ಪ್ರೇಮಲೋಕ ಶೀರ್ಷಿಕೆ ಗೀತೆಗೆ ಅರ್ಜುನ್ ಜನ್ಯ ಮ್ಯೂಸಿಕ್

ಅವನೊಬ್ಬ ಶ್ರೀಮಂತ ಮನೆತನದ ಗುಳಿ ಕೆನ್ನೆ ಚೆಲುವ, ಅವಳು ಮಧ್ಯಮ ವರ್ಗದ ಮುಗ್ಧ ಮನಸಿನ ಹುಡುಗಿ. ಇವರಿಬ್ಬರ ಸುತ್ತ ಇವರ ಅರಿವಿಗೆ ಬಾರದಂತಿರುವ ಒಂದು ಪ್ರೇಮವ್ಯೂಹ. ಹೌದು ಇದು ಸೂರ್ಯ ಮತ್ತು ಪ್ರೇರಣಾ ಪ್ರೇಮಕಥೆಯಾಗಿದ್ದರೂ ನಿಮ್ಮ ಬದುಕಿನ ಪ್ರತಿಬಿಂಬವೂ ಆಗಲಿದೆ. ಒಂದು ಮುದ್ದಾದ ಪ್ರೇಮಕಥೆ, ಒಂದು ದೊಡ್ಡ ತ್ಯಾಗದ ನಡುವೆ ನಡೆಯುವ ಬದುಕಿನ ಪಯಣ...ಇದಿಷ್ಟು ಸೇರಿದರೆ ಅಲ್ಲಿ ಸೃಷ್ಟಿಯಾಗಲಿದೆ ಪ್ರೇಮಲೋಕ.

ಸೂರ್ಯ ಮತ್ತು ಪ್ರೇರಣಾ ನಡುವಿನ ಪ್ರೇಮಲೋಕ ಈ ಹಿಂದೆ ಕನ್ನಡ ಕಿರುತೆರೆಯಲ್ಲಿ ಕಂಡು ಕೇಳಿರದ ಕಥೆ ಹೊಂದಿದೆ. ಸಾಮಾನ್ಯ ಪ್ರೇಮ ಕಾವ್ಯಗಳಲ್ಲಿರುವಂತೆ ಸಿಹಿ ಅಥವಾ ಕಹಿ ಅಂತ್ಯ ಕಾಣುವ ಕಥೆಯಲ್ಲ ಪ್ರೇಮಲೋಕ. ಪ್ರತಿ ಕ್ಷಣದಲ್ಲೂ, ಪ್ರತಿ ಸನ್ನಿವೇಶದಲ್ಲೂ, ಸವಾಲುಗಳ ಸರಪಳಿಯೇ ಎದುರಾದರೂ ಅದನ್ನು ಎದಿರಿಸಿ, ಪ್ರೇಮಕ್ಕೆ ಜಯ ಸಿಗುವ ವಿಭಿನ್ನ ಕಥೆ ಹೊಂದಿದೆ ಈ ಧಾರಾವಾಹಿ. ಪ್ರೇಮಲೋಕದ ಶೀರ್ಷಿಕೆ ಗೀತೆಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ವಿಜಯ್ ಪ್ರಕಾಶ್ ಅವರು ದನಿಯಾಗಿದ್ದಾರೆ, ಕವಿರಾಜ್ ಪದ ಪೋಣಿಸಿದ್ದಾರೆ.

ಕಿರುತೆರೆಯ ಚಾಕ್ಲೇಟ್ ಹೀರೋ ವಿಜಯ್ ಸೂರ್ಯ ಪ್ರೇಮಲೋಕದ ಮೂಲಕ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆಡಿಶನ್ ನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹುಡುಗಿಯರನ್ನು ಹಿಂದಿಕ್ಕಿ ವಿಜಯ್ ಸೂರ್ಯ ಜೋಡಿಯಾಗಿ ಪ್ರೇಮಲೋಕದ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ ಬೆಂಗಳೂರಿನ ಅಂಕಿತಾ ನವ್ಯ ಗೌಡ.

Arjun janya composed premaloka title song

ಉಳಿದಂತೆ ಹಿರಿಯ ನಟ ಬಾಲ್ ರಾಜ್, ವಾಣಿಶ್ರೀ, ನೇತ್ರಾ ಸಿಂಧ್ಯಾ, ಅಶೋಕ್ ಹೆಗೆಡೆ, ಸಿದ್ದು, ಶಾಲಿನಿ, ರವಿ ಭಟ್, ಮಾಲತಿ ಸರದೇಶಪಾಂಡೆ , ಮಾಸ್ಟರ್ ರಾಮಪ್ರಸಾದ್ , ಶಶಿರಾಜ್ , ಶೀಲಾ ಮತ್ತು ಪ್ರಜ್ಞಾ ಭಟ್ ಮುಖ್ಯಭೂಮಿಕೆಯಲ್ಲಿದ್ದಾರೆ. ಪರಿಣಿತ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಿಸಲಾಗಿರುವ 'ಪ್ರೇಮಲೋಕ'ಕ್ಕೆ, ಮೈಸೂರ್ ಮಂಜು ಮತ್ತು ಸಂಜೀವ್ ತಗಡೂರು ಅವರ ನಿರ್ದೇಶನವಿದೆ.

ಸ್ಟಾಚ್ಯೂ ಆಫ್ ಲವ್: ಕಿರುತೆರೆ ಇತಿಹಾಸದಲ್ಲೇ ಧಾರಾವಾಹಿಯ ಕಟೌಟ್!
ಕನ್ನಡ ಕಿರುತೆರೆ ಇತಿಹಾಸದಲ್ಲೇ ಹಿಂದೆಂದೂ ಮಾಡದಂತ ವಿಭಿನ್ನ ಪ್ರಚಾರವೈಖರಿಯನ್ನು ಸ್ಟಾರ್ ಸುವರ್ಣ ವಾಹಿನಿ 'ಪ್ರೇಮಲೋಕ' ಧಾರಾವಾಹಿಯ ಪ್ರಚಾರಕ್ಕೆ ಬಳಸಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಸ್ಟಾಚ್ಯೂ ಆಫ್ ಲವ್ ಅನಾವರಣಗೊಳಿಸಿದೆ. ದಾವಣಗೆರೆ, ಹುಬ್ಬಳ್ಳಿ ಮತ್ತು ಹಾಸನ ಜಿಲ್ಲೆಗಳಲ್ಲಿ ನಾಯಕ ಮತ್ತು ನಾಯಕಿಯ 35 ಅಡಿ ಎತ್ತರದ ಕಟೌಟ್ ಹಾಕಲಾಗಿದೆ. ಮಹಿಳೆಯರ ಜೊತೆಗೆ ಇಂದಿನ ಯುವ ಪೀಳಿಗೆಯನ್ನೂ ಆಕರ್ಷಿಸುತ್ತಿದೆ ಪ್ರೇಮಲೋಕ.

ಇದಕ್ಕೆ ಸಾಕ್ಷಿಯಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ದಾಖಲಾಗುತ್ತಿರುವ ಸವಿರಾರು ಲೈಕ್, ಕಾಮೆಂಟ್ಸ್ ಮತ್ತು ಶೇರ್ ಗಳು. ಪ್ರೀತಿಯ ಪಯಣಕ್ಕೆ ಸಜ್ಜಾಗಿರುವ ಕಿರುತೆರೆ ವೀಕ್ಷಕರನ್ನು ಜುಲೈ 22 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8ಗಂಟೆಗೆ 'ಪ್ರೇಮಲೋಕ'ಕ್ಕೆ ಸ್ವಾಗತಿಸುತ್ತಿದೆ ಸ್ಟಾರ್ ಸುವರ್ಣ ವಾಹಿನಿ.

More from Filmibeat

English summary
Agnisakshi fame actor Vijay surya's new serial 'Premaloka' telecasting in star suvarna. Arjun janya composed Premaloka title song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X