'ಶಾಂತಿ ನಿವಾಸ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ ನಟ ಅರ್ಜುನ್ ಯೋಗೇಶ್; ಆ ಪಾತ್ರ ಯಾವುದು?

By ಅನಿತಾ ಬನಾರಿ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶಾಂತಿ ನಿವಾಸ' ಧಾರಾವಾಹಿಯೂ ಒಂದು. ಇತ್ತೀಚೆಗಷ್ಟೇ ಶುರುವಾಗಿರುವ 'ಶಾಂತಿ ನಿವಾಸ' ಧಾರಾವಾಹಿಯು ವಿಭಿನ್ನ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿದೆ. 'ಶಾಂತಿ ನಿವಾಸ' ಧಾರಾವಾಹಿಯಲ್ಲಿ ನಾಯಕ ಸುಶಾಂತ್ ಪಾತ್ರದಲ್ಲಿ ಅಭಿನಯಿಸುವ ಮೂಲಕ ನಟ ಅರ್ಜುನ್ ಯೋಗೇಶ್ ಕಿರುತೆರೆಗೆ ಮರಳಿದ್ದಾರೆ.

'ಶಾಂತಿ ನಿವಾಸ'ದ ಕಿರಿಮಗ ಸುಶಾಂತ್ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಅಪ್ಪನ ಮಾತಿಗೆ ಕಟ್ಟು ಬಿದ್ದು ಒಲ್ಲದ ಮನಸ್ಸಿನಿಂದಲೇ ಶಾಂತಿಯನ್ನು ಮದುವೆಯಾಗಿರುತ್ತಾನೆ. ಮನೆಯವರೆಲ್ಲಾ ಹೆಂಡತಿಯನ್ನು ಬೈತಿದ್ರು ಆಕೆಯ ಪರ ನಿಲ್ಲದೇ ನಿಂದಿಸುವ ಸ್ವಭಾವ ಸುಶಾಂತ್‌ನದು. ಮಗ ರಾಘವನ ವಿದ್ಯಾಭ್ಯಾಸ ಮತ್ತು ಅವನ ಭವಿಷ್ಯದ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ಇಟ್ಟುಕೊಂಡಿರುವವನು. ಅಣ್ಣ ಅತ್ತಿಗೆಯ ಬಗ್ಗೆ ವಿಶೇಷ ಗೌರವ. ಶಾಂತಿಯಿಂದ ತನಗೇನೂ ಸಿಕ್ತಿಲ್ಲ ಎನ್ನುವ ಕೊರಗು ಈತನದು. ಅಣ್ಣ ಸಿದ್ಧಾರ್ಥ್‌ಗಿಂತ ಮೇಲು ಗೈ ಸಾಧಿಸಬೇಕೆಂಬುದು ಸುಶಾಂತ್ ಉದ್ದೇಶ-ಇದು ಸುಶಾಂತ್ ಪಾತ್ರದ ಸಂಕ್ಷಿಪ್ತ ಪರಿಚಯ.

Arjun Yogesh returned to television through Shanthi Nivasa serial

'ಅರಮನೆಗಿಳಿ' ಧಾರಾವಾಹಿಯಲ್ಲಿ ನಾಯಕ ಯೋಗೇಶ್ ಆಗಿ ಅಭಿನಯಿಸಿದ್ದ ಅರ್ಜುನ್ ಯೋಗಿ ತದ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. 'ಅರಮನೆಗಿಳಿ' ಧಾರಾವಾಹಿಯ ನಂತರ 'ಅನಾವರಣ' ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದರು ಅರ್ಜುನ್ ಯೋಗೇಶ್. 'ಅನಾವರಣ' ಸಿನಿಮಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್ ಇದೀಗ 'ಶಾಂತಿ ನಿವಾಸ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ.

'ಚಲಿಸುವ ಮೋಡಗಳು', 'ಅಮ್ಮ ನಿನಗಾಗಿ', ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದರು. ಆದರೆ, ಅರ್ಜುನ್ ಯೋಗೇಶ್ ಅವರು ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಮಾತ್ರ 'ಅಕ್ಕ' ಧಾರಾವಾಹಿಯ ಮೂಲಕ.

'ಅಕ್ಕ' ಧಾರಾವಾಹಿಯ ನಂತರ 'ಮದುವೆಯ ಮಮತೆಯ ಕರೆಯೋಲೆ' ಎಂಬ ಸಿನಿಮಾದಲ್ಲಿ ಅಭಿನಯಿಸಿದ ಅರ್ಜುನ್ ಅದರಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದರು. ನಂತರ 'ಏನೆಂದು ಹೆಸರಿಡಲಿ', 'ನನ್ನ ಪ್ರಕಾರ' ಹಾಗೂ 'ಲಾಂಗ್ ಡ್ರೈವ್' ಸಿನಿಮಾಗಳಲ್ಲಿ ಅಭಿನಯಿಸಿದ್ದರು ಅರ್ಜುನ್ ಯೋಗೇಶ್. ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಅರ್ಜುನ್ ಯೋಗೇಶ್ ಅವರು ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡವರು.

Arjun Yogesh returned to television through Shanthi Nivasa serial

ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಹಿರಿಯ ಕಲಾವಿದೆ ಕಲ್ಯಾಣಿ ಪ್ರದೀಪ್ ಅವರ ತಂಡ ಸೇರಿಕೊಂಡರು ಅರ್ಜುನ್. ನಂತರ ಬೆರಳೆಣಿಕೆಯಷ್ಟು ನಾಟಕಗಳಲ್ಲಿ ನಟಿಸಿರುವ ಇವರು ಒಂದಷ್ಟು ಮೈಮ್ ಶೋಗಳಲ್ಲಿಯೂ ಇವರು ಬಣ್ಣ ಹಚ್ಚಿದ್ದರು.

More from Filmibeat

English summary
Arjun Yogesh returned to television through Shanthi Nivasa serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X