For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ಕಡೆಗೂ ಬಯಲಾಯ್ತು ಸೌಭಾಗ್ಯ ಫ್ಲ್ಯಾನ್.. ಆಸ್ತಿಗಾಗಿ ಪ್ರಾಣವನ್ನೇ ತೆಗೆಯುತ್ತಾಳಾ?

  By ಎಸ್ ಸುಮಂತ್
  |

  ಹಣ.. ಆಸ್ತಿ ಎಂದು ಬಂದರೆ ಸಂಬಂಧಗಳಿಗೆ ಯಾವ ಬೆಲೆಯೂ ಇರುವುದಿಲ್ಲ. ಅದು ಸಾಕಷ್ಟು ಸಲ ನಿಜ ಜೀವನದಲ್ಲೂ ಪ್ರೂವ್ ಆಗಿದೆ. ಇದೀಗ 'ಅರ್ಧಾಂಗಿ' ಧಾರಾವಾಹಿಯಲ್ಲಿಯೂ ಅದೇ ಕಾಣುತ್ತಿದೆ. ಕೆಟ್ಟ ಮನಸ್ಥಿತಿಯಲ್ಲಿರುವ ಮನುಷ್ಯರು ತಾವೂ ತುಂಬಾ ಒಳ್ಳೆಯವರು ಎಂದು ನಡೆದುಕೊಳ್ಳುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಸೌಭಾಗ್ಯ ಅದೇ ರೀತಿಯವಳು. ಮನೆಯವರಿಗೂ ಸ್ವಲ್ಪವೂ ಅನುಮಾನವೇ ಬರುವುದಿಲ್ಲ.

  ತಾನೂ ಈ ಮನೆಗಾಗಿಯೇ ಬದುಕಿದ್ದೀನಿ. ಈ ಮನೆಯವರ ಒಳಿತಿಗಾಗಿಯೇ ಜೀವನ ಸಾಗಿಸುತ್ತಿದ್ದೀನಿ. ನನಗೂ ನಿಮ್ಮನ್ನೆಲ್ಲಾ ಬಿಟ್ಟರೆ ಯಾರು ಎಂಬ ಲೆವೆಲ್‌ಗೆ ಮನೆಯವರ ಮೈಂಡ್ ವಾಶ್ ಮಾಡಿದ್ದಾಳೆ. ಆದರೆ ಮನಸ್ಸಿನ ಒಳಗೆ ಬರೀ ಕೊಳಕು ಆಲೋಚನೆಯನ್ನೇ ತುಂಬಿಕೊಂಡಿದ್ದಾಳೆ. ಇದೆಲ್ಲದರ ಹಿಂದೆ ಇರುವುದು ಬರೀ ಯಜಮಾನಿಕೆಯಷ್ಟೇ. ಅದು ಈಗ ಬಟಾಬಯಲಾಗಿದೆ.

  ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!ಅರ್ಧಾಂಗಿ: ಅದಿತಿಯನ್ನು ರಕ್ಷಿಸಲು ಬಂದ ರಾಧಿಕಾ ನಾರಾಯಣ್ : ದಿಗಂತ್ ಹುಷಾರಾಗುವುದು ಡೌಟ್..!

  ಬನಶಂಕರಿ ಸನ್ನಿದಿಯಲ್ಲಿ ದಿಗಂತ್-ಅದಿತಿ

  ಬನಶಂಕರಿ ಸನ್ನಿದಿಯಲ್ಲಿ ದಿಗಂತ್-ಅದಿತಿ

  ಆ ಕಡೆ ಮನೆಯ ಒಳಿತಿಗಾಗಿ ಅದಿತಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾಳೆ. ಮನೆಯ ಮಗನನ್ನು ಮೊದಲಿನಂತೆ ಮಾಡು ಅಂತ ನಾನಾ ರೀತಿಯ ಸೇವೆಗಳನ್ನು ಮಾಡುತ್ತಿದ್ದಾಳೆ. ಉಪವಾಸ ಇದ್ದಾಳೆ. ವ್ರತ ಮಾಡುತ್ತಿದ್ದಾಳೆ. ಆದರೂ ದಿಗಂತ್ ಅದೇಕೋ ಗುಣಮುಖನಾಗುತ್ತಿಲ್ಲ. ದೇವರ ಆಜ್ಞೆಯಿಲ್ಲದೆ ಒಂದು ಹುಲ್ಲು ಕಡ್ಡಿ ಕೂಡ ಅಲ್ಲಾಡುವುದಿಲ್ಲ ಎಂಬ ಮಾತಿದೆ. ಅದರಂತೆ ದಿಗಂತ್ ವಿಚಾರದಲ್ಲಿ ತಾಯಿ ಬನಶಂಕರಿಯ ಆಜ್ಞೆ ಏನಾಗಿದೆಯೋ ಏನೋ ಬಲ್ಲವರ್ಯಾರು..?

  ಮನೆಯಲ್ಲಿ ಆಸ್ತಿಗಾಗಿ ಫ್ಲ್ಯಾನ್

  ಮನೆಯಲ್ಲಿ ಆಸ್ತಿಗಾಗಿ ಫ್ಲ್ಯಾನ್

  ದಿಗಂತ್‌ನನ್ನು ಹೆತ್ತವರು ಕೂಡ ಅಷ್ಟು ಪ್ರೀತಿಯಿಂದ ಮಾತನಾಡುವುದಿಲ್ಲ. ಮಗನ ಬಗ್ಗೆ ಗುಣಮುಖರಾಗಲಿ ಎಂದು ಬಯಸುತ್ತಾರೆ. ಆದರೆ ಸೌಭಾಗ್ಯ ತಾನೇ ಹೆತ್ತವಳೇನೋ ಎಂಬಂತೆ ಮನೆಯವರ ಮುಂದೆ ನಾಟಕವಾಡುತ್ತಾಳೆ. ಇದು ಮೈತ್ರಿಗೆ ಈ ಮುಂಚೆಯೇ ಅನುಮಾನ ಬಂದಿತ್ತು. ಆದರೆ ಅದನ್ನು ಹುಡುಕುವ ಪ್ರಯತ್ನದಲ್ಲಿರುವಾಗಲೇ ದೊಡ್ಡ ಸತ್ಯ ಬಯಲಾಗಿತ್ತು. ಇದೀಗ ಅದರ ಫಲವೇ ಆಸ್ತಿಯ ಯಜಮಾನಿಕೆಗೆ ಮುಂದಾಗಿದ್ದಾಳೆ ಸೌಭಾಗ್ಯ.

  ಮೈತ್ರಿಯಿಂದ ಸೌಭಾಗ್ಯಗೆ ಲಾಭ

  ಮೈತ್ರಿಯಿಂದ ಸೌಭಾಗ್ಯಗೆ ಲಾಭ

  ಎಲ್ಲರೂ ದಸರಾ ಗೊಂಬೆಗಳನ್ನು ಕೂರಿಸಿ, ದೇವರ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಇತ್ತ ಕಡೆ ಸೌಭಾಗ್ಯ ಮಾತ್ರ ಹೊಂಚು ಹಾಕುತ್ತಿದ್ದಾಳೆ. ಮೈತ್ರಿಯನ್ನು ನಿಧಾನವಾಗಿ ದೂರ ಕರೆದುಕೊಂಡು ಹೋಗಿ ಮಾತನಾಡಿದ್ದಾಳೆ. ನಾನೀಗ ಆಸ್ತು ಬಗ್ಗೆ ಮಾತನಾಡುತ್ತೀನಿ. ಯಜಮಾನಿಕೆ ಯಾರು ವಹಿಸಿಕೊಳ್ಳಬೇಕು ಎಂಬ ವಿಚಾರ ಬರುತ್ತದೆ. ಆಗ ಏನಾದರೂ ಮಾಡಿ ಅಲ್ಲಿ ನಾನೇ ವಹಿಸಿಕೊಳ್ಳುವಂತೆ ಮಾಡುತ್ತೇನೆ. ನೀನು ನಾನು ಹೇಳಿದ ರೀತಿಯೇ ಕೇಳಬೇಕು ಎಂದಿದ್ದಾಳೆ.

  ಮೈತ್ರಿ ಆಸೆಗೆ ತಣ್ಣೀರು ಎರಚಿದ ಸೌಭಾಗ್ಯ

  ಮೈತ್ರಿ ಆಸೆಗೆ ತಣ್ಣೀರು ಎರಚಿದ ಸೌಭಾಗ್ಯ

  ಇತ್ತ ಸೌಭಾಗ್ಯ ಮಾಡಿರುವ ಸಖತ್ ಫ್ಲ್ಯಾನ್ ಗೆ ಮೈತ್ರಿ ಫುಲ್ ಖುಷಿ ಆಗಿ ಬಿಟ್ಟಿದ್ದಾಳೆ. ಮಾವನಿಗೆ ಆರೋಗ್ಯ ಸರಿ ಇಲ್ಲ. ಅತ್ತೆ ವಹಿಸಿಕೊಳ್ಳಲ್ಲ. ಹೂ ದೊಡ್ಡಮ್ಮ ಕಡೆಯಲ್ಲಿ ನಾನೊಬ್ಬಳೇ ಇರುವುದು. ಎಲ್ಲಾ ಆಸ್ತಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದಿದ್ದಾಳೆ. ಮೈತ್ರಿಯ ಆ ಆಸೆಗೆ ಫುಲ್ ಸ್ಟಾಪ್ ಹಾಕಿದ ಸೌಭಾಗ್ಯ, ಅಲ್ಲಿ ನಿನ್ನನ್ನು ಬಲವಂತವಾಗಿ ಒಪ್ಪಿಸಿದರೂ ನೀನು ಒಪ್ಪಬಾರದು. ಯಾಕೆಂದರೆ ಈಗಾಗಲೇ ನೀನು ಆಫೀಸ್‌ನ ಸಿಇಓ ಆಗಿದ್ದೀಯಾ. ನಿಂಗೆ ಸಾಕಲ್ಲವ..? ಅತಿಯಾಗಿ ಆಸೆ ಪಟ್ಟರೆ ಅದು ಕೂಡ ಸಿಗುವುದಿಲ್ಲ. ನೀನು ಆಫೀಸಿನಲ್ಲಿ ಸಿಇಓ ಆದರೆ ನಾನು ಆಫೀಸ್ ಯಜಮಾನಿ. ಇದೇ ನಡೆಯುತ್ತೆ. ನೀನು ಅದೇ ರೀತಿ ನಡೆದುಕೊಳ್ಳಬೇಕು ಎಂದು ಆಜ್ಞೆ ಮಾಡಿದ್ದಾಳೆ. ಇದಕ್ಕೆ ಶಾಕ್ ಆದ ಮೈತ್ರಿ ದೊಡ್ಡಮ್ಮನ ಭಯ ಗೊತ್ತಿರುವುದಕ್ಕೆ ತಲೆಯಾಡಿಸಿ ಮುಂದೆ ನಡೆದಿದ್ದಾಳೆ.

  English summary
  Ardhangi Serial September 30th Episode Written Update. Here is the details.
  Friday, September 30, 2022, 22:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X