ಅರುಣ್, ಚಂದ್ರಿಕಾ ಐಸ್ ಪೈಸ್ ಬಿಚ್ಚಿಟ್ಟ ಸುದೀಪ್
ತುಲಾಭಾರ ಟಾಸ್ಕ್ ನಲ್ಲಿ ಅಹರ್ನಿಶಿ ಶ್ರಮಿಸಿದ ಚಂದ್ರಿಕಾ ಮತ್ತು ನಿಕಿತಾ ಅವರ ಬೆನ್ನುತಟ್ಟಿದರು ಸುದೀಪ್. ಬೋತ್ ಆಫ್ ಯು ಡಿಡ್ ಎ ಫೆನ್ಟಾಸ್ಟಿಕ್ ಜಾಬ್ ಎಂದರು. ಬಳಿಕ ಅವರ ಮಾತು ಅರುಣ್ ಸಾಗರ್ ಹಾಗೂ ಚಂದ್ರಿಕಾ ಅವರ ಐಸ್ ಪೈಸ್ ಕಡೆಗೆ ಹೊರಳಿತು.
ಹೌದು ಯಾಕೆ ನೀವಿಬ್ಬರೂ ಒಬ್ಬರಿಗೊಬ್ಬರು ಅಷ್ಟೋಂದು ಹತ್ತಿರವಾಗಿದ್ದಿರಿ. ವೆದರ್ ಬೇರೆ ಚೆನ್ನಾಗಿತ್ತು. ಚಳಿ ಆಗುತ್ತಿತ್ತು. ಆಲ್ ಮೋಸ್ಟ್ ನೀವು ಅರುಣ್ ಸಾಗರ್ ಮೇಲೆ ಕುಳಿತುಬಿಟ್ಟಿದ್ರಿ ಚಂದ್ರಿಕಾ ಅವರೇ. ಒಬ್ಬರ ಮೇಲೆ ಒಬ್ಬರು ಕುಳಿತುಕೊಳ್ಳುವುದು ಏನಿತ್ತಪ್ಪಾ ಎಂದು ನಾನು ಕೇಳುತ್ತಿಲ್ಲ. ನಮ್ಮ ವೀಕ್ಷಕರು ಕೇಳುತ್ತಿದ್ದಾರೆ. ಏನ್ ವಿಶೇಷ ಅರುಣ್ ಸಾಗರ್ ಅವರೇ ಎಂದರು.

ಬಳಿಕ ಮಾತಿಗೆ ಇಳಿದ ಚಂದ್ರಿಕಾ ಅನುಮಾನವನ್ನು ಕ್ಲಿಯರ್ ಮಾಡಲು ಪ್ರಯತ್ನಿಸಿದರು, "ಹಾಗೇನು ಇಲ್ಲ. ತುಂಬಾ ಹೊತ್ತು ತಕ್ಕಡಿ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ನನಗೆ ಅವರ ಶೋಲ್ಡರ್ ಸಪೋರ್ಟ್ ಬೇಕಾಗಿತ್ತು..." ಎಂದು ಹೇಳುತ್ತಿದ್ದಂತೆ ನಡುವೆ ಬಾಯಿ ಹಾಕಿದ ಸುದೀಪ್, ಅದೇ ಸಮಯಕ್ಕೆ ಭಗವಂತ ಮಳೆ ಬೇರೆ ಸುರಿಸಿದ ಅಲ್ವಾ. ಅಲ್ಲಾರಿ ತಕ್ಕಡಿಯನ್ನು ಇಬ್ಬರು ವ್ಯಕ್ತಿಗಳು ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡಿಸಿದ್ದೆವು ಆದರೂ ನೀವು...ಎಂದು ಹಾಸ್ಯ ಚಟಾಕಿ ಸಿಡಿಸಿದರು.


Click it and Unblock the Notifications











