣ್ ಎಂಟ್ರಿಯಾಗಿದ್ದಾರೆ.

  English summary
  Ardhangi Serial September 29th Episode Written Update. Here is the details.
  Thursday, September 29, 2022, 23:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X