ಬಿಗ್ ಬಾಸ್ ಸ್ಪರ್ಧಿ ಬಳಿ ಸಿಕ್ಕಿತ್ತಂತೆ ಕಾಂಡೋಮ್

By Bharath Kumar

Recommended Video

Bigg Boss contestant had Condom! | ಬಿಗ್ ಬಾಸ್ ಸ್ಪರ್ಧಿ ಬಳಿ ಇತ್ತು ಕಾಂಡೋಮ್! | Filmibeat Kannada

ಬಿಗ್ ಬಾಸ್ ಸ್ಪರ್ಧಿಯೊಬ್ಬರ ಬಳಿ ಕಾಂಡೋಮ್ ಸಿಕ್ಕಿತ್ತಂತೆ. ಹೀಗಂತಾ ಬೇರೆ ಯಾರೂ ಹೇಳಿಲ್ಲ. ಸ್ವತಃ ಆ ನಟಿಯೇ ಈ ವಿಚಾರವನ್ನ ಬಿಗ್ ಬಾಸ್ ಮನೆಯಲ್ಲಿ ಬಹಿರಂಗಪಡಿಸಿದ್ದಾರೆ. ಇದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.

ಹೌದು, ಹಿಂದಿ ಬಿಗ್ ಬಾಸ್ ಮನೆಯಲ್ಲಿ ಯಾವುದೇ ವಿವಾದ ಜಗಳ ಇಲ್ಲದೇ ವೈಯಕ್ತಿಕ ವಿಚಾರದಲ್ಲಿ ಗಮನ ಸೆಳಯುತ್ತಿರುವ ಸ್ಪರ್ಧಿ, ತನ್ನ ಜೀವನದಲ್ಲಿ ನಡೆದ ಒಂದು ಮುಜುಗರದ ಘಟನೆಯನ್ನ ಬಿಚ್ಚಿಟ್ಟಿದ್ದಾರೆ.

ಈಗಾಗಲೇ ಬಿಗ್ ಬಾಸ್ ಮನೆಯೊಳಗೆ ಕಿಸ್, ರೊಮ್ಯಾನ್ಸ್, ತಬ್ಬಿಕೊಳ್ಳುವುದು, ಒಂದೇ ಬೆಡ್ ಜೋಡಿಗಳು ಮಲಗುವುದರ ಮೂಲಕ ಫ್ಯಾಮಿಲಿ ಆಡಿಯೆನ್ಸ್ ಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಮಧ್ಯೆ ಈಗ ಹೊಸದೊಂದು ಕಥೆ. ಅಷ್ಟಕ್ಕೂ, ಕಾಂಡೋಮ್ ಕಥೆ ಹೇಳಿಕೊಂಡ ಆ ನಟಿ ಯಾರು? ಎಂದು ಮುಂದೆ ಓದಿ......

ಅರ್ಶಿ ಖಾನ್ ಹೇಳಿದ ಕಾಂಡೋಮ್ ಕಥೆ

ಅರ್ಶಿ ಖಾನ್ ಹೇಳಿದ ಕಾಂಡೋಮ್ ಕಥೆ

ಬಿಗ್ ಬಾಸ್ ಹಿಂದಿ ಕಾರ್ಯಕ್ರಮದ ಅನ್ ಸೀನ್ ಎಪಿಸೋಡ್ ನಲ್ಲಿ ಸಹ ಸ್ಪರ್ಧಿ, ವಿಕಾಸ್ ಗುಪ್ತಾ ಮತ್ತು ಪುನೀಶ್ ಶರ್ಮಾ ಅವರ ಬಳಿ ಅರ್ಶಿ ಖಾನ್ ಈ ಘಟನೆ ಹೇಳಿದ್ದಾರೆ. ತನ್ನ ಕೋಣೆಯಲ್ಲಿ ಅಪ್ಪನ ಕಣ್ಣಿಗೆ ಕಾಂಡೋಮ್ ಸಿಕ್ಕಾಗ, ಯಾವ ರೀತಿ ಸುಳ್ಳು ಹೇಳಬೇಕಾಯಿತು ಎಂದು ಘಟನೆ ವಿವರಿಸಿದರು.

ನನ್ನ ರೂಂಮಿಗೆ ಅಪ್ಪ ಬಂದಾಗ

ನನ್ನ ರೂಂಮಿಗೆ ಅಪ್ಪ ಬಂದಾಗ

ಒಮ್ಮೆ ಮುಂಬೈನಲ್ಲಿ ನಾನು ವಾಸವಾಗಿದ್ದ ನನ್ನ ಫ್ಲಾಟ್ ಗೆ ನಮ್ಮ ಅಪ್ಪ ಬಂದಿದ್ದರು. ಆ ಸಮಯದಲ್ಲಿ ನಾನು ಮನೆಯಿಂದ ಹೊರಗೆ ಹೋಗಿದ್ದೇ. ಈ ವೇಳೆ ನನ್ನ ರೂಂಮಿನಲ್ಲಿ ಅಪ್ಪನಿಗೆ ಕಾಂಡೋಮ್ ಪ್ಯಾಕೆಟ್ ಸಿಕ್ಕಿದೆ. ಆಗ ಸಡನ್ ಆಗಿ ನನಗೆ ಅಮ್ಮನಿಂದ ಫೋನ್ ಬಂತು. ಏನಿದು, ಏನ್ ಮಾಡ್ತಿದ್ದೀಯಾ? ಎಂದು ಕೇಳಿದರು.

ಸ್ನೇಹಿತೆ ಮೇಲೆ ಆರೋಪ ಮಾಡಿದ್ದೆ

ಸ್ನೇಹಿತೆ ಮೇಲೆ ಆರೋಪ ಮಾಡಿದ್ದೆ

ಆ ದಿನ ರಾತ್ರಿ ನಾನು ಮನೆಗೆ ಹೋಗಲಿಲ್ಲ. ಮರು ದಿನ ಬೆಳಿಗ್ಗೆ ನನ್ನ ಸ್ನೇಹಿತೆಯನ್ನ ಕರೆದುಕೊಂಡು ಮನೆಗೆ ಹೋದೆ. ಅಪ್ಪನಿಗೆ ಅದು ಇವಳದ್ದು. ನನ್ನದಲ್ಲ ಎಂದು ಹೇಳಿ ಸ್ನೇಹಿತೆಯಿಂದ ಕ್ಷಮೆ ಕೇಳಿಸಿದ್ದೆ ಎಂದು ಹೇಳಿಕೊಂಡರು.

ತಂದೆ ಮಾತು ಬಿಟ್ಟಿದ್ದರಂತೆ

ತಂದೆ ಮಾತು ಬಿಟ್ಟಿದ್ದರಂತೆ

ಇನ್ನು ಇದೇ ವಿಚಾರಕ್ಕೆ ಮತ್ತೆ ಅರ್ಶಿ ಖಾನ್ ಅಪ್ಪನಿಗೆ ಸಿಕ್ಕಿಬಿದ್ದಾಗ, ಎರಡು ಮೂರು ತಿಂಗಳು ಅವರ ತಂದೆ, ಅರ್ಶಿ ಬಳಿ ಮಾತು ಬಿಟ್ಟಿದ್ದರು'' ಎಂದು ಜೀವನದಲ್ಲಿ ನಡೆದ ಘಟನೆಯನ್ನ ನೆನಸಿಕೊಂಡರು.

ಸತ್ಯ ಬಿಚ್ಚಿಟ್ಟ ಸ್ನೇಹಿತೆ

ಸತ್ಯ ಬಿಚ್ಚಿಟ್ಟ ಸ್ನೇಹಿತೆ

ಆದ್ರೆ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅರ್ಶಿ ಖಾನ್ ಸ್ನೇಹಿತೆ (ಭೋಜ್ ಪುರಿ ನಟಿ) ಖಾಸಗಿ ಸಂದರ್ಶನವೊಂದರಲ್ಲಿ ಸತ್ಯ ಹೇಳಿದ್ದರಂತೆ. ಅರ್ಶಿ ಖಾನ್ ಮಾಡಿದ ತಪ್ಪಿಗೆ ಅವರ ತಂದೆಯ ಬಳಿ ನಾನು ಕ್ಷಮೆ ಕೇಳಿದ್ದೆ, ನಾನು ಮಾಡದ ತಪ್ಪಿಗೆ ನಮ್ಮ ಮೇಲೆ ಆಪಾದನೆ ಹಾಕಿಕೊಂಡಿದ್ದೇ'' ಎಂದು ನಿಜ ಹೇಳಿಕೊಂಡಿದ್ದಳು ಎಂದು ಅರ್ಶಿ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ.

More from Filmibeat

English summary
Bigg Boss 11 contestant Arshi Khan reveals what happened when her father found condoms in her cupboard.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X