For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಸೀಸನ್ 9: ಮೊದಲ ಸೀಸನ್‌ನ ಪ್ರಮುಖ ಸ್ಪರ್ಧಿ ಸೇರಿ ಸಂಭಾವ್ಯ ಪಟ್ಟಿಗೆ ಇಬ್ಬರ ಸೇರ್ಪಡೆ

  |

  42 ದಿನಗಳ ಕಾಲ ನಡೆದ ಬಿಗ್ ಬಾಸ್ ಓಟಿಟಿ ಸೀಸನ್ ಮುಕ್ತಾಯಗೊಂಡ ನಂತರ ಓಟಿಟಿ ಸೀಸನ್‌ನ ಟಾಪರ್ ರೂಪೇಶ್ ಶೆಟ್ಟಿ ಸೇರಿದಂತೆ ರಾಕೇಶ್ ಅಡಿಗ, ಆರ್ಯವರ್ಧನ್ ಹಾಗೂ ಸಾನ್ಯಾ ಅಯ್ಯರ್ ಈ ನಾಲ್ವರು ಓಟಿಟಿಯಿಂದ ನೇರವಾಗಿ ಟಿ ವಿ ಸೀಸನ್‌ಗೆ ಪ್ರವೇಶ ಪಡೆದುಕೊಂಡರು. ಈ ನಾಲ್ವರ ಜತೆಗೆ ಹಳೆಯ ಬಿಗ್ ಬಾಸ್ ಆವೃತ್ತಿಗಳಲ್ಲಿ ಭಾಗಿಯಾಗಿದ್ದವರು ಈ ಬಾರಿಯ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎನ್ನಲಾಗಿತ್ತು.

  ಹೀಗೆ ಬಿಗ್ ಬಾಸ್ ಟಿವಿ ಸೀಸನ್‌ನ ಪ್ರೋಮೊ ಬಿಡುಗಡೆಯಾದಾಗ ಯಾವ ಸ್ಪರ್ಧಿಗಳು ಮನೆಗೆ ಪ್ರವೇಶಿಸಬಹುದು ಎಂಬ ಕೆಲ ಸುಳಿವುಗಳನ್ನು ನೀಡಲಾಗಿತ್ತು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಚರ್ಚೆಗಳು ಏರ್ಟಪ್ಟು ಯಾವ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಮನೆಗೆ ಪ್ರವೇಶ ಪಡೆದುಕೊಳ್ಳಬಹುದು ಎಂಬ ಊಹೆಗಳು ನಡೆದಿದ್ದವು ಹಾಗೂ ಯಾರು ಪ್ರವೇಶಿಸಿದರೆ ಮನರಂಜನೆ ಹೆಚ್ಚಿರಲಿದೆ ಎಂಬ ಅಭಿಪ್ರಾಯಗಳನ್ನೂ ಸಹ ನೆಟ್ಟಿಗರು ವ್ಯಕ್ತಪಡಿಸಿದ್ದರು.

  BBK9 ಸಿದ್ಧತೆ ಬಹುತೇಕ ಅಂತ್ಯ: ಹೇಗಿದೆ ಈ ಬಾರಿಯ ಬಿಗ್ ಬಾಸ್ ಮನೆ..?BBK9 ಸಿದ್ಧತೆ ಬಹುತೇಕ ಅಂತ್ಯ: ಹೇಗಿದೆ ಈ ಬಾರಿಯ ಬಿಗ್ ಬಾಸ್ ಮನೆ..?

  ಇನ್ನು ಬಿಗ್ ಬಾಸ್ ಸೀಸನ್ ಒಂದರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಅರುಣ್ ಸಾಗರ್ ಹಾಗೂ ಏಳನೇ ಬಿಗ್ ಬಾಸ್‌ನ ಸ್ಪರ್ಧಿ ದೀಪಿಕಾ ದಾಸ್ ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಬಾರಿಯ ಬಿಗ್ ಬಾಸ್‌ಗಾಗಿ ಬಿಡುಗಡೆ ಮಾಡಲಾಗಿದ್ದ ಪ್ರೋಮೊದಲ್ಲಿ ದೀಪಿಕಾ ದಾಸ್ ಕೂಡ ಕಾಣಿಸಿಕೊಂಡದ್ದು ಈ ಮೊದಲೇ ಸೂಚನೆ ನೀಡಿದಂತಿತ್ತು. ಸದ್ಯ ಅರಣ್ ಸಾಗರ್ ಹೆಸರೂ ಸಹ ಕೇಳಿಬರುತ್ತಿದ್ದು, ಮನೆಯಲ್ಲಿ ಮನರಂಜನೆ ಹೆಚ್ಚಿರಲಿದೆ ಎನ್ನಬಹುದು.

  English summary
  Bigg boss old contestants Arun Sagar and Deepika Das likely to enter Bigg Boss Kannada season 9

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X