'ಅಕ್ಕ' ಧಾರಾವಾಹಿಯಿಂದ ಫೇಮಸ್: ಕಿರುತೆರೆಯಿಂದ ಬೆಳ್ಳಿತೆರೆಗೆ ಅರ್ಜುನ್ ಯೋಗೇಶ್ 'ಲಾಂಗ್ ಡ್ರೈವ್'

By ಅನಿತಾ ಬನಾರಿ

ಕಿರುತೆರೆಯಿಂದ ಬೆಳ್ಳಿತೆರೆಗೆ ಹಾರಿದರೂ ಮತ್ತೆ ಕಿರುತೆರೆಯೊಂದಿಗೆ ಚೆನ್ನಾಗಿ ನಂಟು ಇಟ್ಟುಕೊಂಡಿರುವ ಅದೆಷ್ಟೋ ನಟರು ಇಂದು ನಮ್ಮೊಂದಿಗಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡರೂ ನಂತರ ಒಳ್ಳೊಳ್ಳೆಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡುವ ಉದಾಹರಣೆಗಳೂ ಇವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿದ್ದ ಅರ್ಜುನ್ ಯೋಗೇಶ್ ಮನೋ ನಟನೆಯ ಮೂಲಕ ಮನ ಸೆಳೆದ ಹ್ಯಾಂಡ್ ಸಮ್ ಹುಡುಗ.

ಕಾಲೇಜಿನಿಂದಲೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ ಇದ್ದ ಇವರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಾ ತಮ್ಮ ಪ್ರತಿಭೆಯನ್ನು ಎಲ್ಲರ ಮುಂದೆ ಪ್ರಸುರ ಪಡಿಸುತ್ತಾ ಬಂದರು.

Arjun Yogeshs long drive from small screen to silver screen!

ಬಿಇ ಓದುತ್ತಿರುವಾಗಲೇ ಹಿರಿಯ ಕಲಾವಿದೆ ಕಲ್ಯಾಣಿ ಪ್ರದೀಪ್ ಅವರ ತಂಡದ ತಂಡದಿಂದ ಮೂರು ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ನಾಟಕ ಮೈಮ್ ಶೋ ಹೀಗೆ ಬೇರೆ ಬೇರೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಇವರು ಮುಂದೆ ಕಿರುತೆರೆಗೆ ಕಾಲಿಟ್ಟರು.

'ಚಲಿಸುವ ಮೋಡಗಳು', 'ಅಮ್ಮ ನಿನಗಾಗಿ', ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲೇ ಕಾಣಿಸಿಕೊಂಡು ತಮ್ಮ ಅಭಿನಯದ ಮೂಲಕ ಜನರ ಮನ ಗೆದ್ದರು. ನಂತರ 'ಅಕ್ಕ' ಎಂಬ ಧಾರಾವಾಹಿಯಿಂದ ಬಹಳ ಪಾಪ್ಯುಲರ್ ಆದ ಅರ್ಜುನ್ ಯೋಗೇಶ್ 'ಮದುವೆಯ ಮಮತೆಯ ಕರೆಯೋಲೆ' ಎಂಬ ಸಿನಿಮಾದಲ್ಲಿ ಸೆಕೆಂಡ್ ಹೀರೊ ಆಗಿ ಕಾಣಿಸಿಕೊಂಡಿದ್ದರು.

Arjun Yogeshs long drive from small screen to silver screen!

ಹಾಗೆಯೇ 'ಏನೆಂದು ಹೆಸರಿಡಲಿ', 'ನನ್ನ ಪ್ರಕಾರ' ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು 'ಲಾಂಗ್ ಡ್ರೈವ್' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಹ್ಯಾಂಡ್ ಸಮ್ ಹುಡುಗ ಮತ್ತೆ ಕಿರುತೆರೆಯತ್ತ ಮರಳುತ್ತಾರಾ? ಅನ್ನೋ ಕುತೂಹಲವಿದೆ.

More from Filmibeat

English summary
Arjun Yogesh, who won hearts with his charming acting, is currently busy on the big screen,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X