For Quick Alerts
  ALLOW NOTIFICATIONS  
  For Daily Alerts

  ಅರ್ಧಾಂಗಿ: ಆಫೀಸಿಗೆ ಹೊರಟು ನಿಂತ ಅದಿತಿಗೆ ಕಂಡಿದ್ದು ಸೌಭಾಗ್ಯಳ ಕೋಟಿ ಕೋಟಿ ಆಸ್ತಿ!

  By ಎಸ್ ಸುಮಂತ್
  |

  ದಿಗಂತ್‌ಗೆ ಆಕ್ಸಿಡೆಂಟ್ ಆಗಿ ಮೆಮೋರಿ ಲಾಸ್ ಆಗಿದ್ದರೂ ಕೂಡ ಆಗಾಗ ಮನೆಗೆ ಸಹಾಯವಾಗುತ್ತಾ ಇರುತ್ತೆ. ಕಳೆದ ಬಾರಿ ಇನ್ನೇನು ಪವರ್ ಆಫ್ ಅಟಾರ್ನಿ ಕೊಡಬೇಕು ಅನ್ನುವಷ್ಟು ಹೊತ್ತಿಗಾಗಲೇ ಸೌಭಾಗ್ಯ ಹೆಸರಿಗೆ ಹೋಗಬೇಕಾಗಿತ್ತು.

  ಆದರೆ, ಅದೃಷ್ಟ ಚೆನ್ನಾಗಿತ್ತು ಎನಿಸುತ್ತದೆ. ದಿಗಂತ್ ಆ ಪೇಪರ್‌ಗಳನ್ನೆಲ್ಲಾ ಹರಿದು ಹಾಕಿದ್ದ. ಈಗ ದಿಗಂತ್‌ನ ಬುದ್ಧಿವಂತಿಕೆಯಿಂದ ಸೌಭಾಗ್ಯ ಮಾಡಿರುವ ಆಸ್ತಿಯೆಲ್ಲಾ ಅದಿತಿಗೆ ಸಿಕ್ಕಿದೆ. ಸೌಭಾಗ್ಯ ಈಗಲೂ ತಮ್ಮ ನಾಟಕವನ್ನು ಮುಂದುವರೆಸಿದ್ದಾರೆ.

  BBK9: ಬಿಗ್ ಬಾಸ್ ಮನೆ ತೊರೆದ ಸಾನ್ಯಾ.. ಗಳಗಳನೇ ಕಣ್ಣೀರಿಟ್ಟ ರೂಪೇಶ್!BBK9: ಬಿಗ್ ಬಾಸ್ ಮನೆ ತೊರೆದ ಸಾನ್ಯಾ.. ಗಳಗಳನೇ ಕಣ್ಣೀರಿಟ್ಟ ರೂಪೇಶ್!

  ತಮ್ಮನ ಮನೆ ಉದ್ಧಾರ ಮಾಡುವುದೇ ತನ್ನ ಗುರಿ. ನೀವಲ್ಲದೆ ನಮಗೆ ಮತ್ಯಾರೂ ಎಂಬ ನಾಟಕವನ್ನು ಮುಂದುವರೆಸಿದ್ದಾಳೆ. ಆದರೆ, ಈ ನಾಟಕವನ್ನು ಮನೆಯವರೆಲ್ಲ ನಂಬಿದ್ದರೂ, ಅದಿತಿ ಮಾತ್ರ ನಂಬಿಲ್ಲ. ಜೊತೆಗೆ ಮನೆಯವರ ಬಳಿ ತಾನು ನಂಬಿದ್ದೇನೆ ಎಂದೇ ನಾಟಕವಾಡುತ್ತಿದ್ದಾಳೆ. ಈಗ ಸೌಭಾಗ್ಯ ಕರಾಳ ಮುಖವನ್ನು ಬಯಲು ಮಾಡುವುದಕ್ಕೆ ಹೊರಟಿದ್ದಾಳೆ.

  ದಿಗಂತ್‌ನನ್ನು ಸರಿಪಡಿಸುವ ಹಾದಿಯಲ್ಲಿ ಅದಿತಿ

  ದಿಗಂತ್‌ನನ್ನು ಸರಿಪಡಿಸುವ ಹಾದಿಯಲ್ಲಿ ಅದಿತಿ

  ದಿಗಂತ್‌ನನ್ನು ಬೇಗ ಮೊದಲಿನಂತೆ ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾಳೆ ಅದಿತಿ. ಅದಕ್ಕೆ ಈಗ ಅದಿತಿಯ ಸ್ನೇಹಿತ ಡಾಕ್ಟರ್ ಕೂಡ ಮನೆಗೆ ಬಂದಿದ್ದಾರೆ. ಆಫೀಸಿಗೆ ಹೋದರೆ ವಾತಾವರಣ ಬದಲಾಗಿ ಬೇಗ ಹುಷಾರಾಗಬಹುದು ಎಂಬ ನಂಬಿಕೆಯಿಂದ ಅದಿತಿ, ದಿಗಂತ್‌ನನ್ನು ಕರೆದುಕೊಂಡು ಆಫೀಸಿಗೆ ಹೊರಟಿದ್ದಾಳೆ. ಆಫೀಸಿಗೆ ಹೋಗುವ ಖುಷಿಯಲ್ಲಿ ಎಲ್ಲರಿಗಿಂತ ಮೊದಲು ದಿಗಂತ್ ಸಿದ್ಧವಾಗಿದ್ದಾರೆ.

  ಅದಿತಿಯ ಪ್ಲ್ಯಾನ್ ಉಲ್ಟಾ ಮಾಡಿದ ಸೌಭಾಗ್ಯ

  ಅದಿತಿಯ ಪ್ಲ್ಯಾನ್ ಉಲ್ಟಾ ಮಾಡಿದ ಸೌಭಾಗ್ಯ

  ದಿಗಂತ್ ಆಫೀಸಿಗೆ ಹೋದ್ರೆ ಎಲ್ಲಾ ರೀತಿಯ ನೆನಪುಗಳು ಬಂದರು ಬರಬಹುದು ಎಂಬುದು ಸೌಭಾಗ್ಯಗೆ ಕಾಡಿದ ಅನುಮಾನವಾಗಿದೆ. ಹೀಗಾಗಿ ಹೇಗಾದರೂ ಮಾಡಿ ದಿಗಂತ್‌ನನ್ನು ಆಫೀಸಿಗೆ ಕಳುಹಿಸದ ಹಾಗೆ ಮಾಡಬೇಕು ಎಂದೇ ಪ್ಲ್ಯಾನ್ ಮಾಡಿಕೊಂಡು ಬಂದ ಸೌಭಾಗ್ಯ, "ದಿಗಂತ್ ಮನಸ್ಥಿತಿ ಸರಿ ಹೋಗಲಿ, ಮೊದಲಿನಂತೆ ಆಗಲಿ ಎಂದೇ ವೈದ್ಯರನ್ನು ಮನೆಗೆ ಕರೆಸಿದ್ದೀಯಾ. ಈಗ ಅವನಿಗೆ ಟ್ರೀಟ್ಮೆಂಟ್ ಕೊಡಿಸದೆ ಆಫೀಸಿಗೆ ಕರೆದುಕೊಂಡು ಹೋದರೆ ಹೇಗಮ್ಮ" ಎಂದಿದ್ದಾರೆ. ಆಗ ಅದಿತಿ ಕೂಡ ಆ ಮಾತಿಗೆ ವಿವರಣೆ ನೀಡಿ, ಒಪ್ಪಿಸುವುದಕ್ಕೆ ಆಗದೆ, ದಿಗಂತ್‌ನನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾಳೆ.

  ಮೊದಲ ಬಾರಿಗೆ ದಿಗಂತ್ ಕಣ್ಣಲ್ಲಿ ಕಣ್ಣೀರು

  ಮೊದಲ ಬಾರಿಗೆ ದಿಗಂತ್ ಕಣ್ಣಲ್ಲಿ ಕಣ್ಣೀರು

  ದಿಗಂತ್‌ಗೆ ಅದಿತಿ ಒಬ್ಬಳಿದ್ದರೆ ಸಾಕು. ಬೇರೆ ಯಾವುದು ಬೇಕಾಗುವುದಿಲ್ಲ. ಆಟ ಆಡುವುದಕ್ಕೂ, ಪ್ರೀತಿ ಮಾಡುವುದಕ್ಕೂ, ತಿನ್ನುವುದಕ್ಕೂ ಅದಿತಿ ಬೇಕು. ಅದಿತಿ ಮಾತನ್ನು ಬಿಟ್ಟರೆ ಬೇರೆ ಯಾರ ಮಾತನ್ನು ಅಷ್ಟು ಸುಲಭದಲ್ಲಿ ದಿಗಂತ್ ಕೇಳುವುದಿಲ್ಲ. ಹೀಗಿರುವಾಗ ಅದಿತಿ ತನ್ನನ್ನು ಬಿಟ್ಟು ಆಫೀಸಿಗೆ ಹೋದರೆ ದಿಗಂತ್‌ಗೆ ಹೇಗೆ ಅನ್ನಿಸಬೇಡ? ಒಂಟಿತನ ಕಾಡಲು ಶುರುವಾಗಿದೆ. ಎದೆಯಲ್ಲಿ ತಳಮಳ. ಕಣ್ಣಲ್ಲಿ ಬೇಡವೆಂದರೂ ನೀರು ತಾನಾಗಿಯೇ ಬರುತ್ತಿದೆ. ಯಾರು ಸಮಾಧಾನ ಮಾಡುವುದಕ್ಕೆ ಬಂದರೂ ತಡೆದುಕೊಳ್ಳುತ್ತಿಲ್ಲ. ಸುಮ್ಮನೆ ಅಳುತ್ತಲೇ ರೂಮು ಸೇರಿದ್ದಾನೆ.

  ಕೋಟಿ ಕೋಟಿ ಆಸ್ತಿಯ ಒಡತಿ ಸೌಭಾಗ್ಯ

  ಕೋಟಿ ಕೋಟಿ ಆಸ್ತಿಯ ಒಡತಿ ಸೌಭಾಗ್ಯ

  ತಮ್ಮನ ಮನೆಯನ್ನು ಮುಳುಗಿಸಲು ಸ್ಕೆಚ್ ಹಾಕುತ್ತಿರುವ ಸೌಭಾಗ್ಯಳ ಬಳಿ ಏನು ಇಲ್ಲ ಎನ್ನುವಂತೇನು ಇಲ್ಲ. ಅದಾಗಲೇ ಕೋಟಿ ಕೋಟಿ ಆಸ್ತಿ ಅವಳ ಹೆಸರಲ್ಲಿದೆ. ಅದು ಕೂಡ ಬೇನಾಮಿ ಹಣದಿಂದಾನೇ ಮಾಡಿರುವುದು. ದಿಗಂತ್ ಕಂಪನಿಯಿಂದಾನೇ ಕೋಟಿ ಕೋಟಿ ಹಣ ಲೆಕ್ಕಕ್ಕೆ ಸಿಗದ ರೀತಿಯಲ್ಲಿ ಸೌಭಾಗ್ಯ ಅಕೌಂಟಿಗೆ ಹೋಗಿ ಬಿದ್ದಿದೆ. ದಿಗಂತ್ ತಂದು ಕೊಟ್ಟ ಕೆಲವೊಂದು ಪೇಪರ್‌ನಿಂದ ಈ ಎಲ್ಲಾ ವಿಚಾರಗಳು ಬಯಲಿಗೆ ಬಂದಿದೆ. ಈಗ ಆಫೀಸಲ್ಲೂ ಆಸ್ತಿ ಪತ್ರಗಳು ಸಿಕ್ಕಿವೆ.

  BBK9: ಈ ವಾರ ಸಂಬರ್ಗಿಗೆ ಕಳಪೆ ಪಟ್ಟ ಫಿಕ್ಸ್..? ಕಿಚ್ಚನ ಮಾತಿಗೆ ನಗೆಗಡಲಲ್ಲಿ ತೇಲಿದ ಮನೆ ಮಂದಿ!BBK9: ಈ ವಾರ ಸಂಬರ್ಗಿಗೆ ಕಳಪೆ ಪಟ್ಟ ಫಿಕ್ಸ್..? ಕಿಚ್ಚನ ಮಾತಿಗೆ ನಗೆಗಡಲಲ್ಲಿ ತೇಲಿದ ಮನೆ ಮಂದಿ!

  English summary
  Ardhangi Serial Written Update on November 7th Episode. Here is the details about Soubhagya property matter.
  Monday, November 7, 2022, 18:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X