ಲೈಂಗಿಕ ಕಿರುಕುಳ : ನಟ ಅರ್ಮಾನ್ ಕೊಹ್ಲಿ ಬಂಧನ
ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ಅವರಿಗೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ಮಾಡಿದ ಆರೋಪದ ಮೇಲೆ ನಟ ಅರ್ಮಾನ್ ಕೊಹ್ಲಿ ಅವರನ್ನು ಲೋನಾವಾಲಾ ಪೊಲೀಸರು ಸೋಮವಾರ (ಡಿ.16) ರಾತ್ರಿ ಬಂಧಿಸಿದ್ದಾರೆ. ಈ ಘಟನೆ ನಡೆದಿರುವುದು ಕಲರ್ಸ್ ವಾಹಿನಿಯ 'ಬಿಗ್ ಬಾಸ್ 7' ರಿಯಾಲಿಟಿ ಶೋನಲ್ಲಿ.
ಮಂಗಳವಾರ ವಾಡಗಾನ್ ಮಾವಲ್ ನ್ಯಾಯಾಲಯಕ್ಕೆ ಅರ್ಮಾನ್ ಅವರನ್ನು ವಿಚಾರಣೆಗೆ ಕರೆದೊಯ್ಯಲಾಗುತ್ತಿದೆ. ಅರ್ಮಾನ್ ಹಾಗೂ ಸೋಫಿಯಾ ಇಬ್ಬರೂ ಬಿಗ್ ಬಾಸ್ ನ ಸ್ಪರ್ಧಿಗಳು. ತನಗೆ ಲೈಂಗಿಕ ಕಿರುಕುಳ ಮತ್ತು ಹಲ್ಲೆ ನಡೆಸಿದ್ದಾನೆ ಎಂದು ಸೋಫಿಯಾ ಆರೋಪಿಸಿದ್ದರು. [ಇನ್ನಷ್ಟು ಬಿಗ್ ಬಾಸ್ ಸುದ್ದಿಗಳು]

ಡಿಸೆಂಬರ್ 4ರಂದು ಲೋನಾವಾಲಾದಲ್ಲಿರುವ 'ಬಿಗ್ ಬಾಸ್' ಮನೆಯಲ್ಲಿ ಅರ್ಮಾನ್ ತನ್ನ ಮೇಲೆ ಧೂಳು ಕೊಡಹುವ ಕಟ್ಟಿಗೆಯಲ್ಲಿ ಹಲ್ಲೆ ಮಾಡಿದ. ಅದರ ಜೊತೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದೂ ಸೋಫಿಯಾ ದೂರಿನಲ್ಲಿ ತಿಳಿಸಿದ್ದಾರೆ. [ಪೊರಕೆಗೆ ಭಾರೀ ಬೇಡಿಕೆ]
ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದು 'ಬಿಗ್ ಬಾಸ್' ನ ಅನ್ ಎಡಿಟೆಡ್ ವಿಡಿಯೋಗಳನ್ನು ತರಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೊಹ್ಲಿ ವಿರುದ್ಧ ಯಾವುದೇ ಕ್ರಮಕೈಗೊಳ್ಳುವ ಮುನ್ನ ವಿಡಿಯೋಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











