ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸ್ಫರ್ಧಿಗಳು ಯಾರು ? ಇಲ್ಲಿದೆ ನೋಡಿ ಸಂಭಾವ್ಯ ಸ್ಫರ್ಧಿಗಳ ಲಿಸ್ಟ್ !

ಪ್ರತಿ ವರ್ಷ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಶೋ ಅಪೂರ್ಣವೆನಿಸುತ್ತದೆ. ಹೀಗಾಗಿಯೇ ವರ್ಷಾನು ವರ್ಷ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುವ ಆಚೀಚೆ ಈ ಬಾರಿ ಮನೆಯಲ್ಲಿ ಯಾರನ್ನೆಲ್ಲ ಕಣ್ತುಂಬಿಕೊಳ್ಳುವ ಭಾಗ್ಯ ಸಿಗಬಹುದು ಎನ್ನುವ ಚಿಂತೆ ಕೆಲವರನ್ನು ಕಾಡಲು ಶುರುವಾಗುತ್ತೆ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರಿಗೆ ಅವಕಾಶ ಸಿಗುತ್ತಾ ಎಂಬ ಪ್ರಶ್ನೆ ಕಾಡುತ್ತೆ.

ವಾಹಿನಿಯವರು ಕೂಡ ಎಲ್ಲರನ್ನೂ ಇರಿಟೇಟ್ ಮಾಡುವ, ನರಿ ಬುದ್ಧಿ ಪ್ರದರ್ಶಿಸುವ, ಡ್ರಾಮಾ ಮಾಡುವ ವ್ಯಕ್ತಿತ್ವಗಳನ್ನೇ ಹುಡುಕಾಡಿ ಮನೆಯಲ್ಲಿ ಸೇರಿಸಲು ಕಸರತ್ತು ಮಾಡುತ್ತಾರೆ. ಈ ವರ್ಷ ಕೂಡ ಇದೇ ತರಹದ ಪ್ರಯತ್ನಗಳಾಗುತ್ತಿವೆ. ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲು ಇನ್ನು ಹಲವು ದಿನಗಳಿರುವ ಸಮಯದಲ್ಲಿಯೇ ಮನೆಗೆ ಹೋಗುವ ಕೆಲವರ ಹೆಸರುಗಳು ಆಗಲೇ ಚಾಲ್ತಿಯಲ್ಲಿವೆ.

are-mamta-kulkarni-and-dheeraj-dhoopar-going-to-be-on-bigg-boss-19check-out-the-rumoured-contestants

ಹೌದು, ಅಸಲಿಗೆ ಮುಂಬೈನಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈಗಿಂದನೇ ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ಎಂದಿನಂತೆ ಈ ಬಾರಿ ಕೂಡ ಸಲ್ಮಾನ್ ಖಾನ್ ಬಿಗ್ ಬಾಸ್ ಸಾರಥ್ಯ ವಹಿಸಿಕೊಂಡಿದ್ದಾರೆ. ಇನ್ನು ಈ ಬಾರಿ ಸಲ್ಮಾನ್ ಖಾನ್ ಬಿಗ್ ಬಾಸ್ ನಿರೂಪಣೆಯನ್ನು ಮಾಡಲು 300 ಕೋಟಿ ಸಂಭಾವನೆಯನ್ನು ಪಡೆಯಲಿದ್ದಾರೆ ಎಂದು ಸಿಯಾಸತ್ ಡಾಟ್ ಕಾಮ್ ಮತ್ತು ಬಾಲಿವುಡ್ ಲೈಫ್ ವೆಬ್ ಸೈಟ್‌ಗಳು ವರದಿ ಮಾಡಿವೆ.

ಇನ್ನು ಸಾಮಾನ್ಯವಾಗಿ ಬಿಗ್ ಬಾಸ್ ಇಲ್ಲಿಯವರೆಗೆ ಮೂರು ತಿಂಗಳು ನಡೆಯುತ್ತಿತ್ತು. 15 ರಿಂದ 20 ಸ್ಫರ್ಧಿಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಕಾರ್ಯಕ್ರಮ ಶುರುವಾಗುತ್ತಿತ್ತು. ಆದರೆ ಈಗ ಈ ಕಾರ್ಯಕ್ರಮದಲ್ಲಿ ಭಾರೀ ಬದಲಾವಣೆಯಾಗಲಿದೆ. 'ಪಿಂಕ್ ವಿಲ್ಲಾ' ವರದಿಯ ಪ್ರಕಾರ ಈ ಬಾರಿ ಮೂರಲ್ಲ ಬರೋಬ್ಬರಿ ಐದೂವರೆ ತಿಂಗಳು ಬಿಗ್ ಬಾಸ್ ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಸೌಭಾಗ್ಯ ಪ್ರೇಕ್ಷಕರಿಗೆ ಸಿಗಲಿದೆ.

ಇನ್ನು ಈ ಬಾರಿ ಸೆಪ್ಟೆಂಬರ್ - ಅಕ್ಟೋಬರ್‌ನಲ್ಲಿ ಅಲ್ಲ ಬದಲಿಗೆ ಜುಲೈ 30 2025ರಿಂದ ಕಾರ್ಯಕ್ರಮ ಶುರುವಾಗಲಿದ್ದು ಜನವರಿ 2026ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಪಿಂಕ್‌ ವಿಲ್ಲಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದಕ್ಕೆ ಪೂರಕವಾಗಿ ಸ್ಫರ್ಧಿಗಳ ಹುಡುಕಾಟ ಈಗಾಗಲೇ ಮಾಯಾನಗರಿ ಮುಂಬೈನಲ್ಲಿ ಶುರುವಾಗಿದ್ದು 7 ಸ್ಫರ್ಧಿಗಳ ಹೆಸರನ್ನು 'ಡೆಕ್ಕನ್ ಕ್ರೋನಿಕಲ್' ಪತ್ರಿಕೆ ಬಹಿರಂಗಗೊಳಿಸಿದೆ. ಆ ಪ್ರಕಾರ ಯೂಟ್ಯೂಬರ್ ಆಗಿ ಹೆಸರು ಮಾಡಿರುವ ಗೌರವ್ ತನೇಜಾ ಈ ಬಾರಿಯ ಬಿಗ್ ಬಾಸ್‌ ಮನೆಯ ಸ್ಫರ್ಧಿಯಾಗಿ ಆಯ್ಕೆಯಾಗಿದ್ದಾರೆ.

ಗೌರನ್ ತನೇಜಾ ಅವರನ್ನು ಹೊರತು ಪಡಿಸಿದರೆ ಶಿಲ್ಪಾ ಶೆಟ್ಟಿಯ ಪತಿ ಮತ್ತು ಅಶ್ಲೀಲ ಚಿತ್ರಗಳ ನಿರ್ಮಾಣದ ಆರೋಪವನ್ನೊತ್ತು ಜೈಲಿಗೆ ಹೋಗಿ ಬಂದ ರಾಜ್ ಕುಂದ್ರಾ ಕೂಡ ಈ ಬಾರಿಯ ಬಿಗ್ ಬಾಸ್‌ ಮನೆಯನ್ನು ಪ್ರವೇಶಿಸಲಿದ್ದಾರೆ ಎಂದು 'ಡೆಕ್ಕನ್ ಕ್ರೋನಿಕಲ್‌' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇನ್ನು ಬಣ್ಣದ ಲೋಕದಿಂದ ದೂರವಾಗಿ ಸಾಧ್ವಿಯಾದ ಒಂದ್ಕಾಲದ ಖ್ಯಾತ ಹೀರೋಯಿನ್ ಮಮತಾ ಕುಲಕರ್ಣಿ ಕೂಡ ಈ ಬಾರಿ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ. ಇವರನ್ನು ಹೊರತು ಪಡಿಸಿದರೆ ಕೃಷ್ಣಾ ಶ್ರಾಫ್, ಮಿಕ್ಕಿ ಮೇಕ್‌ ಓವರ್, ಫೈಸಲ್ ಶೇಖ್, ಧೀರಜ್ ಧೋಪರ್ ಕೂಡ ಬಿಗ್ ಬಾಸ್‌ ಮನೆಗೆ ಈ ಸಲ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.

are-mamta-kulkarni-and-dheeraj-dhoopar-going-to-be-on-bigg-boss-19check-out-the-rumoured-contestants

ಸದ್ಯ ಬಿಗ್ ಬಾಸ್ ಗೆ ಪ್ರವೇಶಿಸಲಿರುವ ಈ ಸಂಭಾವ್ಯ ಸ್ಫರ್ಧಿಗಳ ಹೆಸರನ್ನು ಕೇಳಿ ಹಿಂದಿ ಪ್ರೇಕ್ಷಕರಲ್ಲಿ ಈಗಿಂದನೇ ಕುತೂಹಲ ಮನೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ. ಈ 7 ಜನರ ಜೊತೆ ಮತ್ತೆ ಯಾರೆಲ್ಲ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಜನರ ಅಭಿಪ್ರಾಯಗಳನ್ನು ಕೂಡ ಸಂಗ್ರಹಿಸುತ್ತಿದ್ದಾರೆ.

More from Filmibeat

English summary
Are Mamta Kulkarni and Dheeraj Dhoopar entering Bigg Boss 19? Get the latest on rumored contestants and find out who else might be joining the controversial reality show.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X