ಅಫ್ಘಾನಿಸ್ತಾನದ ಕ್ರಿಕೆಟರ್ ಜೊತೆ ನಿಶ್ಚಿತಾರ್ಥ: ಭಯದಲ್ಲಿ ನಟಿ ಆರ್ಶಿ ಖಾನ್

By ಫಿಲ್ಮಿಬೀಟ್ ಡೆಸ್ಕ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಆಡಳಿತ ಪ್ರಾರಂಭವಾಗಿದೆ. ಉಗ್ರರ ಆಳ್ವಿಕೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಉಗ್ರರು ಅಫ್ಘಾನಿಸ್ತಾನವನ್ನು ಕಬ್ಜ ಮಾಡುತ್ತಿದ್ದಂತೆ ಅಲ್ಲಿಂದ ಅನೇಕ ಮಂದಿ ಕಾಲ್ತಿದ್ದಾರೆ. ಸಾವಿರಾರು ಮಂದಿ ದೇಶ ತೊರೆದಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಭೀಕರ ಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಒಮ್ಮೆಗೆ ಜಮಾಯಿಸಿದ್ದ ಜನ, ವಿಮಾನ ಏರಲು ಮುಗಿಬಿದ್ದ ಸಾವಿರಾರು ಮಂದಿ, ಸಾವು ನೋಡಿ ಇಡೀ ದೇಶವೇ ಬೆಚ್ಚಿಬೆದ್ದಿತ್ತು.

ತಾಲಿಬಾನಿಗಳು ತಮಗೆ ಬೇಕಾದ ಹಾಗೆ ನಿಮಯಗಳನ್ನು ಮಾಡಿಕೊಂಡು ಆಡಳಿತ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರೆನ್ನದೇ ಬೀದಿ ಬೀದಿಗಳಲ್ಲಿ ಗುಂಡಿಟ್ಟು ಸಾಯಿಸುತ್ತಿದ್ದಾರೆ. ಮಹಿಳೆಯರ ಸ್ಥಿತಿ ಭೀಕರವಾಗಿದೆ. ಅಲ್ಲಿನ ಕೆಟ್ಟ ಪರಿಸ್ಥಿತಿಗೆ ಭಾರತದ ಅನೇಕ ಕಲಾವಿದರು ಪ್ರತಿಕ್ರಿಯೆ ನೀಡಿ ಅಲ್ಲಿನ ಜನರಿಗಾಗೆ ಪ್ರಾರ್ಥನೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಈ ನಡುವೆ ಹಿಂದಿ ಕಿರುತೆರೆಯ ಖ್ಯಾತ ನಟಿ ಆರ್ಶಿ ಖಾನ್ ತನ್ನ ಮದುವೆ ಮುರಿದು ಬೀಳುವ ಭಯದಲ್ಲಿದ್ದಾರೆ. ನಟಿ ಆರ್ಶಿ ಖಾನ್ ಅಫ್ಘಾನಿಸ್ತಾನ ಕ್ರಿಕೆಟರ್ ಜೊತೆ ಮದುವೆ ಫಿಕ್ಸಾ ಆಗಿತ್ತು. ನಿಶ್ಚಿತಾರ್ಥದ ತಯಾರಿಯಲ್ಲಿದ್ದರು. ಆದರೆ ಅಷ್ಟರಲ್ಲೇ ಅಫ್ಘಾನಿಸ್ತಾನದ ಸಿತ್ಥಿ ಭೀಕರವಾಗಿದೆ. ತಾಲಿಬಾನ್ ಉಗ್ರರ ಸೆರೆಯಲ್ಲಿರುವ ಅಫ್ಘಾನಿಸ್ತಾನಕ್ಕೆ ಮಗಳನ್ನು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದು, ಮದುವೆಯನ್ನೇ ನಿಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

Arshi Khan fears her family will call off her engagement with Afghan cricketer

ಈ ಬಗ್ಗೆ ನಟಿ ಆರ್ಶಿ ಭಯ ವ್ಯಕ್ತಪಡಿಸಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಜೊತೆ ಮಾತನಾಡಿರುವ ನಟಿ ಆರ್ಶಿ ಖಾನ್, "ನಾನು ಅಕ್ಟೋಬರ್ ನಲ್ಲಿ ಅಫ್ಘಾನಿಸ್ತಾನದ ಕ್ರಿಕೆಟರ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೆ. ನನ್ನ ತಂದೆ ಆಯ್ಕೆ ಮಾಡಿದ ಹುಡುಗ. ಆದರೀಗ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ನಾವು ಈ ಸಂಬಂಧವನ್ನು ಕೊನೆಗೊಳಿಸಬೇಕಾಗಿದೆ" ಎಂದು ಬೇಸರ ವ್ಯಕ್ತಪಡಸಿದ್ದಾರೆ.

ತಂದೆ-ತಾಯಿ ಹುಡುಕಿದ ಹುಡುಗ. ಅಪ್ಘಾನಿಸ್ತಾನದ ಭೀಕರ ಪರಿಸ್ಥಿತಿಯ ನಡುವೆಯೂ ಆರ್ಶಿ ಭಾವಿ ಪತಿ ಜೊತೆ ಸಂಪರ್ಕದಲ್ಲಿದ್ದಾರಂತೆ. ಆದರೆ ಪೋಷಕರು ಮದುವೆ ನಿಲ್ಲಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಆರ್ಶಿ ಹೇಳಿದ್ದಾರೆ. "ನನ್ನ ತಂದೆಯ ಸ್ನೇಹಿತನ ಮಗ. ನಾವು ಕೂಡ ಮಾತನಾಡುತ್ತಿದ್ದೇವೆ. ಸ್ನೇಹಿತರಂತೆ ಇದ್ದೆವು. ಆದರೆ ಈಗ ನನ್ನ ಪೋಷಕರು ಭಾರತೀಯ ಹುಡುಗನನ್ನು ಹುಡುಕುತ್ತಿದ್ದಾರೆ" ಎಂದು ದುಃಖ ತೋಡಿಕೊಂಡಿದ್ದಾರೆ.

ತನ್ನ ಕುಟುಂಬದ ಬೇರುಗಳು ಅಫ್ಘಾನಿಸ್ತಾನದಲ್ಲಿದೆ ಎಂದು ಆರ್ಶಿ ಹೇಳಿದ್ದಾರೆ. "ನಾನು ಅಫ್ಘಾನಿ ಪಠಾಣ್. ನನ್ನ ಕುಟುಂಬ ಯೂಸುಫ್ ಜಾಯ್ ಜನಾಂಗಕ್ಕೆ ಸೇರಿದೆ. ನನ್ನ ಅಜ್ಜ ಅಫ್ಘಾನಿಸ್ತಾನದಿಂದ ವಲಸೆ ಬಂದಿದ್ದರು. ಭೋಪಾಲ್ ನಲ್ಲಿ ಜೈಲರ್ ಆಗಿದ್ದರು. ನನ್ನ ಬೇರುಗಳು ಅಪ್ಘಾನಿಸ್ತಾನದಲ್ಲಿವೆ. ಆದರೆ ನಾನು ಮತ್ತು ನನ್ನ ಪೋಷಕರು ಈಗ ಭಾರತೀಯ ನಾಗರೀಕರಾಗಿದ್ದೇವೆ" ಎಂದು ಹೇಳಿದ್ದಾರೆ.

ಹಿಂದಿ ಕಿರುತೆಯಲ್ಲಿ ಪ್ರಖ್ಯಾತಿಗಳಿಸಿರುವ ನಟಿ ಆರ್ಶಿ ಖಾನ್ ಬಿಗ್ ಬಾಸ್ ನಲ್ಲೂ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 11ರಲ್ಲಿ ಆರ್ಶಿ ಖಾನ್ ಭಾಗಿಯಾಗಿದ್ದರು. ಸೀಸನ್ 14ರಲ್ಲಿ ಮತ್ತೆ ರಿ ಎಂಟ್ರಿ ಕೊಡುವ ಮೂಲಕ ಬಿಗ್ ಬಾಸ್ ಪ್ರೇಕ್ಷಕರ ಮುಂದೆ ಬಂದಿದ್ದರು. ಬಿಗ್ ಬಾಸ್ ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಆರ್ಶಿ ಭಾಗಿಯಾಗಿದ್ದರು. ಸಾವಿತ್ರಿ ದೇವಿ ಕಾಲೇಜ್ ಅಂಡ್ ಹಾಸ್ಪಿಟಲ್, ವಿಶ್, ಇಷ್ಕ್ ಮೇನ್ ಮರ್ಜಾವನ್ ಸೇರಿದಂತೆ ಅನೇಕ ಟಿವಿ ಸೀರಿಸ್ ಗಳಲ್ಲಿ ಆರ್ಶಿ ಕಾಣಿಸಿಕೊಂಡಿದ್ದಾರೆ. ಅನೇಕ ಮ್ಯೂಸಿಕ್ ವಿಡಿಯೋಗಳಲ್ಲೂ ಆರ್ಶಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Arshi Khan fears her family will call off her engagement with Afghan cricketer due to Taliban crisis in Afghanistan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X